ತುಮಕೂರು
ಅನಿಯಮಿತ ಲೋಡ್ ಶೆಡ್ಡಿಂಗ್ ಖಂಡಿಸಿ ಬೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿನಿಯರ್ ಕಚೇರಿ ಎದುರು ಬಿಜೆಪಿ ಮುಖಂಡರು, ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.
ಶಾಸಕ ಸುರೇಶ್ ಗೌಡ, ಬಿಜೆಪಿ ಜಿಲ್ಲಾ ಧ್ಯಕ್ಷ ಹೆಬ್ಬಾಕರವಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಗಳಿಗೆ ಹಣ ಹೊಂದಿಸಲು ಮುಂದಾಗಿ ರೈತರನ್ನು ಜನರ ಬದುಕನ್ನು ಕತ್ತಲೆ ಗೆ ದೂಡಿದೆ. ವಿದ್ಯುತ್ ಖರೀದಿ ಮಾಡಿ ಪೂರೈಸಲು ಸರ್ಕಾರದ ಬಳಿ ಹಣವೇ ಇಲ್ಲದಂತಾಗಿದೆ ಎಂದರು.
ರೈತರಿಗೆ ಕೊಟ್ಟ ಮಾತಿನಂತೆ ಏಳು ಗಂಟೆ ಅನಿಯಮಿತ ಕರೆಂಟ್ ಕೊಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.ಪಕ್ಷದ ಮುಖಂಡ ರಾದ ಎಂ. ಬಿ. ನಂದೀಶ್, ಶಿವಪ್ರಸಾದ್, ಸ್ಪೂರ್ತಿ ಚಿದಾನಂದ್, ಬಿದರೆ, ಚಂದ್ರ ಶೇಖರ್, ಬಾವಿಕಟ್ಟೆ ನಾಗಣ್ಣ, ಹನುಮಂತರಾಜು ಸೇರಿದಂತೆ ಹಲವು ಮುಖಂಡ ರು ಪಾಲ್ಗೊಂಡರು. ನಂತರ ಡಿಸಿ ಕಚೇರಿ ಗೆ ತೆರಳಿ ಮನವಿ ಸಲ್ಲಿಸಿ ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ