ತುಮಕೂರು
ನಗರದಲ್ಲಿ ಬೆಸ್ಕಾಂ ಇಲಾಖೆ ಯಿಂದ ಮರಗಳಿಗೆ ಮನಸೋ ಇಚ್ಛೆ ಕೊಡಲಿಹಾಕುತ್ತಿದ್ದು, ಮರಗಳ ಮಾರಣಹೋಮ ನಡೆಯುತ್ತಿದೆ.
ವಿದ್ಯುತ್ ಕಂಬಗಳ ಲೈನ್ಗಗಳಿಗೆ ತಾಗಿಕೊಂಡ ಜಂಗ್ಲಿ ತೆರವುಗೊಳಿಸುವ ನೆಪದಲ್ಲಿ ಮರಗಳ ರೆಂಬೆ ಕೊಂಬೆ, ಕಾಂಡವನ್ನೇ ಕತ್ತರಿಸುತ್ತಿದ್ದು, ನಗರದ ಹನುಮಂತಪುರ ಬಳಿಯ ಹೆದ್ದಾರಿ ಆಚೆ ಗಿನ ಬಡಾವಣೆ ಯಲ್ಲಿ ಈ ದುಷ್ಕೃತ್ಯ ವೆಸಗಲಾಗಿದೆ.
ಈ ಬಗ್ಗೆ ಸ್ಥಳೀಯ ನಿವಾಸಿ ಗಳು ಮಾಧ್ಯಮ ದವರು ಬೆಸ್ಕಾಂ ಎಇಇ ಬಳಿ ದೂರಿದರೆ ಏನು ಬೇಕಾದರೂ ಮಾಡ್ಕೊಳಿ ಅಂಥಾ ಮರಗಳ ಮಾರಣಹೋಮ ಸಮರ್ಥಿಸುತ್ತಿದ್ದು, ಆಡಳಿತ ದ ಪರಿಸರ ಕಾಳಜಿ ಇದೇನಾ ಎಂದು ಪ್ರಶ್ನಿಸುವಂತೆ ಮಾಡಿದೆ.
ಇತ್ತೀಚೆಗಷ್ಟೇ ಪರಿಸರ ದಿನಾಚರಣೆ ಆಚರಿಸಿ ಐದು ಕೋಟಿ ವೃಕ್ಷ ಬೆಳೆಸುವ ಆಂದೋಲನ ಕ್ಕೆ ಅರಣ್ಯ ಸಚಿವರು ಮುಂದಾಗಿದ್ದರೆ, ಅವರದ್ದೇ ಸರ್ಕಾರ ದ ಬೇರೊಂದು ಇಲಾಖೆ ಯ ಅಧಿಕಾರಿಗಳು ಉದ್ದೇಶಕ್ಕೆ ತಿಲಾಂಜಲಿ ಬಿಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಮೊದಲೇ ಗಿಡಮರಗಳು ನಶಿಸಿ ಮಳೆ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಹೀಗೆ ಬೆಳೆದು ನಿಂತ ಮರಗಳನ್ನು ಕಡಿಯುತ್ತಾ ಹೋದರೆ ತಾಪಮಾನ ಹೆಚ್ಚಾಗಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ