ಗುಬ್ಬಿ ಟಿಕೆಟ್ ಮಿಸ್ : ಬೆಟ್ಟ ಸ್ವಾಮಿ ಜೆಡಿಎಸ್‌ ಸೇರ್ಪಡೆ

ತುಮಕೂರು

     ಬಿಜೆಪಿ ಎರಡನೇ ಪಟ್ಟಿಯಲ್ಲಿ ತಮಗೆ ಗುಬ್ಬಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಆಘಾತಕ್ಕೊಳಗಾದ ಹಿಂದುಳಿದ ವರ್ಗಗಳ ಮುಖಂಡ ಜಿ. ಎನ್. ಬೆಟ್ಟ ಸ್ವಾಮಿ ಅವರಿಗೆ ಬುಧವಾರ ಮಧ್ಯರಾತ್ರಿ ಹೃದಯಬೇನೆ ಕಾಣಿಸಿಕೊಂಡಿದ್ದು, ತುಮಕೂರಿಂದ ಸಿದ್ಧಗಂಗಾ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.

    ಮಧ್ಯ ರಾತ್ರಿ ಎರಡು ಗಂಟೆ ಸಮಯದಲ್ಲಿ ಕುಟುಂಬಸ್ಥರು ಬೆಟ್ಟ ಸ್ವಾಮಿ ಅವರನ್ನು ಆಸ್ಪತ್ರೆಗೆ ಕರೆತಂದಿದ್ದು ಹೃದಯಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಪರೀಕ್ಷೆ ಗೊಳಪಡಿಸಿ ಬೆಳಿಗ್ಗೆ ವರೆಗೆ ಚಿಕಿತ್ಸೆ ನೀಡಿದ್ದಾರೆ.
ಮಾನಸಿಕ ಕ್ಷೋಭೆ, ಒತ್ತಡ ದಿಂದ ಹೃದಯಬೇನೆ ಉಂಟಾಗಿದ್ದು, ಹೃದಯಾಘಾತವಲ್ಲ. ಬೆಳಿಗ್ಗೆ ಯವರೆಗೆ ಆಸ್ಪತ್ರೆಯಲ್ಲಿ ಉಳಿದು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ ಎಂದು ಆಸ್ಪತ್ರೆಯವರು ಖಚಿತಪಡಿಸಿದ್ದಾರೆ.

ವರಿಷ್ಠರ ಕರೆಯ ಆಘಾತ..?

      ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಜಿ. ಎನ್. ಬೆಟ್ಟ ಸ್ವಾಮಿಅವರ ಪಕ್ಷ ಯಾರಿಗೆ ಟಿಕೆಟ್ ನಡೆದರು ಬಿಜೆಪಿ ಗೆಲ್ಲಿಸಲು ಶ್ರಮಿಸುವುದಾಗಿ ಬೆಟ್ಟ ಸ್ವಾಮಿ ತಿಳಿಸಿದ್ದರು. ಬೆಟ್ಟ ಸ್ವಾಮಿ ಅವರ ಈ ಹೇಳಿಕೆ ಹಿಂ ದೆ ಪಕ್ಷದ ವರಿಷ್ಠ ರೊಬ್ಬರು ಕರೆ ಮಾಡಿ ನಿಮಗೆ ಟಿಕೆಟ್ ಕನ್ಫರ್ಮ್ ಆಗಿದೆ. ಆದರೆ ಘೋಷಣೆ ಗೂ ಮುನ್ನ ಟಿಕೆಟ್ ಪೈಪೋಟಿ ಯ ಪರಿಸ್ಥಿತಿ ತಿಳಿಗೊಳಿಸಲು ಈ ರೀತಿ ಹೇಳಿಕೆ ಕೊಡಿ ಎಂದು ನಿರ್ದೇಶಿಸಿದ್ದರು ಎಂದು ತಿಳಿದುಬಂದಿದೆ. ವರಿಷ್ಠರ ನಿರ್ದೇಶನದಂತೆ ಬೆಟ್ಟಸ್ವಾಮಿ ಅವರು ಹೇಳಿಕೆ ಕೊಟ್ಟಿದ್ದು ಹೇಳಿ ಕೆ ಕೊಟ್ಟ ಬೆನ್ನಿಗೆ ಟಿಕೆಟ್ ಕೈ ತಪ್ಪಿ ದಿಲೀಪ್ ಕುಮಾರ್ ಅವರಿಗೆ ದೊರೆತಿದ್ದು ಬೆಟ್ಟಸ್ವಾಮಿ ಅವರಿಗೆ ಆಘಾತ ಉಂಟು ಮಾಡಿದೆ ಎಂದು ಬಿಜೆಪಿ ವಲಯದಲ್ಲೇ ಚರ್ಚೆ ಯಾಗುತ್ತಿದೆ. ಈ ಮಧ್ಯೆ ಬೆಟ್ಟಸ್ವಾಮಿ ಅವರ ಹೇಳಿಕೆಯು ಒಳ ಒಪ್ಪಂದದ ಶಂಕೆಗೂ ಆಸ್ಪದ ಒದಗಿಸಿದ್ದು ಈ ಬೆಳವಣಿಗೆ ಗಳು ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರುವವೋ ಕಾದುನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link