ಬೆಟ್ಟಿಂಗ್ ಕೇಸ್‌; ಧವನ್‌, ರೈನಾ, ಉತ್ತಪ್ಪ, ಯುವಿ ಆಸ್ತಿ ಶೀಘ್ರ ಜಪ್ತಿ

ನವದೆಹಲಿ: 

     ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಗೇಮಿಂಗ್‌ ಪ್ಲಾಟ್‌ಫಾರ್ಮ್‌ಗೆ  ಸಂಬಂಧಿಸಿ ಜಾರಿ ನಿರ್ದೇಶನಾಲಯವು ಕೆಲ ಕ್ರೀಡಾಪಟುಗಳು ಹಾಗೂ ನಟ-ನಟಿಯರ ನೂರಾರು ಕೋಟಿ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಮುಟ್ಟುಗೋಲು ಹಾಕುವ ಸಾಧ್ಯತೆ ಇದೆ. ಈ ಪ್ರಕರಣ ಸಂಬಂಧ ಕಳೆದ ಕೆಲ ದಿನಗಳಿಂದ ಜಾರಿ ನಿರ್ದೇಶನಾಲಯವು ಕ್ರಿಕೆಟರ್‌ಗಳಾದ ಯುವರಾಜ್‌ ಸಿಂಗ್‌ , ಸುರೇಶ್‌ ರೈನಾ, ರಾಬಿನ್‌ ಉತ್ತಪ್ಪ, ಶಿಖರ್‌ ಧವನ್‌, ನಟರಾದ ಸೋನು ಸೂದ್‌, ಮಿಮಿ ಚಕ್ರವರ್ತಿ, ಅಂಕುಶ್‌ ಹಝಾರಾ ಅವರನ್ನು ತನಿಖೆಗೆ ಒಳಪಡಿಸಿದೆ.

   ಕುರಕಾವೋದಲ್ಲಿ ನೋಂದಣಿಯಾಗಿರುವ ‘1ಎಕ್ಸ್‌ಬೆಟ್‌’ ಕಂಪನಿಯು ಅಂತಾರಾಷ್ಟ್ರೀಯಮಟ್ಟದಲ್ಲಿ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದೆ. ಈ ಬೆಟ್ಟಿಂಗ್‌ ವೆಬ್‌ಸೈಟ್‌ ಹಾಗೂ ಆ್ಯಪ್‌ ಕುರಿತ ತನಿಖೆ ವೇಳೆ ಇದರ ಪರ ಪ್ರಚಾರಕ್ಕಾಗಿ ಹಲವು ಸೆಲೆಬ್ರಿಟಿಗಳು ಸಂಭಾವನೆ ಪಡೆದಿರುವುದು ಮತ್ತು ಆ ಸಂಭಾವನೆಯಲ್ಲಿ ಆಸ್ತಿಗಳನ್ನು ಖರೀದಿಸಿರವುದು ಬೆಳಕಿಗೆ ಬಂದಿತ್ತು. ಅಕ್ರಮ ಹಣ ವರ್ಗಾವಣೆ ಕಾನೂನಿನಡಿ ಈ ಆಸ್ತಿಯನ್ನು ಕ್ರಿಮಿನಲ್‌ ಚಟುವಟಿಕೆಗಳಿಂದ ಗಳಿಸಿದ ಆಸ್ತಿ ಎಂಬುದಾಗಿ ಪರಿಗಣಿಸಲು ಅ‍ವಕಾಶವಿದೆ ಎಂದು ಮೂಲಗಳು ತಿಳಿಸಿವೆ. 

   ಹೀಗಾಗಿ ಜಾರಿ ನಿರ್ದೇಶನಾಲಯವು ಶೀಘ್ರದಲ್ಲೇ ಯುವರಾಜ್‌, ಧವನ್‌, ರೈನಾ, ಉತ್ತಪ್ಪ ಸೇರಿ ಸೆಲೆಬ್ರಿಟಿಗಳ ಯುಎಇ ಸೇರಿ ವಿದೇಶದಲ್ಲಿರುವ ಆಸ್ತಿಗಳನ್ನೂ ಜಪ್ತಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಈ ಆಸ್ತಿಗಳ ಪ್ರಮಾಣೀಕರಣ ಹಾಗೂ ಮೌಲ್ಯ ನಿರ್ಣಯ ಕಾರ್ಯ ಈಗಾಗಲೇ ನಡೆಯುತ್ತಿದೆ. ಜಪ್ತಿ ಆದೇಶ ಹೊರಬಿದ್ದ ಬಳಿಕ ನ್ಯಾಯಾಲಯಕ್ಕೆ ಆ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಜಾರ್ಜ್‌ಶೀಟ್‌ ಹಾಕಲಾಗುತ್ತದೆ.

Recent Articles

spot_img

Related Stories

Share via
Copy link