ಐಪಿಲ್‌ ಗಿಂತಲೂ ಜೋರಾದ ಚುನಾವಣಾ BETTING…!

ಬೆಂಗಳೂರು: 

      ಚುನಾವಣಾ BETTING ಜೋರಾಗಿದ್ದು ಶನಿವಾರ ಚುನಾವಣಾ  ಫಲಿತಾಂಶ ಪ್ರಕಟವಾಗಲಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮೇಲೆ ಮತ್ತು ಯಾರು ಗೆಲ್ಲಬಹುದು ಎಂಬ ಬಗ್ಗೆ ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ.

  ಚುನಾವಣಾ  BETTING ಮಾರುಕಟ್ಟೆ ಹಾಗೂ ಸಟ್ಟಾ ಬಜಾರ್‌ಗಳು ಕಾಂಗ್ರೆಸ್‌ಗೆ 115ಕ್ಕೂ ಹೆಚ್ಚು ಸ್ಥಾನಗಳ ಸ್ಪಷ್ಟ ಬಹುಮತ ನೀಡುತ್ತಿದ್ದು, ಬಿಜೆಪಿ 70ಕ್ಕಿಂತ ಕಡಿಮೆ ಹಾಗೂ ಜೆಡಿಎಸ್‌ 30ಕ್ಕಿಂತ ಕಡಿಮೆ ಸ್ಥಾನ  ಪಡೆಯುತ್ತಿವೆ ಎಂದು ವಿಶ್ವಾಸಾರ್ಹ ಮೂಲವೊಂದು ಹೇಳಿದೆ. ಮತದಾನಕ್ಕೂ ಮುನ್ನ ಹಲವರು ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚಿನ ಬುಕ್‌ಮೇಕರ್‌ಗಳು ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಬರಲಿದೆ ಎಂದು ಬಾಜಿ ಕಟ್ಟುತ್ತಿದ್ದಾರೆ.

 

 

    ಅಂದರೆ ನೀವು ರೂ 1000 ಬಾಜಿ ಕಟ್ಟಿದರೆ ನೀವು 4000 ಮರಳಿ ಪಡೆಯುತ್ತೀರಿ. ಆದರೆ ಈ ರೀತಿ ಆಗುವ ಸಾಧ್ಯತೆಗಳು ಕಡಿಮೆ. ಬಿಜೆಪಿ 70-85 ಸ್ಥಾನಗಳನ್ನು ಮಾತ್ರ ಪಡೆಯುವ ಸಾಧ್ಯತೆಯಿದೆ. ನೀವು ಬಿಜೆಪಿ 80/100  ಸ್ಥಾನ ಪಡೆಯುತ್ತದೆ  ಎಂದು 1000 ರೂ. ಬೆಟ್ ಮಾಡಿದರೆ, ಆಡ್ ಆಧಾರದಲ್ಲಿ ನಿಮಗೆ ನಿಮಗೆ 1800 ರೂ. ಸಿಗುತ್ತದೆ.

   ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದು ಯಾರಾದರೂ ಹೇಳಿದರೆ, 90/100 ರ  ಆಡ್ ಪ್ರಕಾರ ನಿಮ್ಮ 1000 ರೂ.ಗೆ 1900 ರೂ. ಹಣ ಹಿಂತಿರುಗಿ ಕೊಡಲಾಗುತ್ತದೆ. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದು ಬೆಟ್ ಮಾಡಿದ ನಿಮಗೆ 3500-4000 ರೂ. ಹಣ ಕೊಡಲಾಗುತ್ತದೆ.

   ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ 25-30 ಸೀಟು ಬರುತ್ತೆ ಎಂದು ಯಾರಾದರೂ ಬೆಟ್ಟಿಂಗ್ ಕಟ್ಟಿದರೆ, 1000 ರೂ ಕೊಟ್ಟರೆ 2500 ಸಿಗುತ್ತೆ. ಈಗ ಸದ್ಯದ ಮಟ್ಟಿಗೆ, ಜೆಡಿಎಸ್ 31 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವ ಮೇಲೆ ಬೆಟ್ಟಿಂಗ್ ಮಾಡುವವರು 1000 ಕ್ಕೆ 3500 ರೂ. ಹಣ ಪಡೆಯಲಿದ್ದಾರೆ.

     ಬಹುತೇಕ ಸಟ್ಟಾ ಮಾರುಕಟ್ಟೆಗಳು ಕಾಂಗ್ರೆಸ್‌ಗೆ ಸ್ಪಷ್ಟ ಅಂಕಗಳನ್ನು ನೀಡಿವೆ, ಫಲೋಡಿ ಸತ್ತಾ ಬಜಾರ್ ಕಾಂಗ್ರೆಸ್‌ಗೆ 137 ಸ್ಥಾನಗಳನ್ನು ನೀಡಿದೆ. ಬಿಜೆಪಿ ಕೇವಲ 55 ಸ್ಥಾನಗಳನ್ನು ಪಡೆದುಕೊಂಡು, ಜೆಡಿಎಸ್ 30 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳುತ್ತಿವೆ.

     ಪಾಲನ್‌ಪುರ ಸತ್ತಾ ಮಾರುಕಟ್ಟೆಯು ಕಾಂಗ್ರೆಸ್‌ಗೆ 141 ಸ್ಥಾನಗಳನ್ನು ನೀಡಿದರೆ, ಬಿಜೆಪಿ 57 ಸ್ಥಾನಗಳನ್ನು ಮತ್ತು ಜೆಡಿಎಸ್‌ಗಳು ಕೇವಲ 24 ಸ್ಥಾನಗಳನ್ನು ನೀಡಿದೆ. ಕರ್ನಾಲ್ ಸತ್ತಾ ಮಾರುಕಟ್ಟೆಯು ಕಾಂಗ್ರೆಸ್‌ಗೆ 124 , ಬಿಜೆಪಿ 69  ಮತ್ತು ಜೆಡಿಎಸ್‌ಗೆ 24 ಸ್ಥಾನ ದೊರೆಯಲಿದೆ ಎಂದು ತಿಳಿಸಿದೆ.

    ಬೋಹ್ರಿ ಸತ್ತಾ ಮಾರ್ಕೆಟ್‌ನಲ್ಲಿ ಕಾಂಗ್ರೆಸ್‌ಗೆ 149 ಸ್ಥಾನಗಳು, ಬಿಜೆಪಿಗೆ 48 ಸ್ಥಾನಗಳು ಮತ್ತು ಜೆಡಿಎಸ್‌ಗೆ 22 ಸ್ಥಾನಗಳು ಸಿಗುತ್ತವೆ ಎನ್ನಲಾಗಿದೆ. ಐಪಿಎಲ್ ಋತುವಿನಲ್ಲಿ ಐಪಿಎಲ್ ಬೆಟ್ಟಿಂಗ್ ತುಂಬಾ ಲಾಭದಾಯಕ. ಕುದುರೆ ರೇಸಿಂಗ್ ಬೆಟ್ಟಿಂಗ್, ಕೂಡ ಲಾಭದಾಯಕವಾಗಿದೆ.

    ಕೆಲವು ದಿನಗಳ ಹಿಂದಿನವರೆಗೂ ಚುನಾವಣಾ ಬೆಟ್ಟಿಂಗ್ ಕಮ್ಮಿಯಾಗಿತ್ತು. ಆದರೆ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಬೆಟ್ಟಿಂಗ್ ಹೆಚ್ಚಾಗಿದೆ. ಮೇ 13 ರಂದು ಫಲಿತಾಂಶ ಪ್ರಕಟವಾಗುವವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ದಂಧೆ ಮುಂದುವರಿಯಲಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap