ವಿಜಯಪುರ ಮತ್ತು ಪಾವಗಡದಲ್ಲಿ ಆಜಾನ್ ವಿರುದ್ಧ ಭಜನ್ ಅಭಿಯಾನ

ವಿಜಯಪುರ : 

ನಗರದಲ್ಲಿ ಅಜಾನ್ ವಿರುದ್ದ ಸುಪ್ರಭಾತ ಹಾಗೂ ಭಜನ್ ಅಭಿಯಾನ ಆರಂಭಗೊಂಡಿದೆ. ಸೋಮವಾರ ಸುರ್ಯೋದಯಕ್ಕೆ ಮುನ್ನವೇ ವಿಜಯಪುರ ‌ನಗರದ ಜಮಖಂಡಿ‌ ರಸ್ತೆಯಲ್ಲಿರುವ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸುಪ್ರಭಾತ, ಭಜನಾ ಅಭಿಯಾನ ಅರಂಭಿಸಿದ್ದಾರೆ.

ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ವಿದ್ಯುತ್ ಚಾಲಿತ ವಾಧ್ಯ‌ ಬಳಸಿ ಈ ಪರಿಸರದಲ್ಲಿರುವ ಮಸೀದಿಯಿಂದ ನಸುಕಿನಲ್ಲಿ ಕೇಳಿ ಬರುವ ಆಜಾನ್ ವಿರುದ್ದ ಭಜನ್ ಅಭಿಯಾನ ಆರಂಭಿಸಿದ್ದಾರೆ.

ಯೂಕ್ರೇನ್​ ಶಾಲೆ ಮೇಲೆ ರಷ್ಯಾ ಬಾಂಬ್​: ಮಕ್ಕಳು ಸೇರಿ 60 ಜನ ಮೃತಪಟ್ಟಿರುವ ಶಂಕೆ

ಭೀಮು ಮಾಶ್ಯಾಳ, ಶಶಿ ಗಂಗನಹಳ್ಳಿ, ಈರಪ್ಪ ಹತ್ತಿ ನೇತೃತ್ವದಲ್ಲಿ ಭಜನ್ ಅಭಿಯಾನ ಆರಂಭಿಸಿರುವ ಯುವಕರು, ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಆಜಾನ್ ಗೆ ಬಳಕೆ ಮಾಡುವ ಧ್ವನಿವರ್ಧಕ ತೆರವು ಮಾಡುವ ವರೆಗೆ, ಧ್ವನಿವರ್ಧಕದ ಮೂಲಕ ಜೋರು ಸದ್ದಿನ ಅಜಾನ್ ಮಾಡಲು ಬಳಸುವ ಧ್ವನಿವರ್ಧಕ ನಿಲ್ಲಿಸೋವರೆಗೂ ನಮ್ಮ ಅಭಿಯಾನ ನಡೆಯುತ್ತದೆ ಎಂದು ಆಜಾನ್ ವಿರುದ್ಧ ಭಜನ್ ಅಭಿಯಾನ ಆರಂಭಿಸಿದ್ದಾರೆ.

ತುಮಕೂರು: ಅಜಾನ್ ಪ್ರತಿಯಾಗಿ ಪಾವಗಡದಲ್ಲಿ ಹನುಮಾನ್ ಚಾಲೀಸ್ ಅಚರಣೆ: ಶ್ರೀರಾಮ ಸೇನಾ ಸಂಸ್ಥಾಪಕರಾದ ಶ್ರೀ ಪ್ರಮೋದ್ ಮುತಾಲಿಕ್ ನವರು ಕರೆಕೊಟ್ಟ ಹನುಮಾನ್ ಚಾಲೀಸ್ ನ್ನು ಪಾವಗಡದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ಸೇನಾ ವತಿಯಿಂದ ಇಂದು ಸೋಮವಾರ ಬೆಳಿಗ್ಗೆ 5.00 ಗಂಟೆಗೆ ಆಚರಿಸಲಾಯಿತು.

IPL 2022  ಆರ್‌ಸಿಬಿ, ಸಿಎಸ್‌ಕೆ ಗೆಲುವಿನ ನಂತರ ಅಂಕಪಟ್ಟಿ ಹೇಗಿದೆ!

ತಾಲೂಕು ಶ್ರೀರಾಮಸೇನೆ ಅಧ್ಯಕ್ಷ ಕಾವಲಗೇರಿ ರಾಮಾಂಜಿ ನೇತ್ರತ್ವದಲ್ಲಿ ಶೇಖರ್ ಬಾಬು.ರಾಘವೇಂದ್ರ. ಅಲುಕುಂದಿರಾಜ್.ಪ್ರವೀಣ್ ಕುಮಾರ್.ಅನಿಲ್ ಕುಮಾರ್.ರಾಕೇಶ್. ವಾಸು.ನರೇಶ್ ಭಾಗವಹಿಸಿದ್ದರು.ಪಾವಗಡಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಲಕ್ಷ್ಮಿ ಕಾಂತ್ ನೇತ್ರತ್ವದಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link