“ಭಾರತ್‌ ಮಾತಾ ಕಿ ಜೈ” ಎಂದ ಬಾಲಿವುಡ್‌ ನಟ: ಯಾರದು ಆ ನಟ…..?

ಮುಂಬೈ
       ಇಂಡಿಯಾವನ್ನು ಭಾರತ್ ಎಂದು ಮರುನಾಮಕರಣ ಮಾಡುವ ಸಾಧ್ಯತೆ ಹೆಚ್ಚಾಗಿರುವಂತೆಯೇ, ಇದರ ಪರ ಹಾಗೂ ವಿರುದ್ಧವಾದ ಚರ್ಚೆಗಳು ಆರಂಭವಾಗಿವೆ. ಈ ನಡುವೆ ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್ ಅವರ ಟ್ವೀಟ್ ಎಲ್ಲಾ ಅಭಿಮಾನಿಗಳ ಕಣ್ಣುಗಳನ್ನು ಸೆಳೆದಿದೆ.
      ಮಂಗಳವಾರ ಎಕ್ಸ್ ನಲ್ಲಿ ಹಿಂದಿಯಲ್ಲಿ ”ಭಾರತ್ ಮಾತಾ ಕಿ ಜೈ” ಎಂದು ಬಾಲಿವುಡ್ ಬಿಗ್ ಬಿ ಬರೆಯುವ ಮೂಲಕ ಕೇಂದ್ರ ಸರ್ಕಾರವನ್ನು ಬೆಂಬಲಿಸಿದ್ದಾರೆ. ಇಂಡಿಯಾ- ಭಾರತ ವಿವಾದದ ನಡುವೆ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿರುವುದರಿಂದ ಅವರು ಇಂಡಿಯಾ ಹೆಸರು ಬದಲಾವಣೆ ಪರವಾಗಿ ತಮ್ಮ ಬೆಂಬಲವನ್ನು ಪ್ರದರ್ಶಿಸಿದಂತಿದೆ. ಅಮಿತಾಭ್ ಟ್ವೀಟ್ ಮಾಡುತ್ತಿದ್ದಂತೆಯೇ, ಅವರ ಬೆಂಬಲವನ್ನು ಅನೇಕ ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.

     ಸೆಪ್ಟೆಂಬರ್ 9 ರಂದು ನಡೆಯಲಿರುವ ಜಿ-20 ಔತಣಕೂಟಕ್ಕೆ ಫ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ‘ಫ್ರೆಸಿಡೆಂಟ್ ಆಫ್ ಭಾರತ’ ಉಲ್ಲೇಖದ ಆಹ್ವಾನ ಪತ್ರಿಕೆಯನ್ನು ರಾಷ್ಟ್ರಪತಿ ಭವನ ಕಳುಹಿಸಿರುವುದಾಗಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಬೆಳಗ್ಗೆ ಹೇಳಿದರು. ತದನಂತರ ಇದರ ಪರ ಹಾಗೂ ವಿರುದ್ಧವಾದ ಚರ್ಚೆಗಳು ಆರಂಭವಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ