ಭಾರತೀಯ ಗುರುಕುಲ ಪದ್ದತಿ ವಿಶ್ವಕ್ಕೆ ಮಾದರಿ

ತಿಪಟೂರು :

     ಭಾರತೀಯ ಗುರುಕುಲ ಪದ್ದತಿಯಲ್ಲಿನ ಶಿಕ್ಷಣ ವ್ಯವಸ್ಥೆ ಅತ್ಯುನ್ನತವಾಗಿದ್ದು ಪ್ರಪಂಚದಾದ್ಯಂತ ಗುರುಗುಲ ಪದ್ದತಿಯನ್ನು ಅಳವಡಿಸಿಕೊಳ್ಳಲು ಉತ್ಸುಕತೆ ತೋರುತ್ತಿದ್ದಾರೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

     ಅವರು ನಗರದ ಕಲ್ಪತರು ಸೆಂಟ್ರಲ್ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಇಂದಿನ ಆಧುನಿಕ ಶಿಕ್ಷಣದಲ್ಲಿ ಹೊಸ  ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತಂದು ಅವರ ಜ್ಞಾನಾರ್ಜನೆಯ ಮಟ್ಟವನ್ನು ಉನ್ನತೀಕರಿಸಿ ಮನುಕುಲದ ಅಭಿವೃದ್ಧಿಗೆ ನಾಂದಿ ಹಾಡಬೇಕೆಂದು ತಿಳಿಸಿದರು.

     ಖ್ಯಾತ ಶಿಕ್ಷಣ ತಜ್ಞ ಊಡೆ ಪಿ.ಕೃಷ್ಣ ಮಾತನಾಡಿ, ಸ್ವಾಮಿ ವಿವೇಕಾನಂದರು ಹೇಳಿರುವಂತೆ ನಮ್ಮ ಆಲೋಚನೆಗಳೆ ನಮ್ಮನ್ನು ರೂಪಿಸುತ್ತವೆ, ಆದ್ದರಿಂದ ಏನನ್ನು ಯೋಚಿಸುತ್ತೀರೊ ಅದರ ಬಗ್ಗೆ ಎಚ್ಚರದಿಂದಿರಿ. ಗಾಂಧಿಜೀಯವರ ದೃಷ್ಟಿಕೋನವಾದ ಜೌದ್ಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಮಕ್ಕಳಲ್ಲಿ ಕ್ರಿಯಾಶೀಲತೆಯ ಗುಣವನ್ನು ಬೆಳೆಸಿ ಸ್ವಾವಲಂಬನೆಯ ಜೀವನ ನಡೆಸಲು ಪ್ರೋತ್ಸಾಹಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲಿದೆ ಎಂದರು.

    ಕಲ್ಪತರು ವಿದ್ಯಾ ಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳು ಆಯಾಸ, ಬೇಸರ, ಖಿನ್ನತೆಯನ್ನು ನೀಗಿಸುವ ಮೂಲಮಂತ್ರಗಳು. ಚೇತನವನ್ನು ಉಂಟುಮಾಡಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುತ್ತವೆ. ಅದಕ್ಕಾಗಿಯೇ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾ ವಾರ್ಷಿಕೋತ್ಸವಗಳ ಮೂಲಕ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದೇ ಇದರ ಉದ್ದೇಶವೆಂದು ತಿಳಿಸಿದರು.

   ಮಕ್ಕಳ ಮನೋಮೋಹಕ ಸಾಂಸ್ಕೃತಿಕ ನೃತ್ಯಗಳು ಎಲ್ಲರ ಕಣ್ಮನ ತಣಿಸಿದವು, ಕಲ್ಪತರು ವಿದ್ಯಾ ಸಂಸ್ಥೆಯ ಶಿವಪ್ರಸಾದ್, ಬಾಗೆಪಲ್ಲಿ ನಟರಾಜು, ಬಸವರಾಜು, ದೀಪಕ್, ಉಮೇಶ್, ಸಂಗಮೇಶ್, ಜಗದೀಶ್‌ಮೂರ್ತಿ, ಉಮಾಶಂಕರ್, ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿ, ತಹಸೀಲ್ದಾರ್ ಪವನ್‌ಕುಮಾರ್, ಕೆ.ಸಿ.ಎಸ್ ಪ್ರಾಂಶುಪಾಲೆ ದೇವಿಕ.ಬಿ.ಸ್ವಾಮಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap