ನಾಯಕನಹಟ್ಟಿ
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ ಗಾಮ್‌ನಲ್ಲಿ ಮುಗ್ಧ ನಮ್ಮ ಸಹೋದರರಾದ ಭಾರತೀಯ ಸಂಜಾತ ರನ್ನು ಅಮಾನುಷವಾಗಿ ಹತ್ಯೆ ಮಾಡಿದ ಪಾಕಿಸ್ತಾನಿ ಉಗ್ರಗಾಮಿಗಳು ರಣಹೇಡಿಗಳ ಹಾಗೆ ಪಾಕಿಸ್ತಾನದ ಮಸೀದಿಗಳಲ್ಲಿ ಮತ್ತು ಹಡಗು ತಾಣಗಳಲ್ಲಿ ಅವಿತುಕೊಂಡಿದ್ದನ್ನು ಪ್ರಪಂಚದಲ್ಲಿಯೇ ತ್ಯಾಗ ಧೈರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾದ ನಮ್ಮ ಹೆಮ್ಮೆಯ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಎಂಬ ಹೆಸರಿನಲ್ಲಿ ನಿನ್ನೆ ಮದ್ಯ ರಾತ್ರಿ ವಿರೋಚಿತವಾಗಿ ದಾಳಿ ಮಾಡಿ ಹುಟ್ಟಡಗಿಸಿದ್ದಾರೆ ಎಂದು ನಿವೃತ್ತ ತಶೀಲ್ದಾರ್ ಅಧಿಕಾರಿ ಎನ್. ರಘುಮೂರ್ತಿ ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಾಕಿಸ್ತಾನಿ ಉಗ್ರರು ಮತ್ತು ಇವರ ಪರ ನಿಲ್ಲುವಂತಹ ಮನಸ್ಥಿತಿಯುಳ್ಳವರು ತೃಣಕ್ಕೆ ಸಮಾನ ಎಂದು ತೋರಿಸಿದ್ದಾರೆ ಇಂಥ ಹೆಮ್ಮೆಯ ನಮ್ಮ ಭಾರತೀಯ ಸೈನಿಕರಿಗೆ ಇದರ ನೇತೃತ್ವ ವಹಿಸಿದಂತಹ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ನರೇಂದ್ರ ಮೋದಿಜಿ ಅವರು ಕೊಟ್ಟಂತಹ ಮಾತು ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವಂತಹ ಯಾರೇ ಆಗಿರಲಿ ಅವರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ ಎಂಬ ಭಾರತದ ಪ್ರತಿಜ್ಞೆ ಇಂದು ಈಡೇರಿದೆ ಇದು ಇಡೀ ದೇಶದ ಸ್ವಾಭಿಮಾನ ಮತ್ತು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು ಭಾರತೀಯರಾದ ನಾವುಗಳೆಲ್ಲರೂ ಕೂಡ ಸರ್ಕಾರಕ್ಕೆ ಮತ್ತು ನಮ್ಮ ಹೆಮ್ಮೆಯ ಯೋಧರೊಂದಿಗೆ ಸದಾ ನಿಲ್ಲೋಣ ಎಂಬ ಸಂಕಲ್ಪವನ್ನು ಕೈಗೊಳ್ಳೋಣ ಎಂದು ಹೇಳಿದರು
