ಬೆಂಗಳೂರು:
ಕೆಲವು ದಿನಗಳಿಂದ ಏರುಮುಖವಾಗಿ ಸಾಗುತ್ತಲೇ ಇರುವ ಚಿನ್ನದ ದರ ಇಂದು(ಫೆ.26) ಕೊಂಚ ಇಳಿಕೆ ಕಂಡಿದೆ . ಬುಧವಾರ 22 ಕ್ಯಾರಟ್ ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರ ತಲಾ 25 ರೂ. ಮತ್ತು 27 ರೂ. ಇಳಿಕೆಯಾಗಿದೆ. ಆ ಮೂಲಕ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 8,050 ರೂ.ಗೆ ತಲುಪಿದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 8,782 ರೂ. ಪಾವತಿಸಬೇಕು. 22 ಕ್ಯಾರಟ್‌ನ 8 ಗ್ರಾಂ ಚಿನ್ನ 64,400 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 80,500 ರೂ. ಮತ್ತು 100 ಗ್ರಾಂಗೆ 8,05,000 ರೂ. ಪಾವತಿಸಬೇಕಾಗುತ್ತದೆ. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 70,256 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 87,820 ರೂ. ಮತ್ತು 100 ಗ್ರಾಂಗೆ 8,78,200 ರೂ. ನೀಡಬೇಕಾಗುತ್ತದೆ.
