ಹಾಸನ
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೆ ಎಲ್ಲ ಪಕ್ಷಗಳು ಪ್ರಚಾರ ಕಾರ್ಯವನ್ನು ಜೋರಾಗಿ ನಡೆಸುತ್ತಿವೆ ಇನ್ನು ಜನತಾದಳದಲ್ಲಿ ಹಾಸನದ ಟಿಕೆಟ್ ವಿಚಾರವಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದಲ್ಲಿ ಸಾಕಷ್ಟು ಭಿನ್ನಮತ ಸೃಷ್ಟಿಯಾಗಿದ್ದು ಯಾರಿಗೆ ಟಿಕೆಟ್ ಎಂಬುದು ಇನ್ನೂ ಯಕ್ಷ ಪ್ರಶ್ನೆಯಗಿದೆ.
ಹಾಸನದಲ್ಲಿ ನಾನೇ ಅಭ್ಯರ್ಥಿ ಎಂದು ಭಾವನಿ ರೇವಣ್ಣ ಹೇಳಿಕೆ ಕೊಟ್ಟ ಬಳಿಕ, ಭಾವನಿ ರೇವಣ್ಣ ಚುನಾವಣಾ ಸ್ಪರ್ಧೆ ವಿಚಾರವಾಗಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದಿವೆ. ಈಗಾಗಲೇ ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಮಾರ್ಚ್ ಎರಡನೇ ವಾರದಂದು ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಆದರೆ ಹಾಸನದ ಟಿಕೆಟ್ ಹಂಚಿಕೆ ಮುನ್ನವೇ ಮಾಜಿ ಸಚಿವ ಎಚ್‌ಡಿ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ ಟೆಂಪಲ್ ರನ್ ನಡೆಸಿರುವುದು ಕುತೂಹಲವನ್ನ ಹುಟ್ಟಿಸಿದೆ.