ಭೀಮ ಸಂಘಟನೆಗಳ ಮಹಾಒಕ್ಕೂಟದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ

ಬೆಂಗಳೂರು :

    ವಿಶ್ವಜ್ಞಾನಿ, ಸಂವಿಧಾನಶಿಲ್ಪಿ ಡಾ॥ ಬಾಬಾಸಾಹೇಬ್ ಅಂಬೇಡ್ಕರ್‌ರವರಿಗೆ ಅವಮಾನ ಮಾಡಿರುವ..ಕೇಂದ್ರ ಗೃಹಸಚಿವ ಅಮಿತ್ ಶಾ ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಿತ್ತು.

    ರಾಜ್ಯಸಭೆಯಲ್ಲಿ ಸಂವಿಧಾನದ 75 ನೇ ವರ್ಷದ ವಜ್ರಮಹೋತ್ಸವ ಸಂಭ್ರಮದಲ್ಲಿ ಸಂವಿಧಾನದ ಮೇಲೆ ನಡೆಯುತ್ತಿದ್ದ ಚರ್ಚೆಯಲ್ಲಿ ಭಾಗವಹಿಸಿದ ಕೇಂದ್ರ ಗೃಹಸಚಿವರು ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದೇ ಶೋಕಿಯಾಗಿಬಿಟ್ಟಿದೆ.
ಅಂಬೇಡ್ಕರ್ ಬದಲಾಗಿ ಅಷ್ಟು ಬಾರಿ ದೇವರುಗಳನ್ನು ಸ್ಮರಿಸಿದ್ದರೆ ಏಳು ಜನ್ಮಕ್ಕಾಗುವಷ್ಟು ಸ್ವರ್ಗ ಪ್ರಾಪ್ತಿಯಾಗುತ್ತಿತ್ತೆಂದು ಸದನದಲ್ಲಿ ಗುಡುಗಿ ಡಾ| ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಅಪಮಾನ ಮಾಡಿದ್ದಾರೆ. ದುರುದ್ದೇಶಪೂರ್ವಕವಾಗಿಯೇ, ಕೊಳಕು ಮನಸ್ಥಿತಿಯಲ್ಲಿಯೇ ಡಾ| ಬಿ.ಆರ್. ಅಂಬೇಡ್ಕರ್ ರವರನ್ನು ಅಪಮಾನಗೊಳಿಸಿರುವುದನ್ನು ಭೀಮಸಂಘಟನೆಗಳ ಮಹಾಒಕ್ಕೂಟ ಅತ್ಯಂತ ತೀವ್ರವಾಗಿ ಖಂಡಿಸುತ್ತದೆ ಎಂದು ಆಗ್ರಹಿಸಿದರು.

   ಗೃಹಸಚಿವರಾದ ಅಮಿತ್ ಶಾ ರವರ ನಡೆಯನ್ನು ದೇಶದ ಪ್ರಧಾನಮಂತ್ರಿಗಳು ಸಮರ್ಥಿಸಿಕೊಂಡಿರುವುದನ್ನು ಖಂಡಿಸಿ, ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ಗೃಹಸಚಿವರನ್ನು ಕೂಡಲೇ ಮಂತ್ರಿ ಪದವಿಯಿಂದ ವಜಾ ಮಾಡಬೇಕೆಂದು ಭೀಮ ಸಂಘಟನೆಗಳ ಒಕ್ಕೂಟಗಳ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಮಾರ್  ಆಗ್ರಹಿಸಿದರು.

Recent Articles

spot_img

Related Stories

Share via
Copy link