ಕಾರವಾರ:
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರವನ್ನು ಪುನಃ ಮೀಸಲು ಕ್ಷೇತ್ರವನ್ನಾಗಿ ಮಾಡುವಂತೆ *ಭೀಮ ಘರ್ಜನೆ ಸಂಘಟನೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗವನ್ನು ಆಗ್ರಹಿಸಿದೆ. ಭೀಮ ಘರ್ಜನೆ ಸಂಘಟನೆ ಜಿಲ್ಲಾಧ್ಯಕ್ಷ ಅರ್ಜುನ ಮಿಂಟಿ ಕಾರವಾರದ ಪತ್ರಿಕಾ ಭವನದಲ್ಲಿ ಇಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಈ ಹಿಂದೆ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿತ್ತು. ಆದರೆ ಈಗ ಅದನ್ನು ಸಾಮಾನ್ಯ ಕ್ಷೇತ್ರವಾಗಿ ಮಾಡಲಾಗಿದೆ.ಆದರೆ ಕಳೆದ 30 ವರ್ಷಗಳಿಂದ ಶಿರಸಿ-ಸಿದ್ದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ದಲಿತ ಅಭ್ಯುದಯಕ್ಕೆ ಕೊಡಲಿ ಏಟು ಬಿದ್ದಿದೆ. ದಲಿತರ ಕಾಲೋನಿ -ರಸ್ತೆಗಳು ದಯನೀಯವಾಗಿವೆ.ಅಲ್ಲದೆ 2008ರಲ್ಲಿ ಇಡೀ ಕ್ಷೇತ್ರವನ್ನು ಅವೈಜ್ಞಾನಿಕವಾಗಿ ವಿಂಗಡಿಸಲಾಗಿದೆ. ಶಿರಸಿ ತಾಲೂಕು ಪೂರ್ವ ಭಾಗವನ್ನು ಯಲ್ಲಾಪುರ ಕ್ಷೇತ್ರಕ್ಕೆ ಸೇರ್ಪಡೆ ಮಾಡಿದ್ದು ಮೂರ್ಖತನದ ಪರಮಾವಧಿಯಾಗಿದೆ.
ಕೂಡಲೇ ಶಿರಸಿ ಪೂರ್ವ ಭಾಗವನ್ನು ಪುನಃ ಕ್ಷೇತ್ರಕ್ಕೆ ಒಳಪಡಿಸಿ, ಶಿರಸಿ-ಸಿದ್ದಾಪುರ ಮೀಸಲು ಕ್ಷೇತ್ರವನ್ನಾಗಿ ಪುನಃ ರೂಪು ಗೊಳಿಸಬೇಕೆಂದು ಅವರು ಆಗ್ರಹಿಸಿದರು.ಅಮಿತ್ ಜೋಗಳೆಕರ ಮಾತನಾಡಿ ಶಿರಸಿ ನಗರದ ಐದು ರಸ್ತೆ ಸರ್ಕಲ್ ನ್ನು ಡಾ.ಅಂಬೇಡ್ಕರ್ ಸರ್ಕಲ್ ಆಗಿ ಮಾಡಬೇಕೆಂದು ಸಂಘಟನೆ ಹೋರಾಟ ನಡೆಸುತ್ತಾ ಬಂದಿದ್ದು ಕೂಡಲೇ ಅಂಬೇಡ್ಕರ್ ಸರ್ಕಲ್ ಎಂದು ನಾಮಕರಣ (ಅಧಿಕೃತ)ಮಾಡುವಂತೆ ಅಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಅಮಿತ ಜೋಗಳೇಕರ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
