ಹತ್ರಾಸ್‌ ಪ್ರಕರಣ : 15 ದಿನದ ನಂತರ ಮಾತನಾಡಿದ ಭೋಲೆ ಬಾಬಾ

ಲಖನೌ:

   ಹತ್ರಾಸ್ ಕಾಲ್ತುಳಿತದಿಂದ ನಾನು ತುಂಬಾ ಆಘಾತಗೊಂಡಿದ್ದೇನೆ. ಆದರೆ ಯಾರೊಬ್ಬರೂ ವಿಧಿಯನ್ನು ತಪ್ಪಿಸಲು ಸಾಧ್ಯವಿಲ್ಲ ಮತ್ತು ಎಲ್ಲರೂ ಒಂದು ದಿನ ಸಾಯಲೇಬೇಕು ಎಂದು ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಬುಧವಾರ ಹೇಳಿದ್ದಾರೆ.ಯಾರೂ ಏನಾಗಬೇಕೋ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭೋಲೆ ಬಾಬಾ ತಾವು ನಡೆಸಿದ ‘ಸತ್ಸಂಗ’ದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನ ಸಾವನ್ನಪ್ಪಿದ ಹದಿನೈದು ದಿನಗಳ   ತಿಳಿಸಿದ್ದಾರೆ.

   ಪ್ರತಿಯೊಬ್ಬರೂ ಒಂದು ದಿನ ಸಾಯಲೇಬೇಕು. ಆದರೆ ಯಾವಾಗ ಅಂತ ಖಚಿತವಾಗಿ ಗೊತ್ತಿರುವುದಿಲ್ಲ ಎಂದು ನಾರಾಯಣ್ ಸಕರ್ ಹರಿ ಎಂದೂ ಕರೆಯಲ್ಪಡುವ ಭೋಲೆ ಬಾಬಾ ಹೇಳಿದ್ದಾರೆ. ಈ ಹಿಂದೆ ತಮ್ಮ ವಕೀಲರಾದ ಎ ಪಿ ಸಿಂಗ್ ಮೂಲಕ ಕಾಲ್ತುಳಿತದ ಹಿಂದೆ ಪಿತೂರಿ ಇದೆ ಎಂದು ಹೇಳಿಸಿದ್ದರು. 

   “ಜುಲೈ 2 ರಂದು ನಡೆದ ಘಟನೆಯ ನಂತರ, ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ ಮತ್ತು ವಿಚಲಿತನಾಗಿದ್ದೆ. ಆದರೆ ಏನಾಗಬೇಕು ಎಂಬುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ನನ್ನ ವಕೀಲರು ಮತ್ತು ಪ್ರತ್ಯಕ್ಷದರ್ಶಿಗಳು ವಿಷಪೂರಿತ ಕ್ಯಾನ್‌ಗಳನ್ನು ತೆರೆದ ಬಗ್ಗೆ ಹೇಳಿದ್ದು ಸಂಪೂರ್ಣವಾಗಿ ನಿಜ. ಖಂಡಿತವಾಗಿಯೂ ಪಿತೂರಿ ನಡೆದಿದೆ” ಎಂದು ಬಾಬಾ ಹೇಳಿದ್ದಾರೆ.

    ಎಸ್‌ಐಟಿ ಮತ್ತು ನ್ಯಾಯಾಂಗ ಆಯೋಗದ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಮೊದಲ ಮಾನವ ಮಂಗಲ್ ಮಿಲನ್ ಸದ್ಭಾವನಾ ಸಮಾಗಮ್‌ನ ಎಲ್ಲಾ ಅನುಯಾಯಿಗಳು ಕೂಡ ಸತ್ಯ ಹೊರಬರುತ್ತದೆ ಮತ್ತು ಪಿತೂರಿಯನ್ನು ಬಹಿರಂಗಪಡಿಸುತ್ತಾರೆ ಎಂದು ನಂಬಿರುವುದಾಗಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap