ಜನರನ್ನು ಕಂಡು ಓಡಿತಾ ಭೋವಿ ಕಾಲೋನಿ ದೆವ್ವ….!

ತುಮಕೂರು

     ಜಗತ್ತು ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ತೆರೆದುಕೊಂಡಿದೆ. ಆದ್ರೆ, ಈಗಲೂ ದೆವ್ವ ಅನ್ನೋ ಭ್ರಮೆ ಜನರಲ್ಲಿದೆ. ಇದು ಮಡೆನೂರು ಭೋವಿ ಕಾಲೋನಿ ಗ್ರಾಮ. ಈ ಗ್ರಾಮ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿದೆ. ಈ ಗ್ರಾಮಕ್ಕೆ ದೆವ್ವ ಬಂದಿದ್ಯಂತೆ. ಕಳೆದ ಆರೇಳು ತಿಂಗಳಿಂದಲೂ ದೆವ್ವದ ಕುಚೇಷ್ಟೆಗೆ ಜನ ಬೆಚ್ಚಿ ಬಿದ್ದಿದ್ದಾರೆ. ದೆವ್ವ ಕಾಟದ ವಿಚಾರ ತಿಳಿದ ಪವಾಡ ದೂರ ಮಾಡುವ ಹುಲಿಕಲ್ ನಟರಾಜ್ ಹಾಗೂ ಸ್ಥಳೀಯ ಪೊಲೀಸರು ಮಡೆನೂರು ಭೋವಿ ಕಾಲೋನಿಗೆ ಬರ್ತಿದ್ದಂತೆ ದೆವ್ವದ ಸುಳಿವೇ ಇಲ್ಲ.

     ಕಳೆದ ಆರೇಳು ತಿಂಗಳಿಂದ ಕಾಟ ಕೊಡ್ತಿಂತಹ ದೆವ್ವ ಜನ್ರನ್ನ ಕಂಡು ಓಡಿ ಹೋಯ್ತಾ…? ಈ ಪ್ರಶ್ನೆ ಜನ್ರಲ್ಲಿ ಇದೀಗ ಕೇಳಿ ಬರ್ತಿದೆ. ಭಾನುವಾರ ರಾತ್ರಿ ಪವಾಡ ಭಂಜಕ ಹುಲಿಕಲ್ ನಟರಾಜ್ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ದೆವ್ವ ಕೂಗಿದರೆ ಪ್ರತಿ ಕೂಗು ಕೇಳಿಸುತ್ತಿತ್ತಂತೆ. ಶಿಳ್ಳೆ ಹೊಡೆದರೆ ಪ್ರತಿಯಾಗಿ ಶಿಳ್ಳೆ ಹೊಡೆಯುತ್ತಂತೆ. ಮನೆ ಮೇಲೆ ಕಲ್ಲು ಎಸೆಯುತ್ತಂತೆ. ನಿಮ್ಮೆಲ್ಲರ ಪ್ರಾಣ ತೆಗೆತ್ತೀನಿ ಅಂತಾ ಎಚ್ಚರಿಕೆ ಕೊಡ್ತಿಂದ್ದಂತಹ ದೆವ್ವ ಭಾನುವಾರ ರಾತ್ರಿ ಇದ್ದಕ್ಕಿದ್ದಂತೆ ಮಂಗಮಾಯ ಆಗಿತ್ತು.

     ಮನೆ ಅವರನ್ನ ಬಿಟ್ಟು ಬೇರೆ ಯಾರೇ ಬಂದ್ರೂ ದೆವ್ವ ಮಾತನಾಡಲ್ವಂತೆ. ಇದಕ್ಕಾಗಿಯೇ ಪುಕ್ಕಲು ದೆವ್ವನೇ ಇರಬೇಕು ಅಂತಾ ಜನ್ರು ಮಾತನಾಡಿಕೊಳ್ಳುತ್ತಿದ್ದರು. ಸಂಜೆ 6 ಗಂಟೆ ಆಯ್ತು ಅಂದ್ರೆ ಸಾಕು ದೆವ್ವದ ಚೇಷ್ಟೆಗೆ ಜನ ಬೆಚ್ಚಿ ಬಿಳ್ತಿದ್ರು. ದೆವ್ವ ಹುಲ್ಲಿನ ಬಣವೆಗೆ ಬೆಂಕಿ ಹಾಕ್ತಿತ್ತಂತೆ. ಕೇಕೆ ಹಾಕ್ತಿತ್ತಂತೆ. ಇದ್ರಿಂದ ಜನ್ರು ಭಯದಲ್ಲಿದ್ದರು. ಈ ವಿಷಯ ತಿಳಿದ ಹುಲಿಕಲ್‌ ನಟರಾಜ್‌ ಕಳೆದ ರಾತ್ರಿ ಸಕಲ ಸಿದ್ಧತೆ ಮಾಡಿಕೊಂಡು ಬಂದಿದ್ದರು. ಇಡೀ ರಾತ್ರಿ ದೆವ್ವದ ಸುಳಿವೇ ಇಲ್ಲ. ಅಲ್ಲಿನ ಜನ್ರೇ ಹೇಳುವಂತೆ ಹೆಚ್ಚಿನ ಜನ್ರು ಬಂದ್ರೆ ದೆವ್ವ ರಿಯಾಕ್ಟ್ ಮಾಡಲ್ಲ.

     ಇದೇ ಗ್ರಾಮದ ಶಂಕರ್ ಎಂಬ ವ್ಯಕ್ತಿ ಹೃದಯಾಘಾತದಿಂದ ಸತ್ತಿದ್ದರಂತೆ. ಆ ಶಂಕರನೇ ದೆವ್ವ ಆಗಿದ್ದು, ದಾಯಾದಿಗಳನ್ನು ಕಾಡುತ್ತಿದ್ದಾನೆ ಎಂದು ಗ್ರಾಮಸ್ಥರು ನಂಬಿಕೊಂಡಿದ್ದಾರೆ. ಎಲ್ಲವನ್ನೂ ಪರಿಶೀಲನೆ ನಡೆಸಿದ ಹುಲಿಕಲ್ ನಟರಾಜ್, ಪೊಲೀಸರು ಭಯಗ್ರಸ್ಥರ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ. ಇದೆಲ್ಲ ಅಪರಿಚಿತ ಕಿಡಿಗೇಡಿಗಳ ಕೃತ್ಯ. ಜನರಲ್ಲಿ ಭಯ ಹುಟ್ಟಿ ಹಾಕ್ತಿರುವ ಕಿಡಿಗೇಡಿಯನ್ನ ಶೀಘ್ರವೇ ಪತ್ತೆ ಹಚ್ಚುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ