ಲೀಡ್ಸ್ :
ಭಾನುವಾರ ಆಂಗ್ಲರ ಮೊದಲ ಸರದಿಯಲ್ಲಿ ಐದು ವಿಕೆಟ್ ಎತ್ತಿದ ಬುಮ್ರಾ ವಿದೇಶಿ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತ್ಯಧಿಕ ಫೈಫರ್’ಗಳ ಭಾರತದ ಮಾಜಿ ನಾಯಕ ಕಪಿಲ್‌ದೇವ್ ಅವರ ದಾಖಲೆಯನ್ನು ಸರಿಗಟ್ಟಿದರು. ಕಪಿಲ್ ದೇವ್ 66 ಟೆಸ್ಟ್ ಪಂದ್ಯಗಳಲ್ಲಿ 12 ಸಲ ಸರದಿಯೊಂದರಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದರೆ, ಬುಮ್ರಾ ಕೇವಲ 34 ಟೆಸ್ಟ್ ಪಂದ್ಯಗಳಲ್ಲಿಡಜನ್ ಫೈಫರ್’ಗಳ ಸಾಧನೆ ದಾಖಲಿಸಿದರು.
ವೇಗಿಗಳಾದ ಇಶಾಂತ ಶರ್ಮಾ 63 ಟೆಸ್ಟ್‌ಗಳಲ್ಲಿ 9 ಸಲ, ಜಹೀರ್ ಖಾನ್ 54 ಟೆಸ್ಟ್‌ಗಳಲ್ಲಿ 8 ಸಲ ಹಾಗೂ ಇರ್ಫಾನ್ ಪಠಾಣ 15 ಟೆಸ್ಟ್‌ಗಳಲ್ಲಿ 7 ಸಲ ವಿದೇಶಿ ನೆಲದಲ್ಲಿ ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲಿ ಐದು ಅಥವಾ ಹೆಚ್ಚಿನ ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.








