ಎಲೋನ್‌ ಮಸ್ಕ್‌ನ ಸ್ಪೇಸ್‌ಎಕ್ಸ್ ಕೇಂದ್ರದಲ್ಲಿ ಮತ್ತೆ ಭಾರೀ ಸ್ಫೋಟ

ಟೆಕ್ಸಾಸ್‌: 

  ಗುರುವಾರ ಟೆಕ್ಸಾಸ್‌ನ ಮ್ಯಾಸ್ಸಿಯಲ್ಲಿರುವ ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಪರೀಕ್ಷಾ ಸ್ಥಳದಲ್ಲಿ ಪ್ರಬಲವಾದ ಸ್ಫೋಟ  ಸಂಭವಿಸಿದ್ದು, ಕಂಪನಿಯ ಮುಂದಿನ ಸ್ಟಾರ್‌ಶಿಪ್ ರಾಕೆಟ್‌ ಉಡಾವಣೆಗೆ ನಡೆಯುತ್ತಿದ್ದ ಸಿದ್ಧತೆಗಳು ಸ್ಥಗಿತಗೊಂಡಿವೆ. ಸ್ಟಾರ್‌ಶಿಪ್‌ ಪರೀಕ್ಷೆ ವೇಳೆ ಈ ಭಾರೀ ದುರ್ಘಟನೆ ಸಂಭವಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಉಡಾವಣೆಯಾಗಬೇಕಿದ್ದ ಈ ಸ್ಟಾರ್‌ಶಿಪ್‌ನ ಅಂತಿಮ ಪರಿಶೀಲನೆ ನಡೆಸಲಾಗುತ್ತಿತ್ತು. ಇನ್ನು ಈ ಸ್ಫೋಟವು ಸ್ಟಾರ್‌ಶಿಪ್ ಮೂಲ ಮಾದರಿಗೆ ಗಮನಾರ್ಹ ಹಾನಿಯನ್ನುಂಟುಮಾಡಿತು ಮತ್ತು ಸ್ಪೇಸ್‌ಎಕ್ಸ್ ಎಲ್ಲಾ ಉಡಾವಣಾ ಸಿದ್ಧತೆಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸುವಂತಹ ಸ್ಥಿತಿ ನಿರ್ಮಾಣವಾಯಿತು.

   ಜೂನ್ 29 ರಂದು ಸ್ಟಾರ್‌ಶಿಪ್‌ ಉಡಾವಣೆಗೆ ನಿರ್ಧರಿಸಲಾಗಿತ್ತು. ಇದು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ರಾಕೆಟ್ ವ್ಯವಸ್ಥೆಯಾಗಿದೆ. ಈ ವರ್ಷದ ಆರಂಭದಲ್ಲಿ, ಎರಡು ಸ್ಟಾರ್‌ಶಿಪ್ ಪರೀಕ್ಷಾ ಹಾರಾಟಗಳು ಉಡಾವಣೆಯಾದ ಸ್ವಲ್ಪ ಸಮಯದ ನಂತರ ಸ್ಫೋಟಗಳಲ್ಲಿ ಕೊನೆಗೊಂಡವು, ಒಂದು ಉಡಾವಣಾ ವಾಹನ ಕೆರಿಬಿಯನ್ ಸಮುದ್ರದಲ್ಲಿ ಬಿದ್ದರೆ, ಇನ್ನೊಂದು ಉಡಾವಣಾ ವಾಹನ ನಿಯಂತ್ರಣ ತಪ್ಪಿ ಅಟ್ಲಾಂಟಿಕ್ ಸಾಗರದ ಮೇಲೆ ಪತನಗೊಂಡಿತ್ತು.

   ಮಾರ್ಚ್‌ನಲ್ಲಿ ಸ್ಪೇಸ್‌ಎಕ್ಸ್‌ನ ಬೃಹತ್ ಸ್ಟಾರ್‌ಶಿಪ್  ಬಾಹ್ಯಾಕಾಶ ನೌಕೆ ಬಾಹ್ಯಾಕಾಶದಲ್ಲಿ ಸ್ಫೋಟಗೊಂಡಿತ್ತು. ಟೆಕ್ಸಾಸ್‌ನಿಂದ ಉಡಾವಣೆಯಾದ ಕೆಲವೇ ನಿಮಿಷಗಳ ನಂತರ ಈ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಫ್ಲೋರಿಡಾದ ಕೆಲವು ಭಾಗಗಳಲ್ಲಿ ಆಕಾಶದಲ್ಲಿ ಹೊಗೆ ಹಾಗೂ ಬೆಳಕು ಕಾಣಿಸಿಕೊಂಡಿದೆ. ಇದು ಈ ವರ್ಷ ಎಲೋನ್ ಮಸ್ಕ್ ಅವರ ಮಾರ್ಸ್‌ಗೆ ಸತತ ಎರಡನೇ ವೈಫಲ್ಯವಾಗಿದೆ. ಸ್ಟಾರ್‌ಶಿಪ್ ತನ್ನ ಎಂಜಿನ್‌ಗಳನ್ನು ಕಡಿತಗೊಳಿಸಿ ಒಂದೇ ಸಮನೆ ಸುತ್ತಿರುಗಲು ಪ್ರಾರಂಭಿಸಿತ್ತು. ನಂತರ ಬಾಹ್ಯಾಕಾಶದಲ್ಲಿ ಸ್ಫೋಟಗೊಂಡಿತು.

   ಬಾಹ್ಯಾಕಾಶದಲ್ಲಿ ಸ್ಫೋಟಗೊಂಡ ನಂತರ ದಕ್ಷಿಣ ಫ್ಲೋರಿಡಾ ಮತ್ತು ಬಹಾಮಾಸ್ ಬಳಿ ಆಕಾಶದಲ್ಲಿ ಬೆಂಕಿಯ ಅವಶೇಷಗಳು ಕಾಣಿಸಿಕೊಂಡಿತ್ತ. ಬೆಂಕಿ ಹರಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. 400 ಅಡಿಗಳಿಗಿಂತ ಹೆಚ್ಚು ಎತ್ತರದ, 33 ರಾಪ್ಟರ್ ಎಂಜಿನ್‌ಗಳನ್ನು ಹೊಂದಿರುವ ಸೂಪರ್ ಹೆವಿ ಬೂಸ್ಟರ್‌ನಿಂದ ನಡೆಸಲ್ಪಡುವ ಸ್ಟಾರ್‌ಶಿಪ್, ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆ ಬಳಿಯಿರುವ ಅದರ ಸ್ಟಾರ್‌ಬೇಸ್ ಸೌಲಭ್ಯದಲ್ಲಿರುವ ಸ್ಪೇಸ್‌ಎಕ್ಸ್‌ನ ಲಾಂಚ್‌ಪ್ಯಾಡ್‌ನಿಂದ ಯಶಸ್ವಿಯಾಗಿ ಉಡಾವಾಣೆ ಮಾಡಲಾಗಿತ್ತು. ಆದರೆ ಕಾರ್ಯಾಚರಣೆಯ ಸುಮಾರು ಒಂಬತ್ತು ನಿಮಿಷಗಳ ನಂತರ, ಅದು ತನ್ನ ಸಂಪರ್ಕವನ್ನು ಕಳೆದುಕೊಂಡು ಸ್ಫೋಟಗೊಂಡಿದೆ.

Recent Articles

spot_img

Related Stories

Share via
Copy link