ಬೆಂಗಳೂರು ಕರಗ : ತಪ್ಪಿದ ಭಾರಿ ಅಗ್ನಿ ದುರಂತ…!

ಬೆಂಗಳೂರು :

       ಕರಗದ ಸಂಭ್ರಮದಲ್ಲಿರುವಾಗಲೇ ನಗರದಲ್ಲಿ ಭಾರೀ ಪ್ರಮಾಣದ ಬೆಂಕಿ ಅನಾಹುತ ಸ್ವಲ್ಪದರಲ್ಲಿ ಕೈ ತಪ್ಪಿದ್ದು, ಹಲವಾರು ಮಂದಿಯ ಜೀವ ರಕ್ಷಣೆಯಾಗಿದೆ. ಧರ್ಮರಾಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದ್ರೌಪದ ದೇವಿ ಕರಗ ಶಕ್ತೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ.

      ಮಧ್ಯಾಹ್ನ 2.30ರ ಸುಮಾರಿಗೆ ಕರ್ಪೂರದಾರತಿ ನಂತರ ದೇವಸ್ಥಾನದ ಆವರಣದಲ್ಲಿ ಪ್ರತಿವರ್ಷದ ರಿವಾಜಿನಂತೆ ಜನ ರಾಶಿ ರಾಶಿಯಾಗಿ ಸಾಮೂಹಿಕವಾಗಿ ಕರ್ಪೂರ ಹಚ್ಚಿದರು. ಕರ್ಪೂರ ಗುಡ್ಡೆಗಳು ಆಸುಪಾಸಿನ ಪ್ರದೇಶಗಳಿಗೆ ವ್ಯಾಪಿಸಿತು.

    ಈ ಸಂದರ್ಭದಲ್ಲಿ ಜನ ಎದ್ದುಬಿದ್ದು ಓಡಿದರು. ಸುಮಾರು 15 ಕ್ಕೂ ಹೆಚ್ಚು ವಾಹನಗಳು ಭಾಗಶಃ ಹಾನಿಗೊಳಗಾದವು. ಆದರೆ ಅದೃಷ್ಟವಶಾತ್ ಯಾವುದೇ ವಾಹನದ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡಿಲ್ಲ. ವಾಹನಗಳ ಸೀಟು, ಟೈರ್ ಗಳು ಸುಟ್ಟು ಕರಕಲಾದವು.

     ಸಮೀಪದಲ್ಲಿದ್ದ ಕರಗ ಮಹೋತ್ಸವಕ್ಕಾಗಿ ತರಿಸಿದ್ದ ಟಾರ್ಪಲ್, ಪೆಂಡಾಲ್‌ಗಳಿಗೆ ಬೆಂಕಿ ಆವರಿಸಲಿಲ್ಲ. ಅಷ್ಟರೊಳಗಾಗಿ ಜನ ಸಾಮಾನ್ಯರು, ಪೊಲೀಸರು ನೀರು ತಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಇಲ್ಲಿನ ದೇವಸ್ಥಾನದ ಹೊರಭಾಗದಲ್ಲಿ ಪ್ರತಿವರ್ಷ ಕರ್ಪೂರ ಉರಿಸುವ ಸಂಪ್ರದಾಯವಿದ್ದು, ವಾಹನಗಳನ್ನು ತೆರವುಗೊಳಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಪದೇ ಪದೇ ಧ್ವನಿವರ್ಧಕಗಳ ಮೂಲಕ ಮನವಿ ಮಾಡಿದರೂ ಸಾರ್ವಜನಿಕರು ಸ್ಪಂದಿಸಲಿಲ್ಲ. ಇಷ್ಟೆಲ್ಲಾ ಆಗುತ್ತಿದ್ದರೂ ಸಹ ಇಲ್ಲಿ ಒಂದೇ ಒಂದು ಅಗ್ನಿಶಾಮಕ ವಾಹನ ಇರಲಿಲ್ಲ. ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಹಲವಾರು ಮಂದಿ ಜೀವ ಕಳೆದು ಕೊಳ್ಳುತ್ತಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap