ಆಟೋ ಚಾಲಕರಿಗೆ ಸಾರಿಗೆ ಇಲಾಖೆಯಿಂದ ಬಿಗ್ ಶಾಕ್ :`FC’ ಅವಧಿ ಮಾರ್ಚ್ 31 ಕ್ಕೆ ಮುಕ್ತಾಯ!

ಬೆಂಗಳೂರು :

     ಆಟೋ ಚಾಲಕರಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದ್ದು, ಅರ್ಹತಾ ಪ್ರಮಾಣಪತ್ರ (FC) ಅವಧಿಯನ್ನು ಮಾರ್ಚ್ 31 ಕ್ಕೆ ಮುಕ್ತಾಯಗೊಳಿಸುವುದಾಗಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ಟು-ಸ್ಟ್ರೋಕ್ ಆಟೋಗಳ ಅರ್ಹತಾ ಪ್ರಮಾಣ ಪತ್ರ (FC) ಅವಧಿ ಮುಕ್ತಾಯಗೊಳಿಸುವುದಾಗಿ ಸಾರಿಗೆ ಇಲಾಖೆ ಹೇಳಿದೆ.

          ಟು-ಸ್ಟ್ರೋಕ್ ಆಟೋಗಳು ನವೀಕರಿಸಲಾಗದ ಪೆಟ್ರೋಲ್ ಬಳಸುವುದರಿಂದ ಹಾಗೂ ಅವುಗಳ ಕಾರ್ಯಕ್ಷಮತೆ ಕ್ಷೀಣಿಸುವುದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಿರುತ್ತದೆ. ಅವುಗಳ ಇತ್ತೀಚಿನ ಬಿಎಸ್ ಸರಣಿ ಮತ್ತು ಭಾರತ್ ಸರಣಿಯ ಮಾನದಂಡಕ್ಕಿಂತ ಹೆಚ್ಚು ಹೊಗೆ ಸೂಸುತ್ತವೆ ಎಂಬ ಕಾರಣಕ್ಕೆ 2017 ರಲ್ಲೇ ನಿಷೇಧದ ಆದೇಶ ಹೊರಡಿಸಿತ್ತು.

2020 ರಲ್ಲಿ ಕೊರೊನಾ ಸೋಂಕಿನ ಕಾರಣದಿಂದ 2020 ಜೂ. 10 ರಂದು ಸಾರಿಗೆ ಇಲಾಖೆ ಅಧಿಕಾರಿಗಳು ಆಟೋ ಸಂಘಟನೆಗಳ ಸಭೆ ನಡೆಸಿ ಮತ್ತೆ ಎರಡು ವರ್ಷ ವಿಸ್ತರಣೆ ಮಾಡಿತ್ತು. ಇದೀಗ 2022 ಮಾರ್ಚ್ 31 ಕ್ಕೆ ಆಟೋಗಳ ಅರ್ಹತಾ ಪ್ರಮಾಣ ಪತ್ರ ಮುಕ್ತಾಯವಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link