ಮದ್ಯ ಪ್ರಿಯರಿಗೆ ಬಿಗ್ ಶಾಕ್ : ರಾಜ್ಯದ ಬಾರ್ ಆಯಂಡ್ ರೆಸ್ಟೋರೆಂಟ್ ಗಳಲ್ಲಿ ನೋ ಸ್ಟಾಕ್, ಇಂದೂ ಸಿಗೋಲ್ಲ ಎಣ್ಣೆ!

ಬೆಂಗಳೂರು :

ಮದ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ರಾಜ್ಯದ ಬಾರ್ ಗಳಲ್ಲಿ ಇಂದೂ ಮದ್ಯ ಸಿಗುವುದು ಅನುಮಾನ ಎನ್ನಲಾಗಿದೆ. ಕೆಎಸ್ ಬಿಸಿಎಲ್ ನೂತನ ಸಾಫ್ಟ್ ವೇರ್ ಅಪ್ಡೇಟ್ ಆಗದ ಹಿನ್ನೆಲೆಯಲ್ಲಿ ಬಿಲ್ಲಿಂಗ್ ಸಮಸ್ಯೆಯಿಂದ ಬಾರ್ ಗಳಿಗೆ ಮದ್ಯ ಪೂರೈಕೆ ಆಗಿಲ್ಲ.

ಕಳೆದ ಎರಡು ದಿನಗಳಿಂದ ರಾಜ್ಯದ ಎಣ್ಣೆ ಅಂಗಡಿಗಳಲ್ಲಿ ಎಣ್ಣೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆಯಿದೆ. ರಾಜ್ಯದ ಯಾವುದೇ ಸಿಎಲ್-9 ಬಾರ್ ಅಂಡ್ ರೆಸ್ಟೋರೆಂಟ್, ಸಿಎಲ್- 2 ವೈನ್ ಸ್ಟೋರ್, ಸಿಎಲ್- 11ಸಿ ಎಂಎಸ್‌ಐಎಲ್​ಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಿಂದ ಸಪ್ಲೈ ಆಗುತ್ತಿಲ್ಲ. ಕೆಎಸ್​ಬಿಸಿಎಲ್​ನಿಂದ ನಿಂದ ಪ್ರತಿದಿನ ಪೂರೈಕೆ ಆಗುತ್ತಿತ್ತು. ಆದರೆ ಹೊಸ ಬಿಲ್ಲಿಂಗ್ ವ್ಯವಸ್ಥೆಯಿಂದ ಕೆಎಸ್​ಬಿಸಿಎಲ್​​ನಿಂದ ಬಿಲ್ ಆಗುತ್ತಿಲ್ಲ. ಹೀಗಾಗಿ ಎಣ್ಣೆ ಸಿಗುತ್ತಿಲ್ಲ.

IPL 2022: ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಗೆದ್ದ ನಂತರ ಅಂಕಪಟ್ಟಿಯಲ್ಲಿ ಯಾರು ಟಾಪ್, ಆರೆಂಜ್ & ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

ಎಸ್ ಬಿಸಿಎಲ್ Web Indenting ಮೂಲಕ ಮದ್ಯ ಖರೀದಿಸಲು ​​ಆದೇಶ ನೀಡಿದ್ದು,ಆದರೆ ಈ ಪದ್ಧತಿಯಿಂದ ಮದ್ಯ ಸಿಗುತ್ತಿಲ್ಲ. ಮದ್ಯ ಖರೀದಿಸಲು ಸನ್ನದುದಾರರಿಗೆ ತೊಂದರೆಯಾಗುತ್ತಿದೆ. ಮದ್ಯ ಇಲ್ಲದೆ ಸನ್ನದುದಾರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಒಂದು ತಿಂಗಳ ಮಟ್ಟಿಗಾದರೂ ಹೊಸ ಪದ್ಧತಿಯೊಂದಿಗೆ ಹಳೆ ಪದ್ಧತಿ ಚಾಲ್ತಿಯಲ್ಲಿ ಇರುವಂತೆ ಮಾಡಲು ಒತ್ತಾಯಿಸಿ ಇಂದು ಕೆಎಸ್​ಬಿಸಿಎಲ್​ ಡಿಪೋಗಳ ಎದುರು ಪ್ರತಿಭಟನೆ ನಡೆಸಲು ಬೆಂಗಳೂರು ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ತೀರ್ಮಾನಿಸಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap