ರಾಜ್ಯದ ಜತೆಗೆ ಬಿಗ್‌ ಶಾಕ್‌ : ಬೆಂಗಳೂರಲ್ಲಿ BA.10, BA.2,12 ಕೊರೊನಾ ಹೊಸ ರೂಪಾಂತರಿ ವೈರಸ್‌ ಪತ್ತೆ

ಬೆಂಗಳೂರು :

ರಾಜ್ಯದ ಜನತೆಗೆ ಮತ್ತೆ ಕೊರೊನಾ ಕಂಟಕವಾಗಿ ಕಾಡುವ ಎಲ್ಲ ಮುನ್ಸೂಚನೆಗಳು ಸಿಕ್ಕಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಕೊರೊನಾ ಹೊಸ ರೂಪಾಂತರಿ ವೈರಸ್‌ ಪತ್ತೆಯಾಗಿದೆ. ಅದ್ರಂತೆ, ಬಿಎ.10, ಬಿಎ.2, 12 ಹೊಸ ವೈರಸ್‌ ಪತ್ತೆಯಾಗಿದೆ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸಿ.ಎನ್‌ ಮಂಜುನಾಥ್‌ ತಿಳಿಸಿದ್ದಾರೆ.

ನನ್ನ ತೋಳಿಗೆ ಭಾರತದ ಕೋವಿಡ್‌ ಲಸಿಕೆ ಹಾಕಲಾಗಿದೆ, ಭಾರತಕ್ಕೆ ಧನ್ಯವಾದ: ಬ್ರಿಟನ್ ಪ್ರಧಾನಿ

ಈ ಕುರಿತು ಮಾಹಿತಿ ನೀಡಿದ ಡಾ.ಸಿ.ಎನ್‌ ಮಂಜುನಾಥ್‌, ‘ಬೆಂಗಳೂರಿನಲ್ಲಿ ಬಿಎ.10, ಬಿಎ.2, 12 ಹೊಸ ರೂಪಾಂತರಿ ವೈರಸ್‌ ಪತ್ತೆಯಾಗಿದೆ. ಇನ್ನೀದು ದೆಹಲಿ, ಮುಂಬೈನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಭಾರತದಲ್ಲಿ ಈಗಾಗಲೇ ಕೊರೊನಾ 4ನೇ ಅಲೆ ಆರಂಭವಾಗಿದೆ. ಇನ್ನು ಕರ್ನಾಟಕದಲ್ಲಿ 3-4 ವಾರಗಳಲ್ಲಿ 4ನೇ ಅಲೆ ಬರುವ ಸಾಧ್ಯತೆಯಿದೆ’ ಎಂದರು.

ಕೆಜಿಎಫ್ ಚಾಪ್ಟರ್ 2 ವಿಶೇಷ ದಾಖಲೆ: ಒಂದೇ ವಾರದಲ್ಲಿ 800 ಕೋಟಿ ರೂಪಾಯಿ ಕಲೆಕ್ಷನ್‌

ಇನ್ನು ‘ಕೊರೊನಾ 4ನೇ ಅಲೆ 3ನೇ ಅಲೆಯ ಗುಣಲಕ್ಷಣಗಳನ್ನ ಹೊಂದಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇರುತ್ತದೆ. ರಾಜ್ಯದಲ್ಲಿ ಈಗಾಗಲೇ ಎಲ್ಲ ಚಟುವಟಿಕೆಗಳು ಆರಂಭವಾಗಿದೆ. ಇನ್ನೆರೆಡು ವಾರದಲ್ಲಿ ಕೊರೊನಾ ಕೇಸ್‌ ಸಂಖ್ಯೆಯೂ ಹೆಚ್ಚಾಗಲಿದೆ. ಶ್ವಾಸಕೋಶ, ಹೃದ್ರೋಗ, ಕ್ಯಾನ್ಸರ್‌ನಿಂದ ಬಳಲುವವರು ಹುಷಾರಾಗಿರಿ.

ರಾಜ್ಯದ ಎಲ್ಲಾ ಇಲಾಖೆಯಲ್ಲೂ ಅಕ್ರಮ ನಡೆಯುತ್ತಿರುವುದು ಸರ್ಕಾರಕ್ಕೂ ಗೊತ್ತಿದೆ: ಎಚ್​.ಡಿ ಕುಮಾರಸ್ವಾಮಿ

ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಇನ್ನು ಜ್ವರ, ಕೆಮ್ಮು ಇದ್ದರೆ ಕಡ್ಡಾಯವಾಗಿ ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ. ಕೊರೊನಾ ಲಸಿಕೆ ಪಡೆದಿದ್ದೇವೆಂದು ನಿರ್ಲಕ್ಷ್ಯ ಮಾಡುವುದು ಬೇಡ’ ಎಂದರು.ಇನ್ನು ‘ಆಸ್ಪತ್ರೆಗೆ ದಾಖಲಾಗುವವರಿಗೆ ಕೊವಿಡ್‌ ಟೆಸ್ಟ್‌ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೋವಿಡ್‌ ಟೆಸ್ಟಿಂಗ್‌ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ. ಇದರಿಂದ ರೂಪಾಂತರಿ ವೈರಸ್‌ ಹರಡುವುದನ್ನು ತಡೆಯಬಹುದು’ ಎಂದು ಸಲಹೆ ನೀಡಿದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ