ದರ್ಶನ್‌ ಉಮಾಪತಿ ಜಟಾಪಟಿಗೆ ದೊಡ್ಡ ಟ್ವಿಸ್ಟ್

ಬೆಂಗಳೂರು: 

    ಸ್ಯಾಂಡಲ್‌ವುಡ್‌ನಲ್ಲಿ ‘ಕಾಟೇರ’ ಸಿನಿಮಾ ಟೈಟಲ್ ವಿವಾದದ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಿರ್ಮಾಪಕ ಉಮಾಪತಿ ಕುರಿತು ದರ್ಶನ್ ಬಳಸಿದ ತಗಡು, ಗುಮ್ಮಿಸ್ಕೊತ್ತೀಯಾ ಪದಗಳ ಬಗ್ಗೆ ಭಾರೀ ಚರ್ಚೆ ನಡೀತಿದೆ. ಈಗಾಗಲೇ ನಟ ದರ್ಶನ್ ವಿರುದ್ಧ ದೂರುಗಳು ಸಹ ದಾಖಲಾಗುತ್ತಿದೆ. ಹೋರಾಟದ ಕೂಗು ಕೇಳಿಬರುತ್ತಿದೆ.

    ಇನ್ನು ದರ್ಶನ್ ವರ್ಸಸ್ ಉಮಾಪತಿ ಶ್ರೀನಿವಾಸ್ ಫೈಟ್ ನಡುವೆ ಶ್ರೀರಂಗಪಟ್ಟಣದಲ್ಲಿ ನಟ ದರ್ಶನ್ ನೀಡಿದ್ದ ಹೇಳಿಕೆಯ ಕಾವು ಹೆಚ್ಚಾಗಿದೆ. “ಇವತ್ತು ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ. ನಿಮ್​ಅಜ್ಜಿನಾ ಬಡಿಯಾ. ನಿಮಗೆಲ್ಲ ತಲೆ ಕೆಡಿಸಿಕೊಂಡು ನಾನೇಕೆ ಕುಳಿತುಕೊಳ್ಳಲಿ” ಎಂದು ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ. ಇದನ್ನು ಖಂಡಿಸಿ ‘ಗೌಡತಿಯರ ಸೇನೆ’ ಮಹಿಳಾ ಆಯೋಗಕ್ಕೆ ಪತ್ರ ಬರೆದಿದೆ.

   ನಿರ್ಮಾಪಕ ಉಮಾಪತಿ ಕುರಿತು ನಟ ದರ್ಶನ್ ಆಡಿದ್ದ ಮಾತುಗಳನ್ನು ಖಂಡಿಸಿ ಎರಡು ದಿನ ಹಿಂದೆ ಕರ್ನಾಟಕ ಪ್ರಜಾ ಪರವೇದಿಕೆ ಸಂಘಟನೆ, ಫಿಲ್ಮ್‌ ಚೇಂಬರ್ ಮೆಟ್ಟಿಲೇರಿತ್ತು. ನಟ ದರ್ಶನ್ ‘ಗುಮ್ಮಿಸ್ಕೊತೀಯ’ ಎಂದು ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದಾರೆ. ಇದು ಕಾನೂನು ಬಾಹಿರ. ತಮ್ಮ ಹೇಳಿಕೆಗೆ ಅವರು ಬಳಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ಬಗ್ಗೆ ಕ್ಷಮೆ ಕೇಳಿ ದೂರು ವಾಪಸ್ ಪಡೆಯಲು ಮುಂದಾಗಿದ್ದಾರೆ.

    ಹೌದು ಕರ್ನಾಟಕ ಪ್ರಜಾಪರ ವೇದಿಕೆಯ ರಾಜ್ಯಾಧ್ಯಕ್ಷ ಕನ್ನಡ ಶಫಿ ಇತ್ತೀಚೆಗೆ ಫಿಲ್ಮ್ ಚೇಂಬರ್‌ನಲ್ಲಿ ನೀಡಿದ್ದ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. “ನಟ ದರ್ಶನ್ ಪದ ಬಳಕೆ ಮುಜುಗರ ತಂದಿದ್ದ ವಿಚಾರ. ಹಾಗಾಗಿ ನಾವು ದೂರು ದಾಖಲಿಸಿದ್ದೆವು. ನಮ್ಮ ಸಂಘಟನೆಯವರು ಸ್ವಲ್ಪ ಆತುರ ಬಿದ್ವಿ ಅನ್ನಿಸ್ತಿದೆ. ಒಬ್ಬ ಬೆಳೆದಿರುವಂತಹ ದೊಡ್ಡ ನಟ. ಅವರ ಮನಸ್ಸಿಗೆ ನೋವಾಗಿದ್ದರೆ ಸಂಘಟನೆ ಪರವಾಗಿ ಕನ್ನಡ ಮನಸ್ಸುಗಳಿಗೆ ಕ್ಷಮೆ ಯಾಚಿಸುತ್ತಾ ನಮ್ಮ ದೂರು ಹಿಂಪಡೆಯುವ ಕೆಲಸ ಮಾಡ್ತೀನಿ” ಎಂದಿದ್ದಾರೆ.

   ಸದ್ಯ ಕನ್ನಡ ಶಫಿ ಕ್ಷಮೆ ಕೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಮೊನ್ನೆ ಫಿಲ್ಮ್ ಚೇಂಬರ್‌ನಲ್ಲಿ ದೂರು ನೀಡಿ ನಟ ದರ್ಶನ್ ವಿರುದ್ಧ ಶಫಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ದಿಢೀರ್ ತಮ್ಮ ನಿರ್ಧಾರ ಬದಲಿಸಿದ್ದು ಯಾಕೆ? ಅವರ ಮೇಲೆ ಯಾರು ಒತ್ತಡ ಹಾಕಿದರು ಎನ್ನುವ ಚರ್ಚೆ ಶುರುವಾಗಿದೆ. “ಸಾರ್ವಜನಿಕ ವೇದಿಕೆಯಲ್ಲಿ ನಟ ದರ್ಶನ್, ನಿರ್ಮಾಪಕನಿಗೆ ತಗಡೇ, ಗುಮುಸ್ಕೊತಿಯ ಪದ ಬಳಸಿದ್ದು ತಪ್ಪು. ದರ್ಶನ್ ಯಾವ ಅಭಿಮಾನಿಗಳಿಗೆ ಮಾದರಿಯಾಗ್ತಾರೆ..

    ದರ್ಶನ್ ಬಂಡವಾಳ ಗೊತ್ತಿದೆ ಸಾಕ್ಷಿ ಎಲ್ಲವೂ ಇದೆ. ಗುಮ್ಮುಸ್ಕೊತಿಯ ಅಂದ್ರೆ ಕೊಲೆ ಬೆದರಿಕೆಗೆ ಇದ್ದಂತೆ. ಕುಡುಕ ದರ್ಶನ್. ಈತ ಅಭಿಮಾನಿಗಳಿಗೆ ಹೇಗೆ ಮಾದರಿ ಆಗುತ್ತಾನೆ” ಎಂದು ಕರ್ನಾಟಕ ಪ್ರಜಾಪರ ವೇದಿಕೆಯ ರಾಜ್ಯಾಧ್ಯಕ್ಷ ಕನ್ನಡ ಶಫಿ ಮೊನ್ನೆ ಪ್ರಶ್ನಿಸಿದ್ದರು.’ಕಾಟೇರ’ ಸಿನಿಮಾ ಸಕ್ಸಸ್ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡುತ್ತಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಆ ಟೈಟಲ್ ನನ್ನದು. ಕಥೆ ನಾನು ಬರೆಸಿದ್ದ ಎಂದಿದ್ದರು. ಈ ಬಗ್ಗೆ ‘ಕಾಟೇರ’ 50 ದಿನಗಳ ಸಂಭ್ರಮಾಚರಣೆ ವೇಳೆ ದರ್ಶನ್ ತಿರುಗೇಟು ನೀಡಿದ್ದರು. “ಕೆಲವರು ಕಥೆ ನಾನು ಮಾಡಿಸಿದೆ. ಟೈಟಲ್ ನಾನು ಕೊಟ್ಟೆ ಅಂತ ಹೇಳ್ತಾರೆ. ಅಯ್ಯೋ ತಗಡೇ. ನಿನಗೆ ‘ರಾಬರ್ಟ್’ ಕಥೆ ಕೊಟ್ಟದ್ದೇ ನಾವು. ಯಾಕಂದರೆ ಕೊಟ್ಟಿದ್ದು ಮಾಡಿದ್ದು ಹೇಳಬಾರದು. ಇದೇ ರೀತಿ ಒಂದ್ಸಲ ಸಿಕ್ಕಿಹಾಕಿಕೊಂಡು ಹೇಳಿಸಿಕೊಂಡು ಬುದ್ದಿ ಕಲಿಯಲಿಲ್ಲ, ಅಂದ್ರೆ ನಾವು ಏನು ಹೇಳೋಣ. ಇಂತಹ ಒಳ್ಳೆಯ ಕಥೆ ಯಾಕಪ್ಪಾ ಬಿಟ್ಟೆ ನೀನು?” ಎಂದು ಹೇಳಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap