ಕಾಫಿ ಪ್ರಿಯರಿಗೆ ಷಾಕ್‌ ನೀಡಿದ ಬೆಲೆ ಏರಿಕೆ….!

ಬೆಂಗಳೂರು:

   ಕಾಫಿ ಪ್ರಿಯರಿಗೆ ಕಹಿ ಸುದ್ದಿ. ಅ. 15ರಿಂದ ಪ್ರತೀ ಕೆ.ಜಿ. ಕಾಫಿ ಪುಡಿ ಮೇಲೆ 100 ರೂ. ದುಬಾರಿಯಾಗಲಿದೆ. ಇಂಡಿಯನ್‌ ಕಾಫಿ ಟ್ರೇಡ್‌ ಅಸೋಸಿಯೇಶನ್‌ ಕಾಫಿ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ.

   ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅಸೋಸಿಯೇಶನ್‌ ಅಧ್ಯಕ್ಷ ಪೆರಿಕಲ್‌ ಸುಂದರ್‌, ಶ್ರೇಷ್ಠ ಗುಣಮಟ್ಟದ ಕಾಫಿ ಬೀಜ ದೊರೆಯುತ್ತಿಲ್ಲ. ಇದರ ಜತೆಗೆ ಉತ್ಪಾದನ ನಿರ್ವಹಣೆ ವೆಚ್ಚ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಫಿ ಮಾರಾಟದ ಪ್ರತೀ ಕೆಜಿ ಮೇಲೆ 100 ರೂ. ಹೆಚ್ಚಳ ಮಾಡಲು ಅಸೋಸಿಯೇಶನ್‌ ನಿರ್ಧರಿಸಿದೆ. ಕಾಫಿ ಗ್ರಾಹಕರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

   ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಯ ಗುಣಮಟ್ಟ ಹಾಗೂ ಕಾಫಿ ಬೆಳೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ದಿನ ಕಾಫಿ ಬೆಲೆ ಏರಿಕೆಯಾಗುತ್ತಲೇ ಇದೆ. ಕಾಫಿ ಬೆಳೆಯಲ್ಲಿ ಈಗ ಶೇ. 20ರಷ್ಟು ಕುಸಿತವಾಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಸ್ಥಳೀಯ ಮಾರುಕಟ್ಟೆಗೆ ಕಾಫಿ ಪೂರೈಕೆ ಕಡಿಮೆಯಾಗಿದ್ದು ಬೆಲೆ ಏರಿಕೆ ಉಂಟಾಗಿದೆ.

   ಈ ವರ್ಷದ ಆರಂಭದಿಂದಲೂ ಕಾಫಿ ಬೆಲೆ ದ್ವಿಗುಣವಾಗುತ್ತಲೇ ಸಾಗಿದೆ. ಜನವರಿ ಆರಂಭದಿಂದ ಬೆಲೆ ಹೆಚ್ಚಳವಾಗುತ್ತಲೇ ಇದೆ. ಪ್ರತಿ ಕೆ.ಜಿಗೆ 200 ರೂ. ಇದ್ದ ಒಂದು ಕೆ.ಜಿ. ರೋಬಸ್ಟಾ ತಳಿಯ ಕಾಫಿ ಬೆಲೆಯು ಪ್ರಸ್ತುತ 420 ರೂ.ಗೆ ಏರಿಕೆಯಾಗಿದೆ. ಹಾಗೇಯೆ ಅರೇಬಿಕಾ ತಳಿಯ ಕಾಫಿ ಬೆಲೆಯು 290 ರೂ.ನಿಂದ 465 ರೂ.ಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link