ಸಿಬಿಐ ಮುಂದೆ ಹಾಜರಾದ ಬಿಹಾರ ಡಿಸಿಎಂ …!

ಹೊಸದಿಲ್ಲಿ:

     ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ದೆಹಲಿಯಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಂದೆ ಕೆಲಸಕ್ಕಾಗಿ ಭೂಮಿ ಗಹರಣದ ವಿಚಾರಣೆಗಾಗಿ  ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಂದು ಬೆಳಗ್ಗೆ 10:30ರ ಸುಮಾರಿಗೆ ಸಿಬಿಐ ಪ್ರಧಾನ ಕಛೇರಿಗೆ ಆಗಮಿಸಿದ ತೇಜಸ್ವಿ ಯಾದವ್‌ ಅವರು ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.ಅವರ ಪರ ವಕೀಲರಾದ ಮಣಿಂದರ್ ಸಿಂಗ್ ಅವರು  ಬಿಹಾರ ಅಸೆಂಬ್ಲಿ ಅಧಿವೇಶನವು ಏಪ್ರಿಲ್ 5 ರಂದು ಮುಕ್ತಾಯಗೊಳ್ಳಲಿರುವುದರಿಂದ ಯಾದವ್ ಅವರು ಸಿಬಿಐ ಮುಂದೆ  ಹಾಜರಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

      ಶ್ರೀ ಯಾದವ್ ಅವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಮಾರ್ಚ್‌ನಲ್ಲಿ ಯಾವುದಾದರೊಂದು  ಶನಿವಾರದಂದು ಸಿಬಿಐ ಮುಂದೆ ಹಾಜರಾಗಬಹುದು ಎಂದು ಸಿಬಿಐ ಪರ ವಕೀಲ ಡಿಪಿ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಅದೇ ರೀತಿ ಇಂದು ತೇಜಸ್ವಿ ಯಾದವ್‌ ಅವರು ಇಂದು ಹಾಜರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ