ಬೈಕ್‌ ಸವಾರರ ನಿರ್ಲಕ್ಷ್ಯಕ್ಕೆ : ಹೋಯ್ತು ಯುವಕರಿಬ್ಬರ ಜೀವ

ಜೈಪುರ:

    ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಗಿಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್‍ನಲ್ಲಿ ಹೋಗುತ್ತಿದ್ದ ದಂಪತಿಗೆ ಮುಂಭಾಗದಿಂದ ಬರುತ್ತಿದ್ದ ಬೈಕ್  ಡಿಕ್ಕಿ (Bike Accident Case) ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

    ಅಪಘಾತವು ಎಷ್ಟು ತೀವ್ರವಾಗಿತ್ತೆಂದರೆ ಎರಡೂ ಬೈಕುಗಳು ರಸ್ತೆಗೆ ಬಿದ್ದಿದ್ದು, ಬೈಕಿನ ಪೆಟ್ರೋಲ್ ಟ್ಯಾಂಕ್‍ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಈ ಬೆಂಕಿಯಿಂದಾಗಿ ಒಬ್ಬ ಯುವಕ ಸಜೀವ ದಹನವಾಗಿದ್ದರೆ, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದಾನೆ.

    ಮೃತರನ್ನು ಜಜ್ವಾ ನಿವಾಸಿ ಶ್ರವಣ್ ಕುಮಾರ್ (25) ಮತ್ತು ಲಪುಂಡರಾ ನಿವಾಸಿ ಸ್ವರೂಪರಾಮ್ (35) ಎಂದು ಗುರುತಿಸಲಾಗಿದೆ. ಪತಿಯೊಂದಿಗೆ ಬೈಕ್‍ನಲ್ಲಿ ಹೋಗುತ್ತಿದ್ದ ಭುರಿ ದೇವಿ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ತನ್ನ ಹೆತ್ತವರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಸಂಜೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

   ಅಪಘಾತ ನಡೆದಾಗ ಬೈಕ್ ಸವಾರರಿಬ್ಬರೂ ಹಾರಿ ಹೋಗಿ ರಸ್ತೆಯ ಮೇಲೆ ಬಿದ್ದಿದ್ದಾರೆ. ಬೈಕ್‍ನ ಪೆಟ್ರೋಲ್ ಟ್ಯಾಂಕ್‍ಗೆ ಬೆಂಕಿ ತಗುಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಯುವಕ ತೀವ್ರವಾಗಿ ಸುಟ್ಟು ಹೋಗಿದ್ದಾನೆ. ಆಗ ಸ್ಥಳದಲ್ಲಿದ್ದ ಜನರು ತಕ್ಷಣ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿ ಆ ಯುವಕನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಆ ಯುವಕ ಆಸ್ಪತ್ರೆಗೆ ತಲುಪುವ ಮೊದಲೇ ಪ್ರಾಣ ಬಿಟ್ಟಿದ್ದಾನೆ.
  ಎರಡೂ ಬೈಕ್‍ಗಳು ಅತಿ ವೇಗದಲ್ಲಿ ಹೋಗುತ್ತಿದ್ದವು. ಮುಂಭಾಗದಿಂದ ಬರುತ್ತಿದ್ದ ಬೈಕ್ ಕೂಡ ಅತಿ ವೇಗವಾಗಿ ಬಂದಿದ್ದ ಕಾರಣ ಎರಡೂ ಮುಖಾಮುಖಿ ಡಿಕ್ಕಿ ಹೊಡೆದವು. ಆಗ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿತು. ಇದರಿಂದ  ಸ್ಥಳದಲ್ಲೇ ಬೆಂಕಿ ಕಾಣಿಸಿಕೊಂಡಿದ್ದು, ಇನ್ನೊಂದು ಬೈಕ್ ಸವಾರ ಸಜೀವ ದಹನವಾಗಿದ್ದಾನೆ. ಭುರಿ ದೇವಿ ಅವರ ಪತಿ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ತಲುಪುವ ಮೊದಲೇ ನಿಧನರಾದರು. ಬೈಕಿನ ವೇಗ ಕಡಿಮೆ ಇದ್ದಿದ್ದರೆ, ಬಹುಶಃ ಅಪಘಾತವು ಇಷ್ಟು ಭಯಾನಕವಾಗಿರುತ್ತಿರಲಿಲ್ಲ ಮತ್ತು ಯಾರ ಜೀವವೂ ಹೋಗುತ್ತಿರಲಿಲ್ಲ ಎಂದು ಮೃತ ವ್ಯಕ್ತಿಯ ಪತ್ನಿ  ಭುರಿ ದೇವಿ ಕಣ್ಣೀರು ಹಾಕುತ್ತಾ ಹೇಳಿದ್ದಾರೆ.

Recent Articles

spot_img

Related Stories

Share via
Copy link