ನವದೆಹಲಿ:

‘ಬೀಚ್ಗಳಲ್ಲಿ ಅಥವಾ ಈಜುಕೊಳದಲ್ಲಿ ಬಿಕಿನಿ ಧರಿಸಬಹುದು. ಶಾಲೆಗಳಲ್ಲಿ ಅಲ್ಲ. ಪ್ರತಿಯೊಂದು ಸ್ಥಳಕ್ಕೂ ಸಂಬಂಧಪಟ್ಟಂತೆ ವಸ್ತ್ರಸಂಹಿತೆ ಎಂಬುದು ಇದೆ’ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬುಧವಾರ ಇಲ್ಲಿ ಹೇಳಿದರು.
ಹಿಜಾಬ್ ಕುರಿತ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ‘ಮನೆಯಲ್ಲಿ ಧಾರ್ಮಿಕ ಆಚರಣೆಗಳನ್ನು ಅನುಸರಿಸಬೇಕು, ಶಾಲೆಗಳಲ್ಲಿ ಅಲ್ಲ. ಪ್ರತಿಯೊಬ್ಬರು ಶಿಕ್ಷಣಕ್ಕಾಗಿಯೇ ಶಾಲೆಗೆ ಬರುತ್ತಾರೆ’ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








