ಬರ್ತ್‍ಡೇ ಸೆಲೆಬ್ರೆಷನ್ ವೇಳೆ ಅವಘಡ; ಮುಖ ಸುಟ್ಟುಕೊಂಡ ಮಹಿಳೆ

ಹನೋಯ್‌:

   ಬರ್ತ್‍ಡೇ ಸೆಲೆಬ್ರೆಷನ್ ಅನ್ನು ಅದ್ಭುತವಾಗಿ ಮಾಡಲು ಕೆಲವರು ಹೈಡ್ರೋಜನ್ ಬಲೂನ್‍ಗಳನ್ನು ಬಳಸುತ್ತಾರೆ. ಆದರೆ ಇವು ತುಂಬಾ ಅಪಾಯಕಾರಿ. ಇತ್ತೀಚೆಗೆ ವಿಯೆಟ್ನಾಂನ ಹನೋಯ್‍ನಲ್ಲಿ ಬರ್ತ್‍ಡೇ ಸೆಲೆಬ್ರೆಷನ್ ವೇಳೆ ಪಾರ್ಟಿ ಸ್ಥಳದಲ್ಲಿದ್ದ ಹೈಡ್ರೋಜನ್ ಬಲೂನ್‍ ಭಯಾನಕವಾಗಿ ಸ್ಫೋಟಗೊಂಡು ಮಹಿಳೆಯ ಮುಖಕ್ಕೆ ಸುಟ್ಟ ಗಾಯಗಳಾದ ಘಟನೆ ನಡೆದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.

   ವೈರಲ್ ವಿಡಿಯೊದಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ. ವಿಡಿಯೊದ ಆರಂಭದಲ್ಲಿ ಬರ್ತ್‍ಡೇ ಸೆಲೆಬ್ರೆಷನ್ ಪಾರ್ಟಿಯಲ್ಲಿ ಬಲೂನ್‍ಗಳಿಂದ ತುಂಬಿದ ಛಾವಣಿಯ ಕೆಳಗೆ ನಿಂತಿದ್ದ ಮಹಿಳೆಯೊಬ್ಬಳು ಕಂಡು ಬಂದಿದ್ದಾಳೆ. ಕೈಯಲ್ಲಿ ಕೇಕ್ ಹಿಡಿದು ಅದರ ಮೇಲಿದ್ದ ಮೇಣದ ಬತ್ತಿಗಳನ್ನು ಊದಲು ಹೊರಟಾಗ ಉರಿಯುವ ಬೆಂಕಿಗೆ ಬಲೂನ್ ತಗುಲಿ ಅಲ್ಲಿ ಸ್ಫೋಟ ಸಂಭವಿಸಿದೆ. ಇದರಿಂದ ಮಹಿಳೆಯ ಮುಖಕ್ಕೆ ಬೆಂಕಿ ತಗುಲಿದ ಕಾರಣ ಆಕೆ ಅಲ್ಲಿಂದ ಮುಖ ಮುಚ್ಚಿಕೊಂಡು ಓಡಿದ್ದಾಳೆ. 

  ಮಾಹಿತಿ ಪ್ರಕಾರ, ಮೇಣದ ಬತ್ತಿಗೆ ಹಚ್ಚಿದ ಬೆಂಕಿಯಿಂದ ಅಲ್ಲಿದ್ದ ಹೈಡ್ರೋಜನ್ ತುಂಬಿದ ಬಲೂನ್‌ಗಳು ಸ್ಫೋಟಗೊಂಡಿವೆ. ಈ ಘಟನೆಯಿಂದ ಅವಳ ಮುಖ ಸುಟ್ಟುಹೋಗಿದ್ದು, ನೋವಿನಿಂದ ಕೂಗುತ್ತಾ ಮುಖವನ್ನು ಮುಚ್ಚಿಕೊಂಡಿದ್ದಾಳೆ. ಈ ಅಪಘಾತದಿಂದ ಅವಳ ಮುಖದ ಮೇಲೆ ಸುಟ್ಟಗಾಯಗಳಾಗಿವೆ ಎಂದು ವರದಿಯಾಗಿದೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ವರದಿಗಳ ಪ್ರಕಾರ, ಘಟನೆಯ ನಂತರ ಅವಳು ಬಾತ್‍ರೂಂಗೆ ಓಡಿ ಸ್ವಲ್ಪ ನೀರನ್ನು ಮುಖಕ್ಕೆ ಹಾಕಿಕೊಂಡಿದ್ದಾಳೆ. ನಂತರ ಅವಳು ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾಳೆ. ಅಲ್ಲಿ ವೈದ್ಯರು ಅವಳನ್ನು ಪರೀಕ್ಷಿಸಿ ಘಟನೆಯ ಸಮಯದಲ್ಲಿ ಅವಳಿಗೆ ಚಿಕ್ಕಪುಟ್ಟ ಸುಟ್ಟ ಗಾಯಗಳಾಗಿವೆ ಎಂದು ಹೇಳಿದ್ದಾರೆ.‌ 

  ತಾವು ಪ್ರೀತಿಸುವಂತಹ ಹುಡುಗ ಅಥವಾ ಹುಡುಗಿಗೆ ದುಬಾರಿ ಉಡುಗೊರೆ ನೀಡುವ ಮೂಲಕ ‌ ಪ್ರಪೋಸ್ ಮಾಡುವುದು ಸರ್ವೇ ಸಾಮಾನ್ಯ. ತಮ್ಮ ಮನಸ್ಸಿನಲ್ಲಿರೋ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ವಿಭಿನ್ನವಾಗಿರಬೇಕೆಂದು ಏನೆಲ್ಲಾ ಗಿಫ್ಟ್​ ಕೊಡಬೇಕು, ಹೇಗೆಲ್ಲಾ ಪ್ರಪೋಸ್​ ಮಾಡಬೇಕು ಎಂದು ಪ್ರೇಮಿಗಳು ಪ್ಲಾನ್​ ಮಾಡಿಕೊಳ್ಳುವುದು ಇದೆ‌. ಆದ್ರೆ ಇಲ್ಲೊಬ್ಬ ತನ್ನ ಪ್ರಿಯತಮೆಗೆ ಸರ್​ರ್ಪ್ರೈಸ್ ಆಗಿ ದುಬಾರಿ ಗಿಫ್ಟ್ ನೀಡಲು ಹೋಗಿ ಫಜೀತಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಚೀನಾದ ವ್ಯಕ್ತಿಯೊಬ್ಬ ತಾನು ಪ್ರೀತಿಸಿದ ಗೆಳತಿಗೆ ಕೇಕ್‌ನಲ್ಲಿ ಉಂಗುರವನ್ನಿಟ್ಟು ಪ್ರೊಪೋಸ್‌ ಮಾಡಲು ಯೋಜನೆ ರೂಪಿಸಿದ್ದ. ಆದರೆ ಇದ್ಯಾವುದನ್ನೂ ತಿಳಿಯದೆ‌ ಯುವತಿ ಕೇಕ್ ಜತೆಗೆ ಉಂಗುರವನ್ನೇ ತಿಂದಿದ್ದಾಳೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್‌ ಆಗುತ್ತಿದೆ.

   ಚೀನಾದ ಸೌತ್ ಗುವಾಂಗ್‌ಆನ್‌ನಲ್ಲಿ ಈ ಘಟನೆ ನಡೆದಿದ್ದು ಪ್ರೇಮಿಯೊಬ್ಬ ತಾನು ಪ್ರೀತಿಸುವ ಗೆಳತಿಗೆ ಸರ್ಪ್ರೈಸ್ ಆಗಿ ರಿಂಗ್ ನೀಡಿ ಪ್ರೇಮ ನಿವೇದನೆ ಮಾಡಬೇಕೆಂದು ಬಯಸಿದ್ದ. ಅದರಂತೆ  ರೆಸ್ಟೋರೆಂಟ್​ ವೊಂದರಲ್ಲಿ ತಾನು ಪ್ರೀತಿಸಿದ ಹುಡುಗಿಯನ್ನು ಕುಳ್ಳಿರಿಸಿ, ಕೇಕ್​ ಒಳಗೆ ಉಂಗುರವಿಟ್ಟು ಆಕೆಗೆ ತಿನ್ನಲು ಕೊಟ್ಟಿದ್ದ. ಆದರೆ ಅಲ್ಲಿ ಆಗಿದ್ದೇ ಬೇರೆ. ಇದ್ಯಾವುದನ್ನೂ ಅರಿಯದ ಯುವತಿ ಕೇಕ್ ಜತೆಗೆ ಉಂಗುರವನ್ನೇ ತಿಂದಿದ್ದಾಳೆ.

   ಕೇಕ್​ ತಿನ್ನುವಾಗ ಬಾಯಲ್ಲಿ ಸಿಕ್ಕ ಉಂಗುರ ಹಲ್ಲಿನಲ್ಲಿ ಕಚ್ಚಿದ್ದರಿಂದ ಅದು ಎರಡು ತುಂಡುಗಳಾಗಿ ಹೋಗಿದೆ. ಇದನ್ನು ನೋಡಿದ ಯುವತಿ ಶಾಕ್​ ಆಗಿದ್ದಾಳೆ. ಕೇಕ್​ನ ಗುಣಮಟ್ಟವೇ ಸರಿಯಿಲ್ಲದಿರಬಹುದು ಎಂದು ಬೇಕರಿಗೆ ದೂರು ಕೊಡಲು ಮುಂದಾಗಿದ್ದಳು. ಈ ವಿಚಾರವನ್ನು ಆಕೆ ಗೆಳೆಯನ ಬಳಿಯೂ ಹೇಳಿಕೊಂಡಿದ್ದಾಳೆ. ಆ ನಂತರದಲ್ಲಿ ಯುವಕ  ಇದು ತಾನು ಪ್ರಪೋಸ್ ಮಾಡಲು ತಂದಿದ್ದ ಉಂಗುರ ಎಂದು ಹೇಳಿಕೊಂಡಿದ್ದಾನೆ.

Recent Articles

spot_img

Related Stories

Share via
Copy link