ಸಂಕಲ್ಪದ ಮೂಲಕ ಬಿಜೆಪಿಗೆ ಅಧಿಕಾರ ಸಿದ್ಧಿ: ಬಸವರಾಜ ಬೊಮ್ಮಾಯಿ

ಬೆಂಗಳೂರು

    ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರಕಾರ ಮತ್ತು ರಾಜ್ಯದ ಬಿಜೆಪಿ ಸರಕಾರವು ಸಂಕಲ್ಪದಿಂದ ಸಿದ್ಧಿಗೆ ಮುಂದಾಗಿದೆ. ಅದಕ್ಕಾಗಿ ಡಬಲ್ ಎಂಜಿನ್ ಸರಕಾರಗಳ ಸಾಧನೆಯನ್ನು ಜನರಿಗೆ ತಿಳಿಸಲು ಪ್ರಗತಿ ರಥಗಳನ್ನು ಜನರ ಬಳಿಗೆ ಒಯ್ಯುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

    ಬಿಟಿಎಂ ಲೇಔಟ್‌ನ 2ನೇ ಹಂತದ ಸ್ವಾಮಿ ವಿವೇಕಾನಂದ ಆಟದ ಮೈದಾನ ದಲ್ಲಿ ಇಂದು ಬಿಜೆಪಿ ಪ್ರಗತಿ ರಥದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ರಥ ವಾಪಸ್ ಬರುವಾಗ ಸಂಕಲ್ಪ ಸಿದ್ಧಿಯಾಗಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕಿದೆ. ರಾಜ್ಯ ಸರಕಾರವು ಆರ್ಥಿಕ ಚೇತರಿಕೆ ಮಾತ್ರವಲ್ಲದೆ ಜನಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿದೆ.

    ನಮ್ಮ ಕ್ಲಿನಿಕ್, ಶಾಲೆಗಳ ಸುಧಾರಣೆ, ನಗರೋತ್ಥಾನಕ್ಕೆ 6 ಸಾವಿರ ಕೋಟಿ ನೀಡಿದ್ದೇವೆ. ಸಬರ್ಬನ್ ರೈಲಿಗೆ ಅತಿ ಹೆಚ್ಚು ಹಣ ಕೊಡಲಾಗಿದೆ. ಸೆಟಲೈಟ್ ಟೌನ್, ರಿಂಗ್ ರೋಡ್‌ಗೆ ಹಣ ನೀಡಿದ್ದಾರೆ. ಕೆಲಸವೂ ನಡೆಯುತ್ತಿದೆ. ಇದರದಲ್ಲಿ ಸಂಸದರ ಪಾತ್ರ ಪ್ರಮುಖ ಎಂದು ಮೆಚ್ಚುಗೆ ಸೂಚಿಸಿದರು.

   ರೈಲ್ವೆಸ್‌ಗೆ, ರಾಷ್ಟ್ರೀಯ ಹೆದ್ದಾರಿಗೂ ಗರಿಷ್ಠ ಹಣ ಬಂದಿದೆ. ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಮೋದಿಜಿ ಸರಕಾರವು ಪ್ರಬಲ ದೇಶವಾಗಿ ಹೊರಹೊಮ್ಮಲು ಕಾರಣರಾಗಿದೆ ಎಂದು ವಿವರಿಸಿದರು.

    ರಾಜ್ಯ ಸರಕಾರದಿಂದ ರೈತ ವಿದ್ಯಾನಿಧಿ ನೀಡಲಾಗುತ್ತಿದೆ. ನೇಕಾರರು, ಟೇಲರ್, ಆಟೋ ಡ್ರೆöÊವರ್ ಮಕ್ಕಳು ಸೇರಿ ಅನೇಕ ಸಮುದಾಯಕ್ಕೆ ಇದನ್ನು ವಿಸ್ತರಿಸಲಾಗಿದೆ. ಯುವಕರಿಗೆ ಬ್ಯಾಂಕ್ ನೆರವು ಲಭಿಸಿದೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆ, ಹೆಣ್ಮಕ್ಕಳಿಗೆ ಪ್ರತ್ಯೇಕ ಯೋಜನೆ, ವಿದ್ಯಾರ್ಥಿನಿಯರ ಶುಲ್ಕ ಮನ್ನಾ, ಉಚಿತ ಪಾಸ್ ನೀಡಲಾಗುತ್ತಿದೆ. ಐಟಿಐ  ಪಡೆಯುವವರಿಗೆ ಸ್ಟೈಫಂಡ್ ಕೊಡಲಾಗುವುದು, ಬಡವರ ಕಲ್ಯಾಣ, ರಾಜ್ಯದ ಅಭಿವೃದ್ಧಿಗಾಗಿ ನಾವು ಶ್ರಮಿಸುತ್ತಿದ್ದೇವೆ. ಜನರೂ ಬಿಜೆಪಿ ಮೇಲೆ ಭರವಸೆ ಇಟ್ಟಿದ್ದಾರೆ. ಇದು ಗೆಲುವಿನ ಸಂಕೇತ. ಕರ್ನಾಟಕದಲ್ಲಿ ಬಿಜೆಪಿ ಸುನಾಮಿ ಏಳಲಿ ಎಂದು ಆಶಿಸಿದರು.

   ಬೆಂಗಳೂರು ದಕ್ಷಿಣ ಸಂಸದ ಮತ್ತು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ ಅವರು ಮಾತನಾಡಿ, ಡಬಲ್ ಎಂಜಿನ್ ಸರಕಾರಗಳ ಕೊಡುಗೆಯನ್ನು ತಿಳಿಸಲು ರಥವು ನೆರವಾಗಲಿದೆ. 130ಕ್ಕೂ ಹೆಚ್ಚು ರಥಗಳು ರಾಜ್ಯದೆಲ್ಲೆಡೆ ಸಂಚರಿಸಲಿವೆ ಎಂದು ತಿಳಿಸಿದರು.

    ಕೋವಿಡ್, ಅತಿವೃಷ್ಟಿಯ ನಡುವೆಯೂ ಅಭೂತಪೂರ್ವ ವಿಕಾಸ ಸಾಧ್ಯವಾಗಿದೆ. ನೀರಾವರಿ ಯೋಜನೆಗೆ ಶಾಶ್ವತ ಪ್ರಯತ್ನ ಮಾಡಿದ್ದೇವೆ. ನಗರವೊಂದರಲ್ಲೇ 1 ಕೋಟಿ ಲಾಭಾರ್ಥಿಗಳು ನಮ್ಮ ನಗರದಲ್ಲಿದ್ದಾರೆ. ಅಭಿವೃದ್ಧಿಯ ವೇಗದ ವಿಚಾರವನ್ನು ಜನರಿಗೆ ತಿಳಿಸಲಾಗುವುದು ಎಂದರು.

     ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‌ಕುಮಾರ್ ಕಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಶಾಸಕ ಹಾಗೂ ವಿಧಾನಸಭೆ ಮುಖ್ಯ ಸಚೇತಕ ಎಂ.ಸತೀಶ್ ರೆಡ್ಡಿ, ವಿಧಾನಪರಿಷತ್ ಸದಸ್ಯ ಮತ್ತು ಬೆಂಗಳೂರು ವಿಭಾಗ ಪ್ರಭಾರಿ ಗೋಪಿನಾಥ್ ರೆಡ್ಡಿ, ಪ್ರಗತಿ ರಥದ ರಾಜ್ಯ ಸಂಚಾಲಕ ಎಸ್.ವಿ. ರಾಘವೇಂದ್ರ, ಯುವ ಮೋರ್ಚಾದ ರಾಜ್ಯ ಅಧ್ಯಕ್ಷ ಡಾ.ಸಂದೀಪ್, ನಗರ ಜಿಲ್ಲಾ ಅಧ್ಯಕ್ಷರಾದ ಡಾ.ಎನ್.ಆರ್.ರಮೇಶ್, ನಾರಾಯಣಗೌಡ, ಮಂಜುನಾಥ್, ಶಾಸಕರು ಹಾಗೂ ಪಕ್ಷದ ರಾಜ್ಯ, ಜಿಲ್ಲಾ ಮತ್ತು ಸ್ಥಳೀಯ ಮುಖಂಡರು ಮುಖಂಡರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap