ಬೆಂಗಳೂರು:
ಪ್ರಜಾಪ್ರಭುತ್ವದ ಬಗ್ಗೆ ವಿದೇಶಗಳಲ್ಲಿ ಸುಳ್ಳು ಮಾತನಾಡುವ ಕಾಂಗ್ರೆಸ್ ಪಕ್ಷದ ಆಡಳಿತವಿರುವ ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನೇ ದಮನಿಸುವ ಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದೆ.
ಖಾಸಗಿ ರಾಜಕೀಯ ಕಾರ್ಯಕ್ರಮಕ್ಕೆ ಅನೈತಿಕವಾಗಿ ರಾಜ್ಯದ ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಹೇಗೆ..? ಬಂಧಿತ ಐವರು ಉಗ್ರರ ವಿರುಧ್ಧ ಪ್ರೈಮಾಫೇಸಿ ಸಾಕ್ಷಿಗಳಿದ್ದರೂ ಗೃಹ ಸಚಿವರು ಕ್ಲೀನ್ ಚೀಟ್ ಕೊಟ್ಟಿದ್ದೇಕೆ..? ಮುಂಗಾರು ಕೈಕೊಟ್ಟು ಕಂಗಾಲಾದ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. 42 ರೈತರು ಸಾವಿಗೆ ಶರಣಾಗಿದ್ದಾರೆ. ಸರಕಾರದ ಕ್ರಮಗಳೇನು ಎಂದು ಪ್ರಶ್ನಿಸಿದೆ.
ಸರಕಾರಿ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ಮಾಡುವ, Target ನೀಡುವ ಅಧಿಕಾರ ಸುರ್ಜೇವಾಲಾರಿಗೆ ಕೊಟ್ಟಿದ್ದು ಯಾರು..? ಕಲುಷಿತ ನೀರು ಪೂರೈಕೆ, ಬಿಸಿಯೂಟದಲ್ಲಿ ವಿಷಪ್ರಾಶನ, ಕೊಳೆತ ಮೊಟ್ಟೆಗಳನ್ನು ಕೊಟ್ಟು ಜನಸಾಮಾನ್ಯರ ಜೀವನದ ಜತೆ ಚೆಲ್ಲಾಟವಾಡುತ್ತಿರುವುದು ಏಕೆ..? ರೈತ ವಿರೋಧಿ, ಜನ ವಿರೋಧಿ, ನಾಡ ವಿರೋಧಿ, ಧರ್ಮ ವಿರೋಧಿ ನಿಲುವುಗಳನ್ನು ಕೈಗೊಂಡು ಏನನ್ನು ಸಾಧಿಸಲು ಹೊರಟಿದ್ದೀರಿ..? ಸರಕಾರ ಬಂದು ಕೇವಲ 2 ತಿಂಗಳಲ್ಲಿ ನೂರೆಂಟು ಸಮಸ್ಯೆಗಳು, ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ ಎಂದು ಹೇಳಿದೆ.
ಕಾಂಗ್ರೆಸ್ ಈ ಪ್ರಶ್ನೆಗಳಿಂದ ದೂರ ಓಡುತ್ತಿದೆ, ಪ್ರಶ್ನಿಸುವ ನಮ್ಮ ಶಾಸಕರನ್ನು ಅಮಾನತು ಮಾಡಿ ಪ್ರಜಾಪ್ರಭುತ್ವವನ್ನು ದಮನಿಸುತ್ತಿದೆ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮೇಲಾಗುತ್ತಿದೆ ದಾಳಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹರಿಹಾಯ್ದಿದೆ.