ಮೋದಿ ಟೂರ್ ಡೀಲ್ : ಬಿಜೆಪಿ ಸರಕಾರದ ಹೊಸ ಭ್ರಷ್ಟಾಚಾರ : ಡಿ.ಕೆ. ಸುರೇಶ್

ಬೆಂಗಳೂರು

  ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸದ ಹೆಸರಲ್ಲಿ ರಾಜ್ಯ ಬಿಜೆಪಿ ನಾಯಕರು ಮೋದಿ ಟೂರ್ ಡೀಲ್ ನಡೆಸಿದ್ದಾರೆ. ಇದರಲ್ಲಿ 40 % ಅಲ್ಲ 300 % ಲೂಟಿ ಮಾಡಿದ್ದಾರೆ.  ಎಂದು ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.

   ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು 7 ಬಾರಿ ರಾಜ್ಯ ಪ್ರವಾಸ ಮಾಡಿದ್ದು, ಅವರ ಈ ಪ್ರವಾಸದ ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರು ಕೋಟಿ, ಕೋಟಿ ಲೂಟಿ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀ ಯ ವಿಮಾನ ನಿಲ್ದಾಣದ ಕೆಂಪೇಗೌಡ ಪ್ರತಿಮೆ ವೆಚ್ಚ 59 ಕೋಟಿ. ಉದ್ಘಾಟನೆ ಕಾರ್ಯಕ್ರಮಕ್ಕೆ ಸರ್ಕಾರ 30 ಕೋಟಿ ರೂ. ಖರ್ಚು ಮಾಡಿ, ಲೂಟಿ ಹೊಡೆದಿದೆ. ರಾಜ್ಯದ ಇತರ ಭಾಗಗಳ ಕಾರ್ಯಕ್ರಮಗಳಲ್ಲಿ ಎಷ್ಟು ಲೂಟಿ ಮಾಡಲಾಗಿದೆಯೋ? ಮೋದಿ ಅವರ ಸರ್ಕಾರಿ ಕಾರ್ಯಕ್ರಮಗಳಿಗೆ ಆಗಿರುವ ವೆಚ್ಚದ ಬಗ್ಗೆ ಮಾಧ್ಯಮಗಳು ಹಾಗೂಆರ್.ಟಿಐ ಕಾರ್ಯಕ್ರತರು ಮಾಹಿತಿ ಹೊರತೆಗೆಯಬೇಕು? ಎಂದು ಕರೆ ನೀಡಿದರು.

    ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರಧಾನಿ, ಬಿಜೆಪಿ ರಾಷ್ಟಿçÃಯ ನಾಯಕರು ದಂಡಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಪ್ರಧಾನಿಗಳು 7 ಬಾರಿ ರಾಜ್ಯಕ್ಕೆ ಬಂದಿದ್ದಾರೆ. ಇಂದು ರಾಜ್ಯದಲ್ಲಿ ಪ್ರಧಾನಮಂತ್ರಿಗಳ ಟೂರ್ ಡೀಲ್ ನಡೆಯುತ್ತಿದೆ. ಸರ್ಕಾರದಿಂದ ಪ್ರಧಾನಮಂತ್ರಿಗಳ ಪ್ರವಾಸದ ಡೀಲ್ ನಡೆಯುತ್ತಿದೆ. ಇದು 40% ಅಲ್ಲ 300% ಡೀಲ್ ನಡೆಯುತ್ತಿದೆ. ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಬಂದಾಗ ಇವರಿಗೆ ಕೆಂಪೇಗೌಡರ ಮೇಲೆ ಅಭಿಮಾನವಿದೆ ಎಂದು ಭಾವಿಸಿದ್ದೆವು.

    ಆದರೆ ಇವರು ಕೆಂಪೇಗೌಡರ ಹೆಸರಲ್ಲಿ ಡೀಲ್ ಮಾಡಿದ್ದಾರೆ. ಇವರು ಎಲ್ಲಿ ಕೈ ಹಾಕಿದರೂ ಡೀಲು, ಕಾಸು ಮಾಡುವುದಾಗಿದೆ. ಕೇವಲ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ 30 ಕೋಟಿ ಬಿಲ್ ಮಾಡಿದ್ದಾರೆ. ಒಂದು ಕಾರ್ಯಕ್ರಮಕ್ಕೆ ಇಷ್ಟಾದರೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಪ್ರವಾಸ ಹೆಸರಲ್ಲಿ ಎಷ್ಟು ಲೂಟಿ ಮಾಡಲು ಇವರು ಸಜ್ಜಾಗಿದ್ದಾರೆ ಎಂದು ಪ್ರಶ್ನಿಸಿದರು.

    ಏರ್ ಪೋರ್ಟ್ ರಸ್ತೆ ಅಭಿವೃದ್ಧಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಅದಕ್ಕೆ 8.50 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಈ ರಸ್ತೆ ಎಂದಾದರೂ ಗುಂಡಿ ಬಿದ್ದಿತ್ತಾ? ಪ್ರಧಾನಮಂತ್ರಿಗಳು ಆ ರಸ್ತೆಯಲ್ಲಿ ಸಂಚಾರ ಮಾಡಿದರಾ?

    ವಿಮಾನದಲ್ಲಿ ಬಂದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಮತ್ತೆ ವಿಮಾನದಲ್ಲಿ ಪ್ರಯಾಣ ಮಾಡಿದರು. ಇಲ್ಲಿ ರಸ್ತೆ ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಿದವರು ಯಾರು? ಈ ಹಣ ಸರ್ಕಾರದ್ದು, ಜನಸಾಮಾನ್ಯರ ತೆರಿಗೆ ಹಣ ಎಂದರು.

    ಪ್ರಧಾನಿ ಕಾರ್ಯಕ್ರಮದ ಪೆಂಡಾಲ್ ಹಾಕಲು 12 ಕೋಟಿ ಖರ್ಚು ಮಾಡಿದ್ದಾರೆ. ಈ ಹಣದಲ್ಲಿ 2 ಹೊಸ ಸೆಟ್ ಪೆಂಡಾಲ್ ಖರೀದಿ ಮಾಡಬಹುದಿತ್ತು. ಅಲ್ಲಿ ಬಂದ ಜನರೆಗೆ ನೀರಿನ ವ್ಯವಸ್ಥೆಗೆ 1 ಕೋಟಿ ಖರ್ಚು ಮಾಡಿದ್ದಾರೆ. ಎಷ್ಟು ಜನ ಬಂದಿದ್ದರು, ಬಂದದ್ದವರು, ಎಷ್ಟು ಲೀಟರ್ ನೀರು ಕುಡಿದರು? ಕನ್ನಡಿಗರ ಹಣವನ್ನು ಪ್ರಧಾನಿ ಮೋದಿ ಅವರ ಹೆಸರಲ್ಲಿ ಲೂಟಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆ ಇರಬೇಕಾ? ಇನ್ನು ಕಾರ್ಯಕ್ರಮಕ್ಕೆ ಜನ ಕರೆತರಲು ಬಸ್ ವ್ಯವಸ್ಥೆಗೆ 6.50 ಕೋಟಿ ಖರ್ಚು ಮಾಡಿದ್ದಾರೆ.

    ಈ ಹಣ ಯಾರದ್ದು? ಇದು ಕೇವಲ 1 ಕಾರ್ಯಕ್ರಮದ ಉದಾಹರಣೆ. ರಾಜ್ಯದಲ್ಲಿ ಪ್ರಧಾನಿಗಳು 7 ಬಾರಿ ದಂಡಯಾತ್ರೆ ಮಾಡಿದ್ದು, ಎಷ್ಟು ಲೂಟಿ ಮಾಡಿದ್ದಾರೆ ಹೇಳಿ. ಕಾರ್ಯಕ್ರಮದಲ್ಲಿ ಅಡುಗೆ ಮನೆ ನಿರ್ಮಾಣಕ್ಕೆ 50 ಲಕ್ಷ. ಸಾಂಸ್ಕöÈತಿಕ ಕಾರ್ಯಕ್ರಮಕ್ಕೆ 77 ಲಕ್ಷ ಖರ್ಚು ಮಾಡಿದ್ದಾರೆ. ಇದು ಬಿಜೆಪಿಯ ಭರವಸೆ. ಈ ಬಗ್ಗೆ ಉರಿಗೌಡ, ನಂಜೇಗೌಡರನ್ನು ಇಟ್ಟುಕೊಂಡು ಒಕ್ಕಲಿಗರನ್ನು ಕೊಲೆಗಡುಕರು ಎಂದು ಬಿಂಬಿಸಲು ಪ್ರಯತ್ನಿಸಿದ ಅಸ್ವಸ್ಥ ನಾರಾಯಣ ಅವರ ಕೃಪಾಕಟಾಕ್ಷದಲ್ಲಿ 30 ಕೋಟಿ ಲೂಟಿ ಮಾಡಲಾಗಿದೆ ಎಂದು ಹೇಳಿದರು.

     ಇನ್ನು ಅಮಿತ್ ಶಾ ಅವರ ಹೆಸರಲ್ಲಿ ಎಷ್ಟು ಲೂಟಿ ಮಾಡಿದ್ದಾರೋ ಗೊತ್ತಿಲ್ಲ. ಅಮಿತ್ ಶಾ ಅವರು 9 ಬಾರಿ ಬಂದಿದ್ದಾರೆ. ಪ್ರಧಾನಮಂತ್ರಿಗಳ ದಾವಣಗೆರೆ ಕಾರ್ಯಕ್ರಮಕ್ಕೆ ನಳೀನ್ ಕುಮಾರ್ ಕಟೀಲ್ ಅವರು ಎಷ್ಟು ಖರ್ಚು ಮಾಡಿದ್ದರು? ಇಲ್ಲಿ ಯಾಕೆ 30 ಕೋಟಿ ಬಿಲ್ ಮಾಡಿದ್ದಾರೆ? ಪ್ರಧಾನಮಂತ್ರಿಗಳು ಎಂಬ ಕಾರಣಕ್ಕೆ ಇವರ ಕಮಿಷನ್ ಪರ್ಸೆಂಟೇಜ್ ಹೆಚ್ಚಾಯ್ತಾ? ಚುನಾವಣಾ ಪ್ರಚಾರಕ್ಕೆ ಪರ್ಸೆಂಟೇಜ್ ಹೆಚ್ಚಾಯ್ತಾ?.

     ಈ ಸಂದರ್ಭದಲ್ಲಿ ಬಿಜೆಪಿಯವರು ಒಕ್ಕಲಿಗರನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದು, ಒಕ್ಕಲಿಗ ಸಮುದಾಯ ಅವರ ಜತೆ ಹೋಗುತ್ತದಾ ಎಂದು ಮಾಧ್ಯಮಗಳು ಕೇಳಿದಾಗ, ?ಕೆಂಪೇಗೌಡರ ಹೆಸರಲ್ಲಿ ಇವರು ಎಷ್ಟು ಲೂಟಿ ಮಾಡಿದ್ದಾರೆ ಎಂಬುದನ್ನು ಮಾಹಿತಿ ನೀಡಿದ್ದೇನೆ. ಒಕ್ಕಲಿಗರಲ್ಲ ಯಾವುದೇ ಸಮುದಾಯದವರು ಕೂಡ ಬಿಜೆಪಿಯವರ ಜತೆ ಹೋಗುವುದಿಲ್ಲ. ರಾಜ್ಯದ ಇತಿಹಾಸದಲ್ಲೇ ಇಷ್ಟು ದೊಡ್ಡ ಭ್ರಷ್ಟಾಚಾರ ನಡೆದಿರಲಿಲ್ಲ. ಅವರು ಪ್ರತಿ ಹುದ್ದೆಗಳಿಗೆ ಹಣ ನಿಗದಿ ಮಾಡಿದ್ದಾರೆ? ಎಂದು ಹೇಳಿದರು.

ಸಚಿವ ಮುನಿರತ್ನ ಬಂಧನಕ್ಕೆ ಆಗ್ರಹ;

     ಸಚಿವ ಮುನಿರತ್ನ ಅವರು ಆರ್ ಆರ್ ನಗರ ಕ್ಷೇತ್ರದಲ್ಲಿ ತಮಿಳಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಿ ದ್ವೇಷ ಹರಡುತ್ತಿದ್ದಾರೆ. ಯಾರೇ ಮತ ಕೇಳಿಕೊಂಡು ಬಂದರೂ ಅವರನ್ನು ಹೋಡೆಯಿರಿ, ಸಾಯಿಸಿರಿ ಎಂದು ಕನ್ನಡಿಗ ಹಾಗೂ ಒಕ್ಕಲಿಗ ಹೆಣ್ಣುಮಗಳ ವಿರುದ್ಧ ಪ್ರಚೋದನೆ ನೀಡಿ ಚುನಾವಣೆ ಗೆಲ್ಲಲು ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆ ಭಯದ ವಾತಾವರಣ ಸೃಷ್ಟಿಸುತ್ತಿರುವ ಸಚಿವ ಮುನಿರತ್ನ ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಕೂಡಲೇ ಬಂಧಿಸಬೇಕು ಎಂದರು.

    ಕನ್ನಡಿಗರು ಸ್ವಾಭಿಮಾನಿಗಳು, ಶಾಂತಿ ಪ್ರಿಯರು, ಅಭಿವೃದ್ಧಿಗಾಗಿ ಕರ್ನಾಟಕ ಒಂದು ಎಂದು ಸಾರಿ ಹೇಳಿದ್ದಾರೆ. ಆದರೆ ಚುನಾವಣೆಯಲ್ಲಿ ತಮ್ಮ ರಾಜಕೀಯ ಲಾಭಕ್ಕೆ ತಮಿಳಿಗರನ್ನು ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ. ಒಕ್ಕಲಿಗರನ್ನು ಗುರಿಯಾಗಿಸಿ ಸಿನಿಮಾ ತೆಗೆದು ಹಣ ಮಾಡಲು ಮುಂದಾಗುವ ಮುನಿರತ್ನ, ಪೊಲೀಸ್ ಅಧಿಕಾರಿಗಳ ಮುಂದೆ ಸಚಿವರು ಎಲ್ಲರೂ ಫೋನ್ ಆಫ್ ಮಾಡಿ, ಯಾರೂ ವಿಡಿಯೋ ಮಾಡಬೇಡಿ ಎಂದು ಹೇಳಿ, ಇಲ್ಲಿಗೆ ಯಾರೇ ಮತ ಕೇಳಿಕೊಂಡು ಬಂದರೂ ಅವರನ್ನು ಹೊಡೆದು, ಬಡೆದು ಸಾಯಿಸಿ. ನಾಳೆ ನಾನು ಅಧಿಕಾರಕ್ಕೆ ಬಂದ ನಂತರ ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದು ಅಭಯ ನೀಡಿದ್ದಾರೆ. ಆಮೂಲಕ ಕನ್ನಡಿಗ ಹಾಗೂ ಒಕ್ಕಲಿಗ ಹೆಣ್ಣು ಮಗಳ ಮೇಲೆ ಹಲ್ಲೆ ಮಾಡಲು ಸಚಿವರು ಪ್ರಚೋದಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಗಮನಿಸಬೇಕಾಗಿದೆ ಎಂದು ಡಿ.ಕೆ. ಸುರೇಶ್ ಹೇಳಿದರು.

      ರಾಜ್ಯಪಾಲರು, ಮುಖ್ಯಮಂತ್ರಿಗಳು ಇವರ ಬಂಧನಕ್ಕೆ ಸೂಚಿಸುವಂತೆ ಆಗ್ರಹಿಸುತ್ತೇನೆ. ಇವರು ಹೊರಗಡೆ ಇದ್ದರೆ ಸಮಾಜದಲ್ಲಿ ಶಾಂತಿಗೆ ಭಂಗವುAಟಾಗಲಿದೆ. ಇವರ ವಿರುದ್ಧ ದೆಹಲಿ ಚುನಾವಣಾ ಆಯೋಗಕ್ಕೂ ದೂರು ಕಳುಹಿಸಿಕೊಡುತ್ತೇವೆ. ಹೀಗಾಗಿ ಅವರ ಬಂಧನ ಹಾಗೂ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದರು.

     ಯಾರಿಗೆ ಧಮಕಿ ಹಾಕಿದ್ದಾರೆ ಎಂದು ಮಾಧ್ಯಮಗಳು ಕೇಳಿದಾಗ, ?ಯಾರೇ ಬಂದು ಮತ ಕೇಳಿದರೂ ಹೊಡೆದು ಕಳುಹಿಸಿ ಎಂದು ಹೇಳಿದ್ದಾರೆ. ನಾನು ಹೋಗಿ ಮತ ಕೇಳಿದರೂ ಹೊಡೆದು ಕಳಿಸುವಂತೆ ಹೇಳಿದ್ದಾರೆ. ಕುಸುಮಾ ಅವರನ್ನು ಸೇರಿಸಿ ಹೇಳಿದ್ದಾರೆ. ಒಕ್ಕಲಿಗ ಹೆಣ್ಣುಮಗಳ ಮೇಲೆ ಇವರಿಗೆ ಅಷ್ಟರ ಮಟ್ಟಿಗೆ ಭಯ ಬಂದಿದೆ? ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link