ವಿಜಯಸಂಕಲ್ಪ ರಥಯಾತ್ರೆ ಬಹಿಷ್ಕರಿಸಿದ ವಿ.ಸೋಮಣ್ಣ : ಬಿಜೆಪಿ ಪಾಳಯದಲ್ಲಿ ತಳಮಳ

ಬೆಂಗಳೂರು

     ವಿಜಯಸಂಕಲ್ಪ ರಥಯಾತ್ರೆಯನ್ನು ಬಹಿಷ್ಕರಿಸಿದ ವಸತಿ ಸಚಿವ ವಿ.ಸೋಮಣ್ಣ ಅವರ ನಡೆ ಬಿಜೆಪಿ ಪಾಳೆಯದಲ್ಲಿ ತೀವ್ರ ತಳಮಳ ಸೃಷ್ಟಿಸಿದ್ದು,ಅವರನ್ನು ಸಮಾಧಾನಿಸಲು ಪಕ್ಷದ ವರಿಷ್ಟರು ಮುಂದಾಗಿದ್ದಾರೆ.

    ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ವಿಜಯಸಂಕಲ್ಪ ರಥ ಯಾತ್ರೆಯಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿ.ಸೋಮಣ್ಣ ಅವರು ಭಾಗವಹಿಸಿರಲಿಲ್ಲ. ಈಲ್ಲೆಯ ಉಸ್ತುವಾರಿ ಹೊಣೆ ಹೊತ್ತಿರುವ ತಮ್ಮನ್ನು ನಿರ್ಲಕ್ಷಿಸಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಯಾತ್ರೆಯ ನೇತೃತ್ವ ನೀಡಿದ್ದು ಸೋಮಣ್ಣ ಅವರ ಅಸಮಾಧಾನಕ್ಕೆ ಕಾರಣ ಎಂಬುದು ಮೂಲಗಳ ಹೇಳಿಕೆ.

    ಅದೇ ರೀತಿ ತಮ್ಮನ್ನು ನಿರ್ಲಕ್ಷಿಸಿ ಈಶ್ವರಪ್ಪ ಅವರಿಗೆ ನೇತೃತ್ವ ವಹಿಸುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿದ್ದಾರೆ.ಅವರು ತಮ್ಮನ್ನು ನಿರಂತವಾಗಿ ತುಳಿಯುವ ಯತ್ನ ಮಾಡುತ್ತಿದ್ದು,ಅದು ಈ ಕ್ಷಣದಲ್ಲೂ ಮುಂದುವರಿದಿದೆ. ಹೀಗಾಗಿ ವಿಜಯಸಂಕಲ್ಪ ಯಾತ್ರೆಯಲ್ಲಿ ನಾನು ಪಾಲ್ಗೊಳ್ಳಲಾರೆ ಎಂದು ಸೋಮಣ್ಣ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

    ಹೀಗೆ ಸೋಮಣ್ಣ ಅವರು ತಮಗಾದ ನೋವಿನ ಬಗ್ಗೆ ಬಹಿರಂಗವಾಗಿ ಮಾತನಾಡದೆ ಯಾತ್ರೆ ಯಿಂದಲೇ ದೂರವುಳಿದ ಬೆಳವಣಿಗೆಯಿಂದ ಅಚ್ಚರಿಗೊಂಡ ಜೆ.ಪಿ.ನಡ್ಡಾ ಅವರು,ಸೋಮಣ್ಣ ಅವರ ಜತೆ ಚರ್ಚೆ ನಡೆಸಿದರು.

   ಈ ಸಂದರ್ಭದಲ್ಲಿ ತಮಗಾಗುತ್ತಿರುವ ಅವಮಾನದ ಬಗ್ಗೆ ನಡ್ಡಾ ಅವರ ಬಳಿ ಹೇಳಿಕೊಂಡ ಸೋಮಣ್ಣ ಅವರು,ನನಗೆ ಬೇಸರವಾಗಿರುವುದು ನಿಜ.ಆದರೆ ನಾನು ಪಕ್ಷಕ್ಕೆ ಅನ್ಯಾಯ ಮಾಡಲಾರೆ ಎಂದು ಹೇಳಿರುವುದಾಗಿ ಮೂಲಗಳು ವಿವರ ನೀಡಿವೆ.

    ಇದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸೂಚನೆಯ ಮೇರೆಗೆ ರಾಜ್ಯದಲ್ಲಿ ಪಕ್ಷದ ಚುನಾವಣಾ ಉಸ್ತುವಾರಿಯನ್ನು ವಹಿಸಿಕೊಂಡಿರುವ ಧರ್ಮೇಂದ್ರ ಪ್ರಧಾನ್ ಅವರೂ ಸೋಮಣ್ಣ ಅವರನ್ನು ಸಂಪರ್ಕ ಮಾಡಿದ್ದರು ಎಂಬುದು ಇದೇ ಮೂಲಗಳ ಹೇಳಿಕೆ. ಈ ಸಂದರ್ಭದಲ್ಲಿ ತಮಗಾಗುತ್ತಿರುವ ಕಿರುಕುಳದ ಬಗ್ಗೆ ಸೋಮಣ್ಣ ಅವರು ವಿವರಿಸಿದಾಗ,ಇದೆಲ್ಲವನ್ನೂಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ.ನೀವು ಪಕ್ಷದ ಕೆಲಸದಿಂದ ಹಿಂದೆ ಸರಿಯಬೇಡಿ ಅಂತ ಧರ್ಮೇಂದ್ರ ಪ್ರಧಾನ್ ಹೇಳಿದರು.

   ಆದರೆ ಧರ್ಮೇಂದ್ರ ಪ್ರಧಾನ್ ಅವರಿಗೂ ತಮ್ಮ ನಡೆಯ ಬಗ್ಗೆ ಸ್ಪಷ್ಟಪಡಿಸಿದ ಸೋಮಣ್ಣ,ಪಕ್ಷ ನನಗೆ ತಾಯಿಯಿದ್ದಂತೆ.ಪಕ್ಷದ ಕೆಲಸಗಳಲ್ಲಿ ನಾನು ಯಾವತ್ತೂ ಹಿಂಜರಿಯಲಾರೆ.ಪಕ್ಷ ಏನು ಸೂಚಿಸುತ್ತದೋ ?ಅದನ್ನು ಮಾಡುತ್ತೇನೆ.ಆದರೆ ವಿಜಯಸಂಕಲ್ಪ ಯಾತ್ರೆಯ ನೇತೃತ್ವವನ್ನು ಈಶ್ವರಪ್ಪ ಅವರಿಗೆ ನೀಡಿ,ತಮಗೆ ಮಾಡಿರುವ ಅವಮಾನವನ್ನು ಸಹಿಸಿಕೊಳ್ಳುವುದು ಕಷ್ಟ.ಆದರೆ ಈ ಕುರಿತು ಪಕ್ಷಕ್ಕೆ ವಿರುದ್ದವಾಗಿ ಮಾತನಾಡುವುದಿಲ್ಲ ಎಂದು ಸೋಮಣ್ಣ ಸಸ್ಪಷ್ಟಪಡಿಸಿದರು. ಹೀಗೆ ವಿಜಯಸಂಕಲ್ಪ ರಥ ಯಾತ್ರೆಗೆ ಗೈರು ಹಾಜರಾಗಿರುವ ಸೋಮಣ್ಣ ಅವರು,ಈ ಕ್ಷಣದವರೆಗೆ ತಮಗದ ನೋವಿನ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ.

    ಆದರೆ ಮಲೆ ಮಹದೇಶ್ವರ ಬೆಟ್ಟದಿಂದ ಬುಧವಾರ ಹೊರಟ ವಿಜಯಸಂಕಲ್ಪ ಯಾತ್ರೆ ಮೂರು ವಾರಗಳ ಕಾಲ ನಡೆಯುತ್ತದೆಯಾದರೂ,ಅದರಲ್ಲಿ ಭಾಗಿಯಾಗದೆ ಇರಲು ತೀರ್ಮಾನಿಸಿದ್ದಾರೆ. ಈ ಮಧ್ಯೆ ಗುರುವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ಸೋಮಣ್ಣ,ವಸತಿ ಮತ್ತು ಮೂಲಸೌಕರ್ಯ ಇಲಾಖೆಗೆ ಸಂಬಂಧಪಟ್ಟ ಕಡತಗಳನ್ನು ವಿಲೇವಾರಿ ಮಾಡಲು ಆದ್ಯತೆ ನೀಡಿದ್ದು ವ್ಯಾಪಕ ಕುತೂಹಲ ಕೆರಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap