ರಾಜ್ಯವನ್ನು ಬಿಜೆಪಿ ಗುಡಿಸಿ ಗುಂಡಾಂತರ ಮಾಡುತ್ತಿದೆ : ಬಿ.ಕೆ ಹರಿ ಪ್ರಸಾದ್

ಬೆಂಗಳೂರು

      ರಾಜ್ಯವನ್ನ ಗುಡಿಸಿ ಗುಂಡಾಂತರ ಮಾಡಿರುವ ಭ್ರಷ್ಟ ಬಿಜೆಪಿ ಸರ್ಕಾರ,ದೇಶದ ಎದುರು ರಾಜ್ಯದ ಮಾನ ಹರಾಜಿಗಿಟ್ಟಿದೆ. ವಾರಕ್ಕೆ ಎರಡು ಬಾರಿ ಚುನಾವಣಾ ಪ್ರವಾಸಿಗರಾದ ಮೋದಿ ಮತ್ತು ಶಾ ಜೋಡಿ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ವಸೂಲಾಗಿರುವ ಪೇ ಸಿಎಂ ಹಣದ ಪಾಲಿಗಾಗಿಯೇ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

     ಬಿಜೆಪಿಗೆ ಸುಳ್ಳು ಮನೆ ದೇವರಾದರೆ, ಭ್ರಷ್ಟಾಚಾರ ಪಕ್ಷದ ಅಧಿಕೃತ ಕಾರ್ಯಕ್ರಮ. ದಾಖಲೆ ಸಮೇತ ಕಂತು ಕಂತಿನ ನೋಟುಗಳು ಮಂಚದ ಮೇಲೆ ಸಿಕ್ಕ ಮೇಲೂ ಬಿಜೆಪಿ ಶಾಸಕರ ಮೇಲೆ ಕ್ರಮ ಯಾಕಿಲ್ಲ ಬಸವರಾಜ ಬೊಮ್ಮಾಯಿ ಅವರೇ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿ ಪ್ರಸಾದ್ ಪ್ರಶ್ನಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ನಾ ಖಾನೇ ದೂಂಗಾವಾಲ ಪ್ರಧಾನಿ ನರೇಂದ್ರ ಮೋದಿ ಅವರೇ ,ಶಾಸಕರ ಕಮಿಷನ್ ವ್ಯವಹಾರದಲ್ಲಿ ನಿಮ್ಮಮ ಮೌನದ ಪಾಲೆಷ್ಟು? 40% ಭ್ರಷ್ಟಾಚಾರದ ಸಾಕ್ಷಿ ಸಿಕ್ಕರೂ ತಾಕತ್ತು,ಧಮ್ಮು,ಹಮ್ಮು,ಬಿಮ್ಮುಗಳು ಯಾವ ಬಿಲದಲ್ಲಿ ಅಡಗಿ ಕುಳಿತಿವೆ? ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap