ಆಜಾನ್‌ ವಿವಾದ : ಬಜೆಪಿಯೇ ಮೂಲ ಕಾರಣ :ಹೆಚ್ ಡಿ ಕೆ

ಬೆಂಗಳೂರು: 

  ಶಿವಮೊಗ್ಗದ ಡಿಸಿ ಕಚೇರಿ ಎದುರು ಆಜಾನ್​ ಕೂಗಿದ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಈ ವಿವಾದ ಸೃಷ್ಠಿಗೆ ಬಿಜೆಪಿಯೇ ಮೂಲ ಕಾರಣ ಎಂದು ಹೇಳಿದ್ದಾರೆ.

     ಮಂಡ್ಯ ತಾಲೂಕಿನ ಮಾಚಹಳ್ಳಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ‘ಇದು ಅತ್ಯಂತ್ಯ ಸೂಕ್ಷ್ಮವಾದ ವಿಚಾರವಾಗಿದೆ. ರಾಜ್ಯದಲ್ಲಿ ಈ ರೀತಿಯ ವಿಚಾರಗಳು ಪ್ರಾರಂಭ ಆಗುವುದಕ್ಕೆ ಬಿಜೆಪಿಯವರು ಕಾರಣರಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಇನ್ನೊಂದು ಧರ್ಮದ ಕೆಲ ಕಿಡಿಗೇಡಿಗಳ ಪಾತ್ರವಿದೆ. ಈಶ್ವರಪ್ಪನ ಹೇಳಿಕೆ ಇರಲಿ ಅಥವಾ ಇಲ್ಲಾ ಬಿಜೆಪಿಯವನ ಇನ್ಯಾವನ ಹೇಳಿಕೆಯೇ ಇರಲಿ. ಇವತ್ತು ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು. ಈ ದೇಶ ಈ ರೀತಿಯಾದ ಪ್ರಕರಣದಲ್ಲಿ ಚಿತಾವಣೆ ಮಾಡುವವರೂ ಯಾರೇ ಇರ್ಲಿ ಅಂತವರ ವಿರುದ್ದ ಕಠಿಣವಾದ ಕ್ರಮ ಕೈಗೊಳ್ಳಬೇಕೆಂದು ಎಂದು ಆಗ್ರಹಿಸಿದರು.

    ಬ್ಯಾಡಗಿ ಪಟ್ಟಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಸಿ.ಟಿ ರವಿ ಅವರು, ‘ಬಿನ್ ಲಾಡೆನ್ ಥರ ಗುರುತಿಸಿಕೊಂಡರೆ ನಾವು ರೆಡಿ ಇಟ್ಟುಕೊಂಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ತಯಾರಾಗಿದ್ದೇವೆ. ಬೆಂಕಿ ಹಾಕಲು ಬಂದರೆ ಯೋಗಿ ಆದಿತ್ಯನಾಥ್ ಥರ ಕರ್ನಾಟಕದಲ್ಲಿ ಬುಲ್ಡೋಜರ್ ಚಾಲು ಮಾಡುತ್ತೇವೆ. ಒಂದು ವೇಳೆ ನೀವೂ ಒಸಾಮಾ ಬಿನ್ ಲಾಡೆನ್ ಆಗಿ ಬಂದರೆ ಮಟಾಸ್ ಆಗೋದು ಗ್ಯಾರಂಟಿ. ಜಿನ್ನಾನ ಮನಸ್ಥಿತಿ ಇಟ್ಟುಕೊಂಡು ಸಂಚು ಮಾಡಿದರೆ. ಒಪ್ಪಂದಕ್ಕೆ ಸಹಿ ಹಾಕಲು ಕಾಂಗ್ರೆಸ್​​ ಮತ್ತು ನೆಹರು ಈಗ ಇಲ್ಲ. ಇವತ್ತು ಇರೋದು ಬಿಜೆಪಿ, ಕೇಂದ್ರದಲ್ಲಿ ಮೋದಿ ಇದ್ದಾರೆ. ಹೀಗಾಗಿ ನೀವು ಎಚ್ಚರಿಕೆಯಿಂದ ಯೋಚನೆ ಮಾಡಿ ಎಂದು ಹಿಂದೂ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap