ನವದೆಹಲಿ:
ಲೋಕಸಭೆ ಚುನಾವಣೆಯ ನಡುವೆಯೇ ಕಾಂಗ್ರೆಸ್‌ನ ಮಾಜಿ ನಾಯಕಿ ರಾಧಿಕಾ ಖೇರಾ ಮತ್ತು ನಟ ಶೇಖರ್ ಸುಮನ್ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾದರು. ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮಾಜಿ ರಾಷ್ಟ್ರೀಯ ಸಮನ್ವಯಾಧಿಕಾರಿಯಾದ ಖೇರಾ ಅವರು ಪಕ್ಷದ ಛತ್ತೀಸ್‌ಗಢದ ಕಚೇರಿಯಲ್ಲಿ ಮತ್ತೊಬ್ಬ ನಾಯಕನೊಂದಿಗೆ ವಾಗ್ವಾದ ನಡೆಸಿದ ಮಾರನೇ ದಿನ ಭಾನುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕಾಗಿ ಪಕ್ಷದಲ್ಲಿ ವಿರೋಧವನ್ನು ಎದುರಿಸುತ್ತಿರುವುದಾಗಿ ಖೇರಾ ಅವರು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿದ್ದ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ರಾಷ್ಟ್ರೀಯ ಮಾಧ್ಯಮ ವಿಭಾಗದ ಉಸ್ತುವಾರಿ ಅನಿಲ್ ಬಲುನಿ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ಖೇರಾ ಮತ್ತು ಸುಮನ್ ಇಬ್ಬರೂ ಕೇಸರಿ ಪಕ್ಷ ಸೇರಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ