ಹುಳಿಯಾರು:
ಹೋಬಳಿಯ ಕೆ.ಸಿ.ಪಾಳ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.ಗ್ರಾಪಂ ಸದಸ್ಯೆ ಗಿರಿಜಮ್ಮ, ಮುಖಂಡರಾದ ಮಲ್ಲೇಶಣ್ಣ, ನಗಾರಿಹೊನ್ನಪ್ಪ ಸೇರಿದಂತೆ ಅನೇಕರು ಜೆ.ಸಿ.ಮಾಧುಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಕೆ.ಆರ್.ಮಂಜುನಾಥ್ ಅವರು ಮಾತನಾಡಿ ಜೆ.ಸಿ.ಮಾಧುಸ್ವಾಮಿ ಅವರು 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೇಮಾವತಿ ಕಾಮಗಾರಿಯನ್ನು ಮುಗಿಸಿ ತಾಲೂಕಿಗೆ 2 ಬಾರಿ ಹೇಮೆ ನೀರು ಹರಿಸಿದ್ದಾರೆ. ಅಲ್ಲದೆ ರಸ್ತೆ, ನೀರು ಸೇರಿದಂತೆ ಅನೇಕ ಸಮುದಾಯದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರಲ್ಲದೆ ಕೆ.ಸಿ.ಪಾಳ್ಯ ಗ್ರಾಮದಲ್ಲಿ ರಸ್ತೆ ಸೇರಿದಂತೆ ಅನೇಕ ಮೂಲಸೌಕರ್ಯ ಸಮಸ್ಯೆ ಎದುರಿಸುತ್ತಿದೆ. ಸಚಿವರು ವಿಶೇಷ ಕಾಳಜಿ ವಹಿಸಿ ಗ್ರಾಮದ ಅಭಿವೃದ್ಧಿಗೆ ಮುಂದಾಗುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಂಕೆರೆ ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್, ಸದಸ್ಯರುಗಳಾದ ಮಹಾಲಕ್ಷ್ಮೀ, ನಾಗಣ್ಣ, ರಮಗನಾಥ್, ಮನೋಹರ್, ಬೆಂಕಿಬಸವರಾಜು, ಮುಖಂಡರಾದ ಬರಕನಹಾಲ್ ವಿಶ್ವನಾಥ್, ಮಲ್ಲಿಕಾರ್ಜುನ್, ಬಾಲರಾಜು, ಕೆ.ಸಿ.ಪಾಳ್ಯದ ಜಯಣ್ಣ, ಲಕ್ಕಪ್ಪ, ಶಿವಣ್ಣ ಮತ್ತಿತರರು ಇದ್ದರು.
ಹುಳಿಯಾರು ಸಮೀಪದ ಕೆ.ಸಿ.ಪಾಳ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ