ಕಲಾಪಕ್ಕೆ ಗೈರಾದ 20 ಸಂಸದರಿಗೆ ಬಿಜೆಪಿ ನೋಟಿಸ್

ಹೊಸದಿಲ್ಲಿ: 

   ಒಂದು ದೇಶ ಒಂದು ಚುನಾವಣೆ’ ಮಸೂದೆ ಮಂಡನೆಗಗಿನ ಮತದಾನದ ವೇಳೆ ಪಕ್ಷದ ವಿಪ್ ಹೊರತಾಗಿಯೂ ಲೋಕಸಭೆಗೆ ಗೈರಾಗಿದ್ದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಒಟ್ಟು 18 ಸಂಸದರಿಗೆ ವಿವರಣೆ ಕೋರಿ ಬಿಜೆಪಿ ನೋಟಿಸ್ ಜಾರಿಗೊಳಿಸಿದೆ.

   ಮಂಗಳವಾರ ಲೋಕಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ’ ಮಸೂದೆ ಮಂಡನೆಗಾಗಿ ನಡೆದ ಮತದಾನದ ವೇಳೆ ಆಡಳಿತಾರೂಢ ಬಿಜೆಪಿಯ 20 ಸಂಸದರು ಸದನಕ್ಕೆ ಗೈರಾಗಿದ್ದುದರಿಂದ, ಬಿಜೆಪಿ ಮುಜುಗರಕ್ಕೀಡಾಯಿತು. ‘ಒಂದು ದೇಶ ಒಂದು ಚುನಾವಣೆ’ ಮಸೂದೆಗೆ ಆಡಳಿತಾರೂಢ ಬಿಜೆಪಿಯಲ್ಲೇ ಸಹಮತವಿಲ್ಲ ಎಂದು ವಿಪಕ್ಷಗಳ ಟೀಕೆಯಿಂದ ಬಿಜೆಪಿ ಮುಜುಗರಕ್ಕಿಡಾಗಿದೆ. ಹೀಗಾಗಿ ಲೋಕಸಭೆಗೆ ಎಲ್ಲರೂ ಕಡ್ಡಾಯವಾಗಿ ಹಾಜರಾಗಬೇಕು ಎಂದು ವಿಪ್ ಜಾರಿಗೊಳಿಸಿದ್ದರೂ, ಲೋಕಸಭೆಗೆ ಗೈರಾಗಿದ್ದ ಎಲ್ಲ 20 ಮಂದಿಗೆ ಬಿಜೆಪಿ ನೋಟಿಸ್ ಜಾರಿಗೊಳಿಸಿದೆ.

   ಲೋಕಸಭೆಯಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಬಿಲ್ ಮಂಡಿಸುವ ವೇಳೆ ಗೈರಾದ ಕಾರಣಕ್ಕೆ ಹಲವು ಬಿಜೆಪಿ ಸಂಸದರನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿತಿನ್ ಗಡ್ಕರಿ, ಗಿರಿರಾಜ್ ಸಿಂಗ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಒಟ್ಟು 20 ಸಂಸದರು ಗೈರಾಗಿದ್ರು. ಎಲ್ಲಾ ಸಂಸದರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಪಕ್ಷವು ಮೂರು ಸಾಲಿನ ವಿಪ್ ಜಾರಿ ಮಾಡಿತ್ತು. ಆದರೆ, ಈಗ ಪಕ್ಷದ ಆದೇಶವನ್ನು ಧಿಕ್ಕರಿಸಿ ಗೈರುಹಾಜರಾದ ಸಂಸದರಿಗೆ ನೋಟಿಸ್ ಕಳುಹಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ. ಒನ್ ನೇಷನ್, ಒನ್ ಎಲೆಕ್ಷನ್ ಬಿಲ್ ವಿವಾದಕ್ಕೀಡಾಗಿದ್ದು, ವಿರೋಧ ಪಕ್ಷಗಳಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೀಕೆಗಳ ಹೊರತಾಗಿಯೂ, ಸಂವಿಧಾನದ (129 ನೇ ತಿದ್ದುಪಡಿ) ಮಸೂದೆಯನ್ನು ಸದನದಲ್ಲಿ ಮಂಡಿಸಿದ್ದು, ಮತದಾನದ ವೇಳೆ 269 ಪರವಾಗಿ ಮತ್ತು 198 ವಿರುದ್ಧವಾಗಿ ಮತ ಚಲಾಯಿಸಿದ್ದರು.

   ಲೋಕಸಭೆಯಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಮಸೂದೆಯನ್ನು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಂಡಿಸಿದರು, ಅವರು ಮಸೂದೆಗೆ ಸಂಬಂಧಿಸಿದಂತೆ ಮಾತನಾಡಿ, ರಾಜ್ಯಗಳ ಸ್ವಾಯತ್ತತೆ ಅಥವಾ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸದನಕ್ಕೆ ಭರವಸೆ ನೀಡಿದರು. ಮಸೂದೆಯು ಮೂಲಭೂತ ರಚನೆಯ ಸಿದ್ಧಾಂತವನ್ನು ಉಲ್ಲಂಘಿಸಿದೆ ಎಂಬ ವಿರೋಧದ ಹೇಳಿಕೆಗಳನ್ನು ಅರ್ಜುನ್ ರಾಮ್ ಅವರು ತಳ್ಳಿಹಾಕಿದರು ಮತ್ತು ಶಾಸನವು ಸಾಂವಿಧಾನಿಕ ತತ್ವಗಳಿಗೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.

   ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಅವರು, ಮಸೂದೆಯನ್ನು ಸಂವಿಧಾನದ ಕೆಲವು ವೈಶಿಷ್ಟ್ಯಗಳನ್ನು ಸಂಸತ್ತಿನ ತಿದ್ದುಪಡಿ ಅಧಿಕಾರವನ್ನು ಮೀರಿದ ಮೂಲಭೂತ ರಚನೆಯ ಸಿದ್ಧಾಂತದ ಮೇಲಿನ ಆಕ್ರಮಣ ಎಂದು ಕರೆದರು. ಒಂದು ಅತ್ಯಗತ್ಯ ವೈಶಿಷ್ಟ್ಯವೆಂದರೆ ನಮ್ಮ ಪ್ರಜಾಪ್ರಭುತ್ವದ ರಚನೆ. ಈ ಮಸೂದೆಗಳು ಸಂವಿಧಾನದ ಮೂಲ ರಚನೆಯ ಮೇಲೆ ಆಕ್ರಮಣ ಮಾಡುತ್ತವೆ ಎಂದು ತಿಳಿಸಿದರು. ತೃಣಮೂಲ ಕಾಂಗ್ರೆಸ್ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಅವರು ಮಾತನಾಡಿ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಅಥವಾ ಸಂಸತ್ತಿಗೆ ಅಧೀನವಾಗಿಲ್ಲ, ಮಸೂದೆಗಳು ರಾಜ್ಯ ವಿಧಾನಸಭೆಯ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತವೆ, ಇದು ಚುನಾವಣಾ ಸುಧಾರಣೆಯಲ್ಲ ಎಂದು ಹೇಳಿದರು.

Recent Articles

spot_img

Related Stories

Share via
Copy link