ಮತ ಕೇಳುವ ಯೋಗ್ಯತೆ ಬಿಜೆಪಿಗರಿಗೆ ಇಲ್ಲ : ಸಿಎಂ

ಶಿಡ್ಲಘಟ್ಟ:

    ಪ್ರಧಾನಿಯಾಗಿರಲು ಮೋದಿ ನಾಲಾಯಕ್ ಎಂದು ವಿದ್ಯಾವಂತ ಯುವ ಸಮೂಹ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.

    ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಆಯೋಜಿಸಿದ್ದ ರೋಡ್ ಶೋನಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರ ಮತ ಯಾಚಿಸಿದ ಮುಖ್ಯಮಂತ್ರಿ, ಇಂಥಾ ನಾಲಾಯಕ್ ಗೆ ಮತ ಹಾಕ್ತೀರಾ? ಹತ್ತತ್ತು ವರ್ಷ ಮತ ಹಾಕಿದ್ದೀರ ನಿಮಗೆ, ದೇಶಕ್ಕೆ ಏನಾದ್ರೂ ಸಿಕ್ಕಿತಾ? ಈ ಹತ್ತು ವರ್ಷದಲ್ಲಿ ಏನೇನೂ ಕೊಡದವರು ಈ ಬಾರಿ ನಿಮ್ಮ ಮತ ಕೇಳುತ್ತಿದ್ದಾರೆ, ಹೀಗೆ ಮತ ಕೇಳುವ ಯೋಗ್ಯತೆಯಾಗಲೀ, ಅರ್ಹತೆಯಾಗಲೀ ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಇದೆಯೇ? ಎಂದು ಪ್ರಶ್ನಿಸಿದರು.

    ನಾಲಾಯಕ್ ನರೇಂದ್ರ ಮೋದಿ ಬರುವ ಮೊದಲು ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಬೇಳೆಕಾಳು, ಅಡುಗೆ ಎಣ್ಣೆ ಬೆಲೆ ಎಷ್ಟಿತ್ತು? ಈಗ ಎಷ್ಟಾಗಿದೆ?‌ ಹೀಗಾಗಿ ಬಿಜೆಪಿಯ ಖಾಲಿ ಚೊಂಬಿಗೆ ಮತ ಹಾಕ್ತೀರಾ? ನಿಮ್ಮ ಜೇಬು ತುಂಬಿಸುವ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿ ನುಡಿದಂತೆ ನಡೆಯುವ ನಮಗೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕ್ತೀರೋ? ಎನ್ನುವುದನ್ನು ಯೋಚಿಸಿ ತೀರ್ಮಾನಿಸಿ ಎಂದರು.

    ದೇವೇಗೌಡರೇ, ಪ್ರಧಾನಿ ಮೋದಿ ಅವರು ಕನ್ನಡಿಗರಿಗೆ ನೀಡಿರುವ ಖಾಲಿ ಚೊಂಬು ಅಕ್ಷಯಪಾತ್ರೆಯೇ ಆಗಿದ್ದರೆ ನಮ್ಮ ತೆರಿಗೆ ಪಾಲು, ವಿಶೇಷ ಅನುದಾನ, ಬರ ಪರಿಹಾರ ಯಾಕೆ ಇನ್ನು ಬಂದಿಲ್ಲ? ಸ್ವಾತಂತ್ರ್ಯ ನಂತರದಿಂದ 2014ರ ವರೆಗೆ ರೂ. 53 ಲಕ್ಷ ಕೋಟಿ ಇದ್ದ ದೇಶದ ಸಾಲ ಇಂದು ರೂ. 187 ಲಕ್ಷ ಕೋಟಿಗೆ ಯಾಕೆ ತಲುಪಿದೆ? ಎಂದು ವಾಗ್ದಾಳಿ ನಡೆಸಿದರು.

    ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂತ ಇಡೀ ದೇಶದ ಯುವಕ, ಯುವತಿಯರಿಗೆ ನಂಬಿಸಿದರು. ನರೇಂದ್ರ ಮೋದಿ ಮಾತನ್ನು ನಂಬಿ ಯುವ ಸಮೂಹ ಮತ ಹಾಕಿದ್ರು. ಹೀಗೆ ಮತ ಹಾಕಿದವರೆಲ್ಲಾ ಡಿಗ್ರಿ ಮುಗಿಸಿ ಕೆಲ್ಸ ಕೊಡಿ ಎಂದು ಕೇಳಿದರೆ, “ಹೋಗಿ ಪಕೋಡ ಮಾರಾಟ ಮಾರಿ” ಅಂದರು. ನಿರುದ್ಯೋಗಿ ಯುವಕ/ಯುವತಿಯರಿಗೆ ಪಕೋಡ ಮಾರಿ ಅನ್ನೋಕೆ ಮೋದಿಯೇ ಪ್ರಧಾನಿ ಆಗಬೇಕಿತ್ತಾ?ಎಂದು ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap