ತೆಲಂಗಾಣ:
ದೇಶದೆಲ್ಲಡೆಯಲ್ಲಿ ವಿಪಕ್ಷಗಳ ನಾಯಕರು ಬಂಧನಕ್ಕೀಡಾದರೆ ನೆರೆಯ ತೆಲಂಗಾಣದಲ್ಲಿ ವಿಚಿತ್ರ ಎಂಬಂತೆ ತೆಲಂಗಾಣ ಬಿಜೆಪಿಯ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಕರೀಮ್ ನಗರ ದಲ್ಲಿರುವ ನಿವಾಸದಲ್ಲಿ ಸಂಜಯ್ ಕುಮಾರ್ ಅವರನ್ನು ಬುಧವಾರ ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ .
ತೆಲಂಗಾಣ ರಾಜ್ಯ ಸಾರ್ವಜನಿಕ ಸೇವಾ ಆಯೋಗ ಮತ್ತು 10ನೇ ತರಗತಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಇದಕ್ಕೆ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಸರ್ಕಾರವೇ ನೇರಹೊಣೆ ಎಂದು ಆರೋಪಿಸಿದ್ದ ಬಂಡಿ ಸಂಜಯ್ ಕುಮಾರ್, ‘ಇದರಲ್ಲಿ ನೇರ ಪ್ರಭಾವ ಇರುವುದು ಮುಖ್ಯಮಂತ್ರಿ ಕೆಸಿಆರ್ ಮತ್ತು ಅವರ ಪುತ್ರ ಕೆಟಿಆರ್ ಅವರೇ ಹೊಣೆ. ಹೀಗಾಗಿ ಅವರಿಬ್ಬರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಇದೀಗ ಅದೇ ಆರೋಪದಡಿ ಬಂಡಿ ಸಂಜಯ್ ಅವರನ್ನೇ ಬಂಧಿಸಲಾಗಿದೆ ಎನ್ನಲಾಗಿದೆ.
ತಡರಾತ್ರಿ 12.47ರ ಹೊತ್ತಿಗೆ ಬಂಡಿ ಸಂಜಯ್ ಅವರ ಟ್ವಿಟರ್ ಅಕೌಂಟ್ನಲ್ಲಿ, ಅವರ ಬಂಧನದ ದೃಶ್ಯಗಳನ್ನು ಪೋಸ್ಟ್ ಮಾಡಲಾಗಿದೆ. ಹಾಗೇ, ‘ಭಾರತ್ ರಾಷ್ಟ್ರ ಸಮಿತಿ ಪಕ್ಷದಲ್ಲಿ ಭಯ ಮನೆ ಮಾಡಿದೆ. ಮೊದಲು ನಾನು ಸುದ್ದಿಗೋಷ್ಠಿ ನಡೆಸುವುದನ್ನು ತಪ್ಪಿಸಿದರು.
ರಾತ್ರೋರಾತ್ರಿ ಬಂದು ಅರೆಸ್ಟ್ ಮಾಡಿದರು. ಬಿಆರ್ಎಸ್ ಸರ್ಕಾರ ಮಾಡುತ್ತಿರುವ ತಪ್ಪುಗಳನ್ನು ಪ್ರಶ್ನಿಸುತ್ತಿರುವುದೇ ನಾನು ಮಾಡುತ್ತಿರುವ ಪ್ರಮಾದ. ನಾನು ಜೈಲಿನಲ್ಲಿದ್ದರೂ ಸರಿ, ಬಿಆರ್ಎಸ್ ಪಕ್ಷದ ಭ್ರಷ್ಟಾಚಾರ, ತಪ್ಪುಗಳನ್ನು ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಕೂಡ ಟ್ವೀಟ್ ಮಾಡಲಾಗಿದೆ.
‘ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್, ಜೈ ತೆಲಂಗಾಣ’ ಎಂದೂ ಬರೆದಿದ್ದಾರೆ. ಏಪ್ರಿಲ್ 8ರಂದು ತೆಲಂಗಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಡಲಿದ್ದಾರೆ. ಅದಕ್ಕೂ ಪೂರ್ವ ಬಿಜೆಪಿ ರಾಜ್ಯಾಧ್ಯಕ್ಷನ ಬಂಧನವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ