ತುಮಕೂರು : ಮಾರ್ಚ್ ನಲ್ಲಿ ಬಿಜೆಪಿ ವಿಜಯ ಸಂಕಲ್ಪಯಾತ್ರೆ

ತುಮಕೂರು

    ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 11 ವಿಧಾನಸಭೆ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಗುರಿ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸರ್ಕಾರ ಕಾರ್ಯಕ್ರಮಗಳನ್ನು ಮನೆ ಮನೆ ತಲುಪಿಸಲು ಮಾರ್ಚ್ನಲ್ಲಿ ವಿಜಯ ಸಂಕಲ್ಪ ಯಾತ್ರೆ ರೋಡ್ ಶೋ, ಸಾರ್ವಜನಿಕ ಸಭೆಯನ್ನು ತುಮಕೂರು ಸಂಘಟನಾತ್ಮಕ ಜಿಲ್ಲೆಯಲ್ಲಿ ಮಾ.16 ರಿಂದ 18ರವರೆಗೆ ಹಮ್ಮಿಕೊಂಡಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕರವಿ ತಿಳಿಸಿದರು.

    ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯು ಈಗಾಗಲೇ ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಅಭಿಯಾನವನ್ನು ಎಲ್ಲಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಿದ್ದು, ರಾಜ್ಯದ 58186 ಬೂತ್‌ಗಳಲ್ಲಿನ ಕಾರ್ಯಕರ್ತರನ್ನು ಚುನಾವಣಾ ಕಾರ್ಯಕ್ಕೆ ಸಜ್ಜುಗೊಳಿಸಲಾಗಿದೆ. ಇದರ ವಿಸ್ತರಿತ ಕಾರ್ಯವಾಗಿ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದ್ದು ಪ್ರತೀ ದಿನ 3 ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ರೋಡ್ ಶೋ, ಪ್ರಗತಿ ರಥ ವಾಹನ(ಎಲ್‌ಇಡಿ) ಪ್ರದರ್ಶನ ಹಾಗೂ ಜನರಿಂದ ಪ್ರಣಾಳಿಕೆಗಳಿಗೆ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದರು.

ಮಾ.16 ರಿಂದ 18ರವರೆಗೆ ಯಾತ್ರೆ:

    ತುಮಕೂರು ಸಂಘಟನಾತ್ಮಕ ಜಿಲ್ಲೆಯ ತುಮಕೂರು ನಗರದಲ್ಲಿ ಮಾರ್ಚ್ 16ರಂದು, ತುಮಕೂರು ಗ್ರಾಮಾಂತರ, ಕುಣಿಗಲ್, ತುರುವೇಕೆರೆಯಲ್ಲಿ ಮಾರ್ಚ್ 17ರಂದು, ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ ವಿಧಾನಸಭೆ ಕ್ಷೇತ್ರಗಳಲ್ಲಿ ಮಾ.18ರಂದು ವಿಜಯಸಂಕಲ್ಪ ಯಾತ್ರೆ ನಡೆಯಲಿದೆ. ದಿನವೊಂದಕ್ಕೆ ಮೂರು ಕ್ಷೇತ್ರಗಳಲ್ಲಿ ಯಾತ್ರೆ ರೋಡ್‌ಶೋ ನಡೆಯಲಿದ್ದು, ಸಂಜೆವೇಳೆಗೆ ತಲುಪುವ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುತ್ತದೆ.

     ಈ ರೋಡ್ ಶೋ, ಸಾರ್ವಜನಿಕ ಸಭೆಯಲ್ಲಿ ಸಿಎಂ ಬಸವರಾಜಬೊಮ್ಮಾಯಿ, ಮಾಜಿ ಸಿಎಂ. ಬಿಎಸ್.ಯಡಿಯೂರಪ್ಪ , ಬಿ.ಎಲ್.ಸಂತೋಷ್ ಸೇರಿ ಅನೇಕ ಸ್ಟಾರ್ ಕ್ಯಾಂಪೈನರ್‌ಗಖಳು ಪಾಲ್ಗೊಳ್ಳುವರು. ಮಾ.16ರಂದು ಮೊದಲ ದಿನದ ಯಾತ್ರೆ ಸಚಿವ ಅಶೋಕ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡ ಆಗಮಿಸಲಿದೆ. ಜಿಲ್ಲೆಯ ಸಚಿವರು, ಶಾಸಕರು, ಮುಖಂಡರು ಪಾಲ್ಗೊಳ್ಳುವರು ಎಂದರು.

ವಿವಿಧ ಮೋರ್ಚಾಗಳ ಸಮಾವೇಶ

    ವಿಜಯ ಸಂಕಲ್ಪ ಯಾತ್ರೆಯ ಜೊತೆಗೆ ಮಾರ್ಚ್ನಲ್ಲಿ ಪ್ರತೀ ಕ್ಷೇತ್ರದಲ್ಲೂ ವಿವಿಧ ಮೋರ್ಚಾಗಳ ಸಮಾವೇಶ ನಡೆಸುತ್ತಿದ್ದು, ತುಮಕೂರು ಸಂಘಟನಾತ್ಮಕ ಜಿಲ್ಲೆಯ ಕುಣಿಗಲ್‌ನಲ್ಲಿ ರೈತ ಮೋರ್ಚಾ ಸಮಾವೇಶ, ಗುಬ್ಬಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ, ತಿಪಟೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ, ತುಮಕೂರು ನಗರ, ತುರುವೇಕೆರೆಯಲ್ಲಿ ಯುವ ಮೋರ್ಚಾ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ವಿಜಯಕುಮಾರ್, ಕೆಂಪೇಗೌಡ, ರಾಜೇಶ್, ಸಂದೀಪ್, ಕೆ.ಪಿ.ಮಹೇಶ್, ಟಿ.ಆರ್.ಸದಾಶಿವಯ್ಯ, ಜಗದೀಶ್ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap