ಸಾಧನೆಯ ಕಾರ್ಡ್ ಮೂಲಕ ಬಿಜೆಪಿ ಗೆಲುವು: ಸಿ.ಟಿ.ರವಿ

ಬೆಂಗಳೂರು

   ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಸಾಧನೆಯ ಕಾರ್ಡ್ ಮುಂದಿಟ್ಟು ರಾಜ್ಯದ ಹಿರಿಯ ನಾಯಕರಾದ ಬಿ.ಎಸ್.ಯಡಿಯುರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಜಯಭೇರಿ ಬಾರಿಸುತ್ತೇವೆ ಎಂದು ರಾಷ್ಟ್ರೀ ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

   ಕುಂದಗೋಳ ಮತಕ್ಷೇತ್ರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಟೂಲ್ ಕಿಟ್ ಬಳಸಿಕೊಂಡು ಜನರಿಗೆ ವಾರಂಟಿ ಇಲ್ಲದ ಗ್ಯಾರೆಂಟಿ ಕಾರ್ಡ್ ಕೊಡುವುದು ಕಾಂಗ್ರೆಸ್ ಸಾಧನೆ. ಚುನಾವಣೆ ಸಮಯದಲ್ಲಿ ಸಾಧನೆಗಳು ಮಾತನಾಡಬೇಕು ವಿನಾ ಸುಳ್ಳು ಸುದ್ದಿ ಹರಿಬಿಟ್ಟು ಗೆಲುವು ಕಾಣಲಿಕ್ಕೆ ಸಾಧ್ಯವಿಲ್ಲ ಎಂದರು.

   ಅಂತೆ ಕಂತೆಗಳ ಮೇಲೆ ಬಿಜೆಪಿ ಹಾಗೂ ನನ್ನ ತೇಜೋವಧೆ ಮಾಡುವವರು ಯಶಸ್ಸು ಕಾಣಲು ಸಾಧ್ಯವಿಲ್ಲ. ಲಿಂಗಾಯತರ ಬಗ್ಗೆ ಹೇಳಿದ್ದೇನೆ ಎಂಬ ಸುಳ್ಳು ಮಾಹಿತಿಯ ಬಗ್ಗೆ ಉತ್ತರಿಸಿ ಈಗಾಗಲೆ ಸೈಬರ್ ಕ್ರೈಂ ಗೆ ದೂರು ನೀಡಿದ್ದು ಸುಳ್ಳು ಸುದ್ದಿ ಹರಡಿಸುವವರನ್ನು ಹುಡುಕಿ ಸತ್ಯವನ್ನು ಹೊರತರುತ್ತೇವೆ ಎಂದರು.

   ನಾನು ಯಾವುದೆ ಜಾತಿಗೆ ಸೀಮಿತವಾದವನಲ್ಲ. ನಾನು ಹಿಂದುತ್ವದ ಆಧಾರದ ಮೇಲೆ ಇರುವವನು. ನನ್ನ ಕ್ಷೇತ್ರದಲ್ಲಿ ಲಿಂಗಾಯತರಿದ್ದು ಮನೆ ಮಗನ ತರ ನೋಡುವ ಸಂದರ್ಭದಲ್ಲಿ ಅಂತಹ ಹೇಳಿಕೆ ನೀಡಿಲ್ಲ. ಇದು ತಾಂತ್ರಿಕ ಯುಗ; ಯಾರು ಸಹಿತ ತಾವು ಆಡಿದ ಮಾತಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಯುಗದಲ್ಲಿ ಟೂಲ್ ಕಿಟ್ ಬಳಸುವ ಮಟ್ಟಕ್ಕೆ ಇಳಿದಿರುವ ವಿರೋಧಿಗಳ ಪ್ರಯತ್ನ ಫಲಿಸದು ಎಂದು ತಿಳಿಸಿದರು.

     ಧಾರವಾಡ ಜಿಲ್ಲೆಗೆ ಐಐಟಿ, ಹುಬ್ಬಳ್ಳಿ-ಧಾರವಾಡ 6ಪಥದ ಹೆದ್ದಾರಿ ನಿರ್ಮಾಣ ಸ್ಮಾರ್ಟ್ ಸಿಟಿ ಸರಕಾರಿ ಆಸ್ಪತ್ರೆ ನಿರ್ಮಾಣ, ವಿಶ್ವದಲ್ಲಿ ಅತಿ ದೊಡ್ಡ ರೈಲ್ವೆ ಪ್ಲಾಟ್ ಫಾರ್ಮ್ ಹೊಂದಿದ ಹುಬ್ಬಳ್ಳಿ ಸಿದ್ದಾರೂಢ ರೈಲ್ವೆ ನಿಲ್ದಾಣದ ಸಮರ್ಪಣೆ ಕಾರ್ಯ ನಡೆದಿರುವುದು ಇನ್ನು ಹತ್ತು ಹಲವಾರು ಯೋಜನೆಗಳ ಮೂಲಕ ಧಾರವಾಡ ಜಿಲ್ಲೆಯ ಅಭಿವೃದ್ಧಿ ನಡೆಯಲಿದೆ. ಕಳಸಾ ಬಂಡೂರಿ ಯೊಜನೆಯ ಅನುಷ್ಠಾನಕ್ಕೆ ಬದ್ದತೆ ತೋರಿರುವ ಬಿಜೆಪಿ ಬರುವ ದಿನಗಳಲ್ಲಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಸಚಿವ ಸಿ.ಸಿ.ಪಾಟೀಲ, ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಯಾತ್ರೆಯ ಸಂಚಾಲಕ ಅರುಣ ಶಾಹಾಪೂರ, ಸಹ ಸಂಚಾಲಕ ವೀವೆಕಾನಂದ ಡಬ್ಬಿ, ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ, ಮುಖಂಡರಾದ ಲಿಂಗರಾಜ ಪಾಟೀಲ, ಎಂ.ಆರ್ ಪಾಟೀಲ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap