ಹುಬ್ಬಳ್ಳಿ ಕಪ್ಪು ಬಟ್ಟೆ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತನ ಬಂಧನ

ಹುಬ್ಬಳ್ಳಿ:

     ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರನ್ನು ಹಳೇ ಹುಬ್ಬಳ್ಳಿಯ ಇನ್ಸ್ಪೆಕ್ಟರ್ ಸುರೇಶ ಎಳ್ಳೂರ ಬಂಧಿಸಿದ್ದಾರೆ.

      ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿರುವ ನಡೆಯನ್ನು ಖಂಡಿಸಿ, ಆಕ್ರೋಷಗೊಂಡ ಬಿಜೆಪಿ ಕಾರ್ಯಕರ್ತರಾದ ಜಗದೀಶ ಕಂಬಳಿ ಮತ್ತು ಮಂಜುನಾಥ ಕಲಾಲ್, ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶಿಸಲು ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ವೃತ್ತದ ಬಳಿ ಹೊಂಚು ಹಾಕಿ ನಿಂತಿದ್ದರು.

   ಸಿಎಂ ವಾಹನ ಆಗಮಿಸುತ್ತಿದ್ದಂತೆಯೇ ತಮ್ಮ ಅಂಗಿಯಲ್ಲಿ ಅಡಗಿಸಿಟ್ಟುಕೊಂಡಿದ್ದ ಕಪ್ಪು ಬಟ್ಟೆಯನ್ನು ಪ್ರದರ್ಶಿಸಿದರು, ತಕ್ಷಣ ಜಾಗೃತರಾದ ಪೊಲೀಸರು ಅವರಿಂದ ಕಪ್ಪು ಬಟ್ಟೆನ್ನು ಕಸಿದುಕೊಂಡು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

Recent Articles

spot_img

Related Stories

Copy link