ಮಾನವೀಯತೆ ಮರೆತ ಬಿಜೆಪಿ ಶಾಸಕನ ಬೆಂಬಲಿಗ….!

ಭೂಪಾಲ್: 

      ಆದಿವಾಸಿ ಬುಡಕಟ್ಟು ಯುವಕನ ಮುಖದ ಮೇಲೆ ಬಿಜೆಪಿ ಶಾಸಕನ ಬೆಂಬಲಿಗನೊಬ್ಬ ಮೂತ್ರ ವಿಸರ್ಜನೆ  ಮಾಡಿರುವ ಅಮಾನುಷ ಘಟನೆ ಮಧ್ಯಪ್ರದೇಶ ಸಿಧಿ ಜಿಲ್ಲೆಯಲ್ಲಿ ನಡೆದಿದೆ. ಮಧ್ಯಪ್ರದೇಶ ರಾಜ್ಯದಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಅಮಾನವೀಯ ಘಟನೆಯಾಗಿದ್ದು, ಅದರ ವಿಡಿಯೋ ವೈರಲ್ ಆಗಿದೆ.

     ವಿಡಿಯೋ ವೈರಲ್ ಆದ ನಂತರ ಮಂಗಳವಾರ ಸಿಧಿ ಜಿಲ್ಲೆಯಲ್ಲಿ ಆರೋಪಿಗಳ ವಿರುದ್ಧ 294 ಮತ್ತು 504 IPC ಹಾಗೂ SC/ST (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. .

     ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ‘ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. ಆರೋಪಿ ಬಿಜೆಪಿಗೆ ಸೇರಿದವನೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಪರಾಧಿಗಳಿಗೆ ಜಾತಿ, ಧರ್ಮ ಮತ್ತು ಪಕ್ಷವಿಲ್ಲ. ಅಪರಾಧಿ ಒಬ್ಬ ಅಪರಾಧಿ ಮಾತ್ರವಾಗಿದ್ದು, ತಪ್ಪಿತಸ್ಥನನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ’ ಎಂದು ಹೇಳಿದರು.

     ಸಾಮಾಜಿಕ ಮಾಧ್ಯಮದಲ್ಲಿ “ನಕಲಿ” ವೀಡಿಯೊವನ್ನು ಹಂಚಿಕೊಂಡ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಸಂತ್ರಸ್ತ ತಿಳಿಸಿದ್ದಾರೆ. ಈ ವಿಡಿಯೋವನ್ನು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಗ್ರಾಮಸ್ಥರು ಈಗ ತಮಗೆ ಬೆದರಿಕೆ ಕರೆ ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

 

    ಆರೋಪಿಯ ರಕ್ಷಣೆಗಾಗಿ, ಪ್ರವೇಶ್ ಶುಕ್ಲಾ ಅವರ ಚಿಕ್ಕಪ್ಪ ಜುಲೈ 1 ರಂದು ತಮ್ಮ ಸೋದರಳಿಯ ಜೂನ್ 29 ರಂದು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ಪೋಲಿಸ್ ದೂರು ದಾಖಲಿಸಿದ್ದಾರೆ ಮತ್ತು “ಕೆಲವರು ಮಾಡಿದ ನಕಲಿ ವೀಡಿಯೊದಿಂದಾಗಿ ಅವರು ಕೆಲವು ತೀವ್ರ ಕ್ರಮಗಳನ್ನು ತೆಗೆದುಕೊಳ್ಳಬಹುದೆಂದು ಕುಟುಂಬವು ಭಯಪಡುತ್ತಿದೆ ಎಂದು ಹೇಳಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap