ಮಧುಗಿರಿ :
ತಾಲೂಕಿನ ಐ ಡಿ ಹಳ್ಳಿ ಹೋಬಳಿಯ ಕಾಮೇಗೌಡನಹಳ್ಳಿ ಹಾಗೂ ಪುಲಮಾಚಿ ಗ್ರಾಮದ ನಡುವಿನ ರಸ್ತೆಯಲ್ಲಿ ಕರಡಿ ಯೊಂದು ಸೋಮವಾರ ಬೆಳಗ್ಗೆ ಪ್ರತ್ಯಕ್ಷವಾಗಿದೆ.
ಗ್ರಾಮದ ಶ್ರೀರಾಮಪ್ಪ ಎನ್ನುವವರ ಮನೆಯ ಮುಂಭಾಗದಲ್ಲಿ ಕರಡಿಯು ಹಾದು ಹೋಗುತ್ತಿದ್ದಾಗ ಶ್ರೀರಾಮಪ್ಪ ಮನೆಯಲ್ಲಿರುವವರು ಕರಡಿ ಕಂಡು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಕರಡಿಯಿಂದಾಗಿ ಯಾವುದೇ ಪ್ರಾಣಾಪಾಯಗಳು ಸಂಭಂವಿಸಿಲ್ಲ ಕರಡಿಯು ರಸ್ತೆಯಲ್ಲಿ ಓಡಿ ಹೋಗಿ ನಂತರ ಸಮೀಪದ ಬೆಟ್ಟದ ಕಡೆ ಹೋಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಐಡಿ ಹಳ್ಳಿ ಹಾಗೂ ಮಿಡಿಗೇಶಿ ಹೋಬಳಿಗಳಲ್ಲಿ ಪ್ರತಿದಿನ ಕರಡಿಗಳ ದರ್ಶನ ಸಾಮಾನ್ಯವಾಗಿದ್ದು ಕರಡಿಗಳು ಆಹಾರ ಹರಸಿ ಜಮೀನುಗಳು ಹಾಗೂ ಜನ ವಸತಿ ಕೇಂದ್ರಗಳ ಸುತ್ತ ಮುತ್ತಾ ತಿರುಗಾಡುತ್ತಿರುವುದು ಆಗಾಗ್ಗೆ ಕಂಡು ಬರುತ್ತಿದ್ದು ಅವುಗಳಿಂದ ನಮ್ಮ ಜನರಿಗೆ ಯಾವುದೇ ರೀತಿ ತೊಂದರೆಯಾಗಿಲ್ಲ ಎಂದು ಗ್ರಾಮಸ್ಥ ಹಾಗೂ ಸ್ಟುಡಿಯೋ ಮಾಲೀಕ ಪುಲಮಾಚಿಯ ಚಿತ್ತಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿC