ಏರ್ ಇಂಡಿಯಾ ಅಪಘಾತ; ಬ್ಲಾಕ್ ಬಾಕ್ಸ್ ಡೇಟಾ ಡೌನ್‌ಲೋಡ್‌, ಮುಂದುವರಿದ ತನಿಖೆ

ನವದೆಹಲಿ:

     ಜೂನ್ 12 ರಂದು ನಡೆದ ಏರ್ ಇಂಡಿಯಾ ವಿಮಾನ  ಅಪಘಾತದಲ್ಲಿ ಪತ್ತೆಯಾಗಿರುವ ಬ್ಲಾಕ್‌ ಬಾಕ್ಸ್‌ನಿಂದ ಮಾಹಿತಿಯನ್ನು ಯಶಸ್ವಿಯಾಗಿ ಡೌನ್‌ಲೋಡ್ ಮಾಡಿಕೊಳ್ಳಲಾಗಿದ್ದು, ಅದನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಸರ್ಕಾರ ಗುರುವಾರ ಮಧ್ಯಾಹ್ನ ತಿಳಿಸಿದೆ. ಅಪಘಾತದಲ್ಲಿ ಬ್ಲಾಕ್‌ ಬಾಕ್ಸ್‌ ಫ್ಲೈಟ್ ಡೇಟಾ ರೆಕಾರ್ಡರ್, ಅಥವಾ ಎಫ್‌ಡಿಆರ್, ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್, ಅಥವಾ ಸಿವಿಆರ್ – ಹಾನಿಗೊಳಗಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ ಕ್ರ್ಯಾಶ್ ಪ್ರೊಟೆಕ್ಷನ್ ಮಾಡ್ಯೂಲ್ ಅಥವಾ ಸಿಪಿಎಂ ಮತ್ತು ಮೆಮೊರಿ ಮಾಡ್ಯೂಲ್ ಅನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ ಮತ್ತು ಎಲ್ಲಾ ಡೇಟಾವನ್ನು ಡೌನ್‌ಲೋಡ್ ಮಾಡಿದೆ ಎಂದು ತಿಳಿದು ಬಂದಿದೆ.

   ವಿಮಾನ ಪತನಗೊಂಡ ಹಾಸ್ಟೆಲ್‌ನ ಮೇಲ್ಛಾವಣಿಯಲ್ಲಿ ಒಂದು ಪೆಟ್ಟಿಗೆ ಮತ್ತು ಅವಶೇಷಗಳಿಂದ ಇನ್ನೊಂದು ಪೆಟ್ಟಿಗೆ ಪತ್ತೆಯಾಗಿದ್ದು, ಎರಡೂ ಪೆಟ್ಟಿಗೆಗಳನ್ನು ಮಂಗಳವಾರ ದೆಹಲಿಯ ಎಎಐಬಿ ಪ್ರಯೋಗಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಮೊದಲ ಕಪ್ಪು ಪೆಟ್ಟಿಗೆ ಮಧ್ಯಾಹ್ನ 2 ಗಂಟೆಗೆ AAIB ಪ್ರಯೋಗಾಲಯವನ್ನು ತಲುಪಿತು. ಎರಡನೆಯದು ಸಂಜೆ 5.15 ಕ್ಕೆ ತಲುಪಿತು. ದತ್ತಾಂಶ ಹೊರತೆಗೆಯುವಿಕೆ ಅದೇ ದಿನ ಪ್ರಾರಂಭವಾಯಿತು ಮತ್ತು ಬುಧವಾರದ ವೇಳೆಗೆ ಪ್ರಕ್ರಿಯೆಯು ಪೂರ್ಣಗೊಂಡಿತು.

    CVR ದತ್ತಾಂಶವು ಕಾಕ್‌ಪಿಟ್ ಸಂಭಾಷಣೆಗಳು, ಸಿಬ್ಬಂದಿ ಪ್ರತಿಕ್ರಿಯೆಗಳು ಮತ್ತು ಸುತ್ತುವರಿದ ಶಬ್ದಗಳನ್ನು ಪರಿಶೀಲನೆ ಮಾಡಲಿದ್ದಾರೆ. ಸಿವಿಆರ್ ಮತ್ತು ಎಫ್‌ಡಿಆರ್ ದತ್ತಾಂಶಗಳ ವಿಶ್ಲೇಷಣೆ ನಡೆಯುತ್ತಿದೆ. ಹೆಚ್ಚುವರಿಯಾಗಿ, ಮುಂಭಾಗದ ಕಪ್ಪು ಪೆಟ್ಟಿಗೆಯಿಂದ ಕ್ರ್ಯಾಶ್ ಪ್ರೊಟೆಕ್ಷನ್ ಮಾಡ್ಯೂಲ್ (CPM) ಅನ್ನು ಸುರಕ್ಷಿತವಾಗಿ ಹಿಂಪಡೆಯಲಾಯಿತು, ಮತ್ತು ಜೂನ್ 25 ರಂದು, ಮೆಮೊರಿ ಮಾಡ್ಯೂಲ್ ಅನ್ನು ಯಶಸ್ವಿಯಾಗಿ ಪರಿಶೀಲನೆ ಮಾಡಲಾಗಿದೆ. 

   ಬುಧವಾರ, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು AI 171 ವಿಮಾನದ ಕಪ್ಪು ಪೆಟ್ಟಿಗೆ ಇನ್ನೂ ಭಾರತದಲ್ಲಿದೆ ಎಂದು ದೃಢಪಡಿಸಿದರು ಮತ್ತು AAIB ಇದನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದರು. ಅಪಘಾತದ ನಂತರ ಸಂಭವಿಸಿದ ಬೆಂಕಿಯಿಂದಾಗಿ ರೆಕಾರ್ಡರ್‌ಗೆ ಭಾರೀ ಬಾಹ್ಯ ಹಾನಿಯಾಗಿದ್ದು, ದತ್ತಾಂಶ ಮರುಪಡೆಯುವಿಕೆಗಾಗಿ ಭಾರತವು ಕಪ್ಪು ಪೆಟ್ಟಿಗೆಯನ್ನು ಅಮೆರಿಕಕ್ಕೆ ಕಳುಹಿಸುವ ಸಾಧ್ಯತೆಯಿದೆ ಎಂದು ವರದಿಗಳು ಬಂದ ಅವರು ಈ ಹೇಳಿಕೆಯನ್ನು ನೀಡಿದ್ದರು.

Recent Articles

spot_img

Related Stories

Share via
Copy link