ಟೋಕಿಯೊ
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಭಾಷಣ ಮಾಡುತ್ತಿದ್ದ ವೇಳೆ ಜಪಾನ್‌ನ ವಕಯಾಮಾ ನಗರದಲ್ಲಿ ಸ್ಫೋಟ ಸಂಭವಿಸಿರುವ ಘಟನೆ ವರದಿಯಾಗಿದೆ. ನಗರದ ಹೊರಾಂಗಣದಲ್ಲಿ ಭಾಷಣ ಮಾಡುತ್ತಿದ್ದ ವೇಳೆ, ಸ್ಮೋಕ್ ಬಾಂಬ್ ತರಹದ ವಸ್ತುವನ್ನು ಎಸೆಯಲಾಗಿದೆ ಎಂದು ಜಪಾನಿನ ಮಾಧ್ಯಮಗಳು ವರದಿ ಮಾಡಿವೆ.
ಸ್ಫೋಟದ ಶಬ್ದ ಕೇಳಿದ ನಂತರ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರನ್ನು ವಕಯಾಮಾ ಬಂದರಿನಿಂದ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಕ್ಯೋಡೋ ಸುದ್ದಿ ಸಂಸ್ಥೆ ಸೇರಿದಂತೆ ಹಲವಾರು ಮಾಧ್ಯಮಗಳ ವರದಿಗಳು ಸ್ಪಷ್ಟವಾಗಿ “ಸ್ಮೋಕ್ ಬಾಂಬ್” ಅನ್ನು ಎಸೆಯಲಾಗಿದೆ ಎಂದು ಹೇಳಿವೆ .ಆದರೆ ಘಟನಾ ಸ್ಥಳದಲ್ಲಿ ಗಾಯಾಳುಗಳು ಅಥವಾ ಹಾನಿಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.