ಜಪಾನ್‌ : ಪ್ರಧಾನಿ ಭಅಷಣದ ವೇಳೆ ಬಾಂಬ್‌ ಸ್ಪೋಟ…!

ಟೋಕಿಯೊ

       ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಭಾಷಣ ಮಾಡುತ್ತಿದ್ದ ವೇಳೆ ಜಪಾನ್‌ನ ವಕಯಾಮಾ ನಗರದಲ್ಲಿ ಸ್ಫೋಟ ಸಂಭವಿಸಿರುವ ಘಟನೆ ವರದಿಯಾಗಿದೆ. ನಗರದ ಹೊರಾಂಗಣದಲ್ಲಿ ಭಾಷಣ ಮಾಡುತ್ತಿದ್ದ ವೇಳೆ, ಸ್ಮೋಕ್ ಬಾಂಬ್ ತರಹದ ವಸ್ತುವನ್ನು ಎಸೆಯಲಾಗಿದೆ ಎಂದು ಜಪಾನಿನ ಮಾಧ್ಯಮಗಳು ವರದಿ ಮಾಡಿವೆ.

     ಸ್ಫೋಟದ ಶಬ್ದ ಕೇಳಿದ ನಂತರ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರನ್ನು ವಕಯಾಮಾ ಬಂದರಿನಿಂದ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಕ್ಯೋಡೋ ಸುದ್ದಿ ಸಂಸ್ಥೆ ಸೇರಿದಂತೆ ಹಲವಾರು ಮಾಧ್ಯಮಗಳ ವರದಿಗಳು ಸ್ಪಷ್ಟವಾಗಿ “ಸ್ಮೋಕ್ ಬಾಂಬ್” ಅನ್ನು ಎಸೆಯಲಾಗಿದೆ ಎಂದು ಹೇಳಿವೆ .ಆದರೆ ಘಟನಾ ಸ್ಥಳದಲ್ಲಿ ಗಾಯಾಳುಗಳು ಅಥವಾ ಹಾನಿಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.
      ಪಶ್ಚಿಮ ಜಪಾನ್‌ನ ವಕಯಾಮಾದಲ್ಲಿ ಪ್ರಧಾನಿ ಫ್ಯೂಮಿಯೊ ಕಿಶಿದಾ ಭಾಷಣ ಮಾಡಲು ಬಂದಿದ್ದ ಸ್ಥಳದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಪ್ರಸಾರಕ ಎನ್‌ಎಚ್‌ಕೆ ಮತ್ತು ಇತರ ಮಾಧ್ಯಮಗಳು ವರದಿ ಮಾಡಿವೆ. ಘಟನಾ ಸ್ಥಳದಿಂದ ಪೊಲಿಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಿವೆ. ಆದರೆ, ಸ್ಥಳೀಯ ಪೊಲೀಸರು ಬಂಧನದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

    ಉತ್ತರ ಸಪ್ಪೊರೊ ಮತ್ತು ನಾಗಾನೊದ ಕರುಯಿಜಾವಾ ನಗರದಲ್ಲಿ ಮತ್ತು ಹಿರೋಷಿಮಾದಲ್ಲಿ ಜಿ7 ದೇಶಗಳ ಸಚಿವರ ಸಮಾವೇಶವನ್ನು ಜಪಾನ್ ಮೇ ತಿಂಗಳಲ್ಲಿ ಆಯೋಜಿಸಿದೆ. ಸಮಾವೇಶಕ್ಕೆ ಒಂದು ತಿಂಗಳಷ್ಟೇ ಬಾಕಿ ಇರುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap