ಬೆಂಗಳೂರು
ಎಕ್ಸ್‌ಪ್ರೆಸ್ ವೇ ನಿರ್ಮಾಣ ಆದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಇನ್ನು ಈ ಹೆದ್ದಾರಿಯಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಹದ್ದಾರಿ ಪ್ರಾಧಿಕಾರ ಮುಂದಾಗಿದೆ. ಹಾಗಾದರೆ ಮಾಹಿತಿ ಇಲ್ಲಿ ನೀಡಲಾಗಿದೆ ಗಮನಿಸಿ.
ಎಲ್ಲಿಯೂ ಕೂಡ ಸರ್ವಿಸ್ ರಸ್ತೆಯೇ ಇಲ್ಲ. ಇದರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಈ ಸಮಸ್ಯೆಗಳನ್ನು ನಿವಾರಿಸಲು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಯ ಒಂದು ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ. ಮಾರ್ಗದುದ್ದಕ್ಕೂ ಹಲವು ಪಟ್ಟಣಗಳಿಗೆ ಸಂಪರ್ಕ ಹೆಚ್ಚಿಸಲು ಮತ್ತು ಎಕ್ಸ್‌ಪ್ರೆಸ್‌ವೇಗೆ ಪ್ರವೇಶಿಸುವ ಅಥವಾ ನಿರ್ಗಮಿಸುವ ವಾಹನಗಳಿಗೆ ಸುಗಮ ಪ್ರವೇಶವನ್ನು ಒದಗಿಸುವ ಗುರಿಯನ್ನು ಈ ಯೋಜನೆಯ ಉದ್ದೇಶವಾಗಿದೆ.
118 ಕಿಲೋ ಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇ ಅನ್ನು ಪ್ರಯಾಣದ ಸಮಯ ಕಡಿಮೆ ಮಾಡಲು ಮತ್ತು ಬೆಂಗಳೂರು-ಮೈಸೂರು ನಡುವಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ನಿರ್ಮಾಣ ಮಾಡಲಾಗಿದೆ. ಆದರೆ, ಈ ಹೆದ್ದಾರಿಗೆ ಸಂಪೂರ್ಣ ಸರ್ವೀಸ್ ರಸ್ತೆಯೇ ಇಲ್ಲ. ಇದು ರೈಲು ಮಾರ್ಗದಂತಹ ಅಡೆತಡೆಗಳಿಂದ ಕೂಡಿದ್ದು, ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ.
ಇದೀಗ ವಾಹನಗಳು ಬಿಡದಿ, ಚನ್ನಪಟ್ಟಣ, ಮತ್ತು ಮದ್ದೂರಿನಂತಹ ಪಟ್ಟಣಗಳಿಗೆ ಭೇಟಿ ನೀಡಿ, ಅಲ್ಲಿಂದ ಹೆದ್ದಾರಿಯನ್ನು ಪ್ರವೇಶಿಸಲು ಅಥವಾ ನಿರ್ಗಮಿಸಲು ಮತ್ತು ಈ ಪ್ರದೇಶಗಳಿಗೆ ಆಗಮಿಸಬೇಕೆಂದರೆ ಸುತ್ತಾಡಿಕೊಂಡು ಬರಬೇಕಾಗುತ್ತದೆ. ಇದರಿಂದ ವಾಹನ ಸವಾರರಿಗೆ ತುಂಬಾ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಆದ್ದರಿಂದ ಹೊಸ ಯೋಜನೆಯಡಿ ಎಕ್ಸ್‌ಪ್ರೆಸ್ ವೇ ಉದ್ದಕ್ಕೂ ಪೂರ್ಣ ಪ್ರಮಾಣದ ಸರ್ವಿಸ್ ರಸ್ತೆಯನ್ನು ನಿರ್ಮಿಸಲಾಗುವುದು. ಇದರಿಂದ ವಾಹನ ಸವಾರರು ಸುತ್ತಾಡಿಕೊಂಡು ಬರುವುದು ತಪ್ಪಿದಂತಾಗಲಿದೆ. ಇನ್ನು ರೈಲ್ವೆ ಮಾರ್ಗಗಳು ಮತ್ತು ಗುಡ್ಡಗಾಡು ಪ್ರದೇಶದಂತಹ ಅಡೆತಡೆಗಳನ್ನು ತಪ್ಪಿಸುವ ಸಲುವಾಗಿ ಅಂಡರ್‌ಪಾಸ್‌ಗಳು ಮತ್ತು ಮೇಲ್ಸೇತುವೆಗಳಂತಹ ಹೆಚ್ಚುವರಿ ಮೂಲಸೌಕರ್ಯಕ್ಕಾಗಿ ಸ್ಥಳಗಳನ್ನು ಗುರುತಿಸಲು ಈಗಾಗಲೇ ಸಮೀಕ್ಷೆಗಳನ್ನು ನಡೆಸಲಾಗಿದೆ.