ಮೆಟ್ರೋ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕ: ದಂಡ ವಿಧಿಸಿದ ಬಿಎಂಆರ್​ಸಿಎಲ್​​

ಬೆಂಗಳೂರು

    ಇತ್ತೀಚೆಗೆ ಓರ್ವ ಯುವತಿ ಮೆಟ್ರೋದಲ್ಲೇ  ಕುಳಿತು ಆಹಾರ ಸೇವಿಸಿದ್ದ ಘಟನೆ ನಡೆದಿತ್ತು. ಬಳಿಕ ಬೆಂಗಳೂರು ಮೆಟ್ರೋ ರೈಲು ನಿಗಮ ಆ ಯುವತಿಗೆ 500 ರೂ ದಂಡ ವಿಧಿಸಿತ್ತು. ಅದೇ ರೀತಿಯಾಗಿ ಓರ್ವ ಪ್ರಯಾಣಿಕ ಮೆಟ್ರೋದಲ್ಲಿ ಕುಳಿತು ವಿಮಲ್‌ ಪಾನ್‌ ಮಸಾಲ ತಿನ್ನುತ್ತಿದ್ದ ವಿಡಿಯೋವೊಂದು ವೈರಲ್​​ ಆಗಿತ್ತು. ಸಹ ಪ್ರಯಾಣಿಕರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೆಟ್ರೋದಲ್ಲಿ ಈ ರೀತಿ ಮಾಡುವುದು ತಪ್ಪು ಎಂದೂ ಗೊತ್ತಿದ್ದರು ಕೆಲವರು ಹುಚ್ಚಾಟ ಮೆರೆಯುತ್ತಿದ್ದಾರೆ. ಇದೀಗ ಮತ್ತೊಂದು ಘಟನೆ ನಡೆದಿದೆ. ಮೆಟ್ರೊ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ BMRCL ದಂಡ ವಿಧಿಸಿದೆ.

    ಮೇ 2 2025ರ ಸಂಜೆ ಸುಮಾರು 6:30ಕ್ಕೆ ಗ್ರೀನ್ ಲೈನ್‌ ಕನಕಪುರ ರಸ್ತೆಯಲ್ಲಿರುವ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದ ಪ್ಲಾಟ್ ಫಾರ್ಮ್ 01ರ ಲಿಫ್ಟ್ ಬಳಿಯಲ್ಲಿ ಪಾನ್ ಮಸಾಲಾ ಉಗುಳುತ್ತಿದ್ದ ಪ್ರಯಾಣಿಕನನ್ನು ಪತ್ತೆ ಹಚ್ಚಿ ಮೆಟ್ರೋ ಅಧಿಕಾರಿಗಳು ದಂಡ ವಿಧಿಸಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.

    ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸದಂಚುಗಳನ್ನು ಎಸೆಯುವುದು ಪರಿಸರ ಹಾಳಾಗುವುದಲ್ಲದೆ, ಇತರೆ ಪ್ರಯಾಣಿಕರ ಆರೋಗ್ಯಕ್ಕೂ ಅಪಾಯವನ್ನು ಉಂಟುಮಾಡುತ್ತದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸ್ವಚ್ಛ, ಆರೋಗ್ಯಕರ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಾಗಿ ಕಟಿಬದ್ಧವಾಗಿದೆ. 

    ಸ್ವಚ್ಛತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಪ್ರಯಾಣಿಕರು ಸಹಕರಿಸಿ, ಇಂತಹ ಘಟನೆಗಳು ಸಂಭವಿಸಿದರೆ ತಕ್ಷಣವೇ ಮೆಟ್ರೋ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಬಿಎಂಆರ್​​ಸಿಎಲ್​ ಮನವಿ ಮಾಡಿದೆ. 

    ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಮಾದಾವರ ಮೆಟ್ರೋ ನಿಲ್ದಾಣದಿಂದ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುವಾಗ ಓರ್ವ ಯುವತಿ ಊಟ ಮಾಡಿದ್ದಕ್ಕಾಗಿ 500 ರೂ ದಂಡ ತೆತ್ತಿದ್ದಳು. ಯುವತಿ ಮೆಟ್ರೋದಲ್ಲೇ ಕುಳಿತು ಊಟ ಮಾಡುತ್ತಿದ್ದ ವಿಡಿಯೋ ಕೂಡ ವೈರಲ್​ ಆಗಿತ್ತು.

Recent Articles

spot_img

Related Stories

Share via
Copy link