ಮೆಟ್ರೋ ಬಳಸುವವರಿಗೆ BMRCLನಿಂದ ಗುಡ್‌ ನ್ಯೂಸ್‌…..!

ಬೆಂಗಳೂರು:

    ಮೆಜೆಸ್ಟಿಕ್‌ನಿಂದ ಗರುಡಾಚಾರ್‌ಪಾಳ್ಯ ನಡುವಿನ ಜನ ದಟ್ಟನೆಯನ್ನು ನಿಯಂತ್ರಿಸುವ ಸಲುವಾಗಿ ನಮ್ಮ ಮೆಟ್ರೋ ಈ ಭಾಗದಲ್ಲಿ 3 ನಿಮಿಷಕ್ಕೊಮ್ಮೆ ಮೆಟ್ರೋ ಸೇವೆ ಒದಗಿಸಲು ಬಿಎಂಆರ್ ಸಿಎಲ್ ಮುಂದಾಗಿದೆ.

    ಹೆಚ್ಚು ಜನ ದಟ್ಟನೆ ಇರುವ ಪೀಕ್ ಆವರ್​ಗಳಲ್ಲಿ ಪ್ರತಿ‌ ಮೂರು ನಿಮಿಷಕ್ಕೆ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ. ಸೋಮವಾರದಿಂದ ಬೆಳಿಗ್ಗೆ 8.45 ರಿಂದ 10.20ರವರೆಗೆ ಮೆಜೆಸ್ಟಿಕ್ ಮತ್ತು ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಹೆಚ್ಚುವರಿ ಮೆಟ್ರೋ ಸೇವೆಯನ್ನು ಆರಂಭಿಸಲಿದೆ. ಈ ಮಾರ್ಗದಲ್ಲಿ 8.45 ರಿಂದ 10.20 ರವರೆಗೆ ಇನ್ಮುಂದೆ ಮೂರು ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಓಡಾಟ ನಡೆಸಲಿವೆ. 

   ಪೀಕ್ ಆವರ್​ಗಳಲ್ಲಿ ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲು ಹೆಚ್ಚುವರಿ ರೈಲು ಸೇವೆ ಒದಗಿಸಲು ನಮ್ಮ‌ ಮೆಟ್ರೋ ಮುಂದಾಗಿದೆ. ಬೈಯಪ್ಪನಹಳ್ಳಿಯಿಂದ‌ ಕೆಆರ್​ ಪುರಗೆ ಮೆಟ್ರೋ ಸಂಪರ್ಕವಾದ ಮೇಲೆ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಹೆಚ್ಚುವರಿ ರೈಲನ್ನು ಓಡಿಸಿ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ​ಗೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರು.

   ಇನ್ನು ಶನಿವಾರ, ಭಾನುವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ ಇನ್ನುಳಿದ ದಿನಗಳಲ್ಲಿ ಈ ಸೇವೆ ಇರಲಿದೆ. ಇದರಿಂದ ಟ್ರಿನಿಟಿ, ಇಂದಿರಾನಗರ, ಬೆನ್ನಿಗಾನಹಳ್ಳಿ ಮತ್ತು ಕೆಆರ್​ಪುರ ಕಡೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದೇ ವೇಳೆ ಇಂಟರ್‌ಸಿಟಿ ಬಸ್‌ಗಳ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಿಗ್ಗೆ 5 ಗಂಟೆಯಿಂದ ರೈಲು ಸೇವೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಎಲ್ಲಾ ದಿಕ್ಕುಗಳಿಗೆ ಮೊದಲ ರೈಲಿನ‌ ಸೇವೆ 5 ಗಂಟೆಗೆ ಆರಂಭವಾಗಲಿದ್ದು, ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ, 5.00 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ.

Recent Articles

spot_img

Related Stories

Share via
Copy link
Powered by Social Snap