ಬೆಂಗಳೂರು
ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ಮೆಟ್ರೋ ಜಾಲವನ್ನು ವಿಸ್ತರಣೆ ಆಗುತ್ತಿದೆ. ಈ ಸಲುವಾಗಿ ಹಲವೆಡೆ ಭೂಗತ ಮಾರ್ಗ ನಿರ್ಮಾಣ ಕಾರ್ಯ ನಡೆಸುತ್ತಿರುವ BMRCL ಇದೇ ಮೊದಲ ಬಾರಿಗೆ ತನ್ನ ಕೆಲಸಕ್ಕೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) 21 ಕಿಲೋ ಮೀಟರ್ ಉದ್ದದ ಕಾಳೇನಅಗ್ರಹ-ನಾಗವಾರ ಮಾರ್ಗದ ಸುರಂಗ ಕಾರ್ಯದಲ್ಲಿ ತೊಡಗಿದೆ. ಇಲ್ಲಿ ಸುರಂಗದ ಕೆಲಸಕ್ಕಾಗಿ ‘ಬಾಕ್ಸ್ ಪುಶಿಂಗ್ ತಂತ್ರಜ್ಞಾನ’ ವನ್ನು ಇದೇ ಮೊದಲ ಬಾರಿಗೆ ಬಳಸಿ ಯಶಸ್ವಿಯಾಗಿದ್ದೇವೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಸುಮಾರು 77ಮೀಟರ್ ಉದ್ದದ ಹೊರ ವರ್ತುಲ ರಸ್ತೆ (ORR) ಕೆಳಗೆ ಮೆಟ್ರೋ ಮಾರ್ಗಕ್ಕಾಗಿ ಸುರಂಗ ಕೊರೆಯಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಈ ಸುರಂಗ ಕೆಲಸಕ್ಕೆ ‘ಬಾಕ್ಸ್ ಪುಶಿಂಗ್ ತಂತ್ರಜ್ಞಾನ’ವನ್ನು ಬಳಸಲಾಗಿದೆ.
ನಾಗವಾರ ಅಂಡರ್‌ಗ್ರೌಂಡ್ ನಿಲ್ದಾಣದ ದಕ್ಷಿಣ ಭಾಗದಲ್ಲಿ ಸರ್ವಿಸ್ ರಸ್ತೆ ಮತ್ತು ORR ನ ಮೇಲ್ಸೇತುವೆಯ ಕೆಳಗೆ 77ಮೀಟರ್ ಸುರಂಗವನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ. ‘ಬಾಕ್ಸ್ ಪುಶಿಂಗ್ ತಂತ್ರಜ್ಞಾನ’ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.
ಈವರೆಗೆ ಮೆಟ್ರೋ ಸುರಂಗವನ್ನು ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಮೂಲಕ ಕೊರೆಯಲಾಗುತ್ತಿತ್ತು. ಇದು ಗೋಲಾಕಾರದಲ್ಲಿ ಕಂಡು ಬಂದರೆ, ಸದ್ಯದ ‘ಬಾಕ್ಸ್ ಪುಶಿಂಗ್ ತಂತ್ರಜ್ಞಾನ’ ದಿಂದ ನಡೆದ ಸುರಂಗವು ಆಯತಾಕಾರದಲ್ಲಿ, ಬಾಕ್ಸ್ ರೀತಿಯಲ್ಲಿ ಕಾಣಿಸುತ್ತದೆ. ಇದೊಂದು ಹೊಸ ಪ್ರಯತ್ನ ಎಂದು ಬಿಎಂಆರ್‌ಸಿಎಲ್ ಹೇಳಿಕೊಂಡಿದೆ.
ಮೆಟ್ರೋ ಪಿಂಕ್ ಲೈನ್ ಮಾರ್ಗವು ಸಿಲ್‌ಬೋರ್ಡ್ ಜಂಕ್ಷನ್-ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗದ ಒಂದು ಬದಿ ನಾಗವಾರದಿಂದ ಆರಂಭವಾಗುತ್ತದೆ. ಅಲ್ಲಿಂದ ಕಾಳೇನ ಅಗ್ರಹಾರದವರೆಗೆ ಪಿಂಕ್ ಲೈನ್ 21 ಕಿಮೀ ಇದೆ. ಸದ್ಯ ಭೂಗತ ಕಾರ್ಯ, ಸಿವಿಲ್ ಕೆಲಸಗಳು ಒಂದೊಂದಾಗೆ ಪೂರ್ಣಗೊಳ್ಳುತ್ತಿವೆ.
ಎಲ್ಲವು ಅಂದುಕೊಂಡಂತಾದರೆ ಮುಂದಿನ ವರ್ಷ 2025ರಲ್ಲಿ ಯೋಜನೆ ಪೂರ್ಣಗೊಳಿಸಲಿದ್ದೇವೆ. ಈ ಮಾರ್ಗ ಪೂರ್ಣಗೊಂಡರೆ 117 ಕಿಲೋ ಮೀಟರ್‌ಗೆ ಮೆಟ್ರೋ ಜಾಲ ವಿಸ್ತರಣೆ ಆಗಲಿದೆ. ಇದರೊಂದಿಗೆ ಸುಮಾರು ರೂ.14000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರೇಷ್ಮೆ ಮಂಡಳಿ ಮತ್ತು ಕೆಇಎ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗವನ್ನು 2026ರಲ್ಲಿ ಪೂರ್ಣಗೊಳಿಸಲು BMRCL ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ.
ನೀಲಿ ಮಾರ್ಗ ಕೆಲಸ ಮುಗಿದು ವಾಣಿಜ್ಯ ಕಾರ್ಯಾಚರಣೆ ಆರಂಭವಾದರೆ, ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ಬರೋಬ್ಬರಿ 176ಕಿಲೋ ಮೀಟರ್ ವರೆಗೆ ಸೇವೆ ನೀಡಲು ಸಿದ್ಧವಾದಂತಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ